Wednesday, June 24, 2026
Homeಕರಾವಳಿಬಂಟ್ವಾಳ:  ವೃದ್ಧೆಯನ್ನು ಶೌಚಾಲಯದಲ್ಲಿ ಕೂಡಿ ಹಾಕಿ ಮಗ ಮತ್ತು ಸೊಸೆಯಿಂದ ಚಿತ್ರಹಿಂಸೆ:  ಅಜ್ಜಿಯನ್ನು ರಕ್ಷಿಸಿ ಆಸ್ಪತ್ರೆಗೆ...

ಬಂಟ್ವಾಳ:  ವೃದ್ಧೆಯನ್ನು ಶೌಚಾಲಯದಲ್ಲಿ ಕೂಡಿ ಹಾಕಿ ಮಗ ಮತ್ತು ಸೊಸೆಯಿಂದ ಚಿತ್ರಹಿಂಸೆ:  ಅಜ್ಜಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ ಹಿರಿಯ ನಾಗರಿಕರ ಸಮಿತಿ ಸದಸ್ಯರು

- Advertisement -
- Advertisement -

ಬಂಟ್ವಾಳ:  ವೃದ್ಧೆಯನ್ನು ಶೌಚಾಲಯದಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡುತ್ತಿದ್ದ ಮಗ ಹಾಗೂ ಸೊಸೆ ವಿರುದ್ಧ ಬಂಟ್ವಾಳ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಂಟ್ವಾಳ ತಾಲೂಕಿನ ಕಳ್ಳಿಗೆ ಎಂಬಲ್ಲಿ ಗಿರಿಜಾ(70) ಎಂಬ ವೃದ್ಧೆ ಜಾರಿ ಬಿದ್ದ ಪರಿಣಾಮ ಅವರ ಕಾಲಿಗೆ ಗಾಯವಾಗಿ ನಡೆಯಲಾರದ ಸ್ಥಿತಿಯಲ್ಲಿದ್ದಾರೆ. ಅವರಿಗೆ ಸರಿಯಾದ ಚಿಕಿತ್ಸೆ ಕೊಡಿಸದೇ ಅವರ ಪುತ್ರ ಹರಿರಾಂ  ಹಾಗೂ ಸೊಸೆ ಶೌಚಾಲಯದಲ್ಲಿ ಕೂಡಿ ಹಾಕಿ  ಸರಿಯಾಗಿ ಊಟ ತಿಂಡಿಯೂ ನೀಡುತ್ತಿರಲಿಲ್ಲ. ಈ ಬಗ್ಗೆ ಸ್ಥಳೀಯರು ಹಿರಿಯ ನಾಗರಿಕ ಸಮಿತಿಗೆ ಮಾಹಿತಿ ನೀಡಿದ್ದರು.ಅದರಂತೆ ನಾಗರಿಕ ಸಮಿತಿಯವರು ಬಂದು ವೃದ್ಧೆಯನ್ನು ರಕ್ಷಿಸಿ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದೀಗ ವೃದ್ಧೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಮಗ ಹಾಗೂ ಸೊಸೆಯ ವಿರುದ್ಧ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!