Monday, June 8, 2026
Homeತಾಜಾ ಸುದ್ದಿಅತ್ಯಾಚಾರಕ್ಕೆ ವಿರೋಧಿಸಿದ ತಾಯಿಯನ್ನು ಕತ್ತು ಹಿಸುಕಿ‌ ಕೊಂದು ಪರಾರಿಯಾದ ಮಗ:ಮುಲ್ಕಿಯಲ್ಲೊಂದು ವಿಲಕ್ಷಣ ಘಟನೆ ಮೂರು ದಿನಗಳ...

ಅತ್ಯಾಚಾರಕ್ಕೆ ವಿರೋಧಿಸಿದ ತಾಯಿಯನ್ನು ಕತ್ತು ಹಿಸುಕಿ‌ ಕೊಂದು ಪರಾರಿಯಾದ ಮಗ:ಮುಲ್ಕಿಯಲ್ಲೊಂದು ವಿಲಕ್ಷಣ ಘಟನೆ ಮೂರು ದಿನಗಳ ಬಳಿಕ ಬೆಳಕಿಗೆ

- Advertisement -
- Advertisement -

ಮಂಗಳೂರು: ಅತ್ಯಾಚಾರಕ್ಕೆ ವಿರೋಧಿಸಿದ ತಾಯಿಯನ್ನು ಮಗನೇ ಕತ್ತು ಹಿಸುಕಿ ಹತ್ಯೆ ಮಾಡಿದ ಘಟನೆ ಮುಲ್ಕಿ ತಾಲೂಕಿನಲ್ಲಿ ನಡೆದಿದೆ.

ಮುಲ್ಕಿ ತಾಲೂಕಿನ ಕೊಂಡೇಲಾ ಗ್ರಾಮದಲ್ಲಿ ಈ ವಿಲಕ್ಷಣ ಘಟನೆ ನಡೆದಿದ್ದು, ದುರ್ಗಾ ನಗರ ನಿವಾಸಿಯಾಗಿರುವ ರತ್ನ ಶೆಟ್ಟಿ(62) ಎಂಬವರನ್ನು ಆರೋಪಿ ಪುತ್ರ ರವಿರಾಜ್ ಶೆಟ್ಟಿ ಕತ್ತು ಹಿಸುಕಿ ಕೊಂದಿರುವುದಾಗಿ ಹೇಳಲಾಗಿದೆ.

ಅಕ್ಟೋಬರ್ 26 ರಂದು ರಾತ್ರಿ ಈ ಘಟನೆ ನಡೆದಿದ್ದು, ತಾಯಿಯನ್ನು ಹತ್ಯೆ ಮಾಡಿದ ಬಳಿಕ ಪುತ್ರ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದ ಎನ್ನಲಾಗಿದೆ. ಮೂರು ದಿನಗಳ ಬಳಿಕ ಘಟನೆ ಬಹಿರಂಗವಾಗಿದ್ದು, ಆರೋಪಿ ರವಿರಾಜ್ ಶೆಟ್ಟಿಯನ್ನು ಬಜ್ಪೆ ಪೊಲೀಸರು ನಿನ್ನೆ ಸಂಜೆ ಬಂಧಿಸಿದ್ದಾರೆ. ಅತ್ಯಾಚಾರಕ್ಕೆ ವಿರೋಧಿಸಿದ್ದಕ್ಕೆ ತಾಯಿಯನ್ನು ಹತ್ಯೆ ಮಾಡಿದ್ದಾಗಿ ಆರೋಪಿ ಪುತ್ರ ರವಿರಾಜ್ ಶೆಟ್ಟಿ ಪೊಲೀಸ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಹೇಳಲಾಗಿದೆ.

- Advertisement -

Latest News

error: Content is protected !!