Sunday, May 5, 2024
Homeಕರಾವಳಿಮಂಗಳೂರು; ಇನ್ಸ್ಟಾಗ್ರಾಂ ನಲ್ಲಿ ನಿಹಾರಿಕಾಳ ಹಿಂದೆ ಬಿದ್ದು 98 ಸಾವಿರ ಕಳೆದುಕೊಂಡ ವ್ಯಕ್ತಿ;ಹುಡುಗಿ ಮೆಸೇಜ್ ಮಾಡಿದ್ಳು...

ಮಂಗಳೂರು; ಇನ್ಸ್ಟಾಗ್ರಾಂ ನಲ್ಲಿ ನಿಹಾರಿಕಾಳ ಹಿಂದೆ ಬಿದ್ದು 98 ಸಾವಿರ ಕಳೆದುಕೊಂಡ ವ್ಯಕ್ತಿ;ಹುಡುಗಿ ಮೆಸೇಜ್ ಮಾಡಿದ್ಳು ಎಂಬ ಖುಷಿಯಲ್ಲಿ ಎಲ್ಲ ಕಳೆದುಕೊಳ್ಳುವ ಮುನ್ನ ಈ ಸುದ್ದಿ ಓದಿ..

spot_img
- Advertisement -
- Advertisement -

ಮಂಗಳೂರು; ಕೆಲವರಿಗೆ ಸೋಷಿಯಲ್ ಮೀಡಿಯಾದಲ್ಲಿ ಹೆಣ್ಣಕ್ಕಳು ಹೆಸ್ರಲ್ಲಿ ಮೆಸೇಜ್ ಬಂದ್ರೆ ಸಾಕು ಥಟ್ ಅಂತಾ ರಿಪ್ಲೈ ಮಾಡ್ತಾರೆ. ಹೆಣ್ಮಕ್ಕಳು ಹಾಕೋ ಫೋಟೋ ಚೆನ್ನಾಗಿದ್ಯೋ ಇಲ್ವೋ ಕೆಲವು ಯುವಕರಿಗೆ ಅದಕ್ಕೊಂದು ಲೈಕೋ ಹಾರ್ಟ್ ಸಿಂಬಲೋ ಕೊಟ್ಟಿಲ್ಲ ಅಂದ್ರೆ ನಿದ್ದೇನೆ ಬರಲ್ಲ. ಹೀಗೆ ಗುರರ್ತು ಪರಿಚಯ ಇಲ್ಲದವರ ಜೊತೆ ಅತಿಯಾದ ಸ್ನೇಹ ಬೆಳೆಸೋ ಹುಡ್ಗರು, ಹಾಗೆನೇ ಹುಡ್ಗೀರು ಈ ಸುದ್ದಿನಾ ಓದ್ಲೇ ಬೇಕು.

ಮಂಗಳೂರಿನ ವ್ಯಕ್ತಿಯೊಬ್ಬರಿಗೆ ಇನ್ಸ್ಟಾ ದಲ್ಲಿ ನಿಹಾರಿಕಾ ಅನ್ನೋ ಖಾತೆಯಿಂದ ಮೆಸೇಜ್ ಒಂದು ಬಂದಿದೆ.
‘2023ರ ಫೆ. 26ರಂದು ನಿಹಾರಿಕಾ ಅನ್ನೋ ಹೆಸರಿನ ಖಾತೆಯಿಂದ ಹಾಯ್‌ ಎಂಬ ಮೆಸೇಜ್ ಬಂದಿದೆ. ಹಾಯ್ ಎಂದು ಮೆಸೇಜ್ ಮಾಡಿದ ಆ ವ್ಯಕ್ತಿ ದೂರು ನೀಡಿದ ವ್ಯಕ್ತಿ ನನ್ನ ಪರಿಚಯ ಇದೆಯಾ ಎಂದು ಕೇಳಿದ್ದಾರೆ. ಅದಕ್ಕೆ ‘ನನ್ನ ಹೆಸರು ನಿಹಾರಿಕಾ. ದಿಯಾ ಸಿಸ್ಟಮ್‌ನಲ್ಲಿ ಉದ್ಯೋಗದಲ್ಲಿದ್ದೇನೆ. ದೇರೆಬೈಲ್‌ ಬ್ರಿಗೇಡ್ ಪಿನಾಕಲ್ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ವಾಸವಾಗಿದ್ದೇನೆ. ನೀವು ಕಾವೂರಿನಲ್ಲಿ ಕಪ್ಪು ಬಣ್ಣದ ಸ್ಕೂಟರ್‌ನಲ್ಲಿ ಹೋಗುತ್ತಿರುವುದನ್ನು ನೋಡಿದ್ದೆ’ ಎಂದು ಪ್ರತಿಕ್ರಿಯಿಸಿದ್ದಾರೆ. ಅಲ್ಲಿಂದ ಬಳಿಕ ಆಗಾಗ ಸಂದೇಶ ಕಳುಹಿಸುವ ಮೂಲಕ ನನ್ನ ದೂರುದಾರರ ಜೊತೆ ಆ ವ್ಯಕ್ತಿ ಸಂಪರ್ಕದಲ್ಲಿದ್ದರು’ .

ಹೀಗಿರುವಾಗ ಆ ನಿಹಾರಿಕಾ ಎಂಬ ವ್ಯಕ್ತಿ ನನ್ನ ತಂದೆಯ ಹೆಸರು ಸಶಾನ್ ಟಿ. ಶೆಟ್ಟಿ. ಅವರ ಬ್ಯಾಂಕ್ ಖಾತೆಗೆ ₹ 3,800 ವರ್ಗಾಯಿಸಬಹುದೇ’ ಒಂದು ಕೇಳಿದ್ದಾರೆ. ಅದರಂತೆ ನಿಹಾರಿಕಾ ಕಳುಹಿಸಿದ ಕ್ಯೂಆರ್ ಕೋಡ್‌ಗೆ ಗೂಗಲ್ ಪೇ ಮೂಲಕ ಅಷ್ಟು ಮೊತ್ತವನ್ನು ದೂರುದಾರ ವ್ಯಕ್ತಿ ಕಳುಹಿಸಿದ್ದಾರೆ. ‌ನಂತರ ಫೆ.27ರಂದು ಮತ್ತೆ ಸಂದೇಶ ಕಳುಹಿಸಿ, ‘ಸೋದರನಿಗೆ ಅಪಘಾತವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಆತನಿಗೆ ಎಂ.ಆರ್.ಐ ಸ್ಕ್ಯಾನ್ ಮಾಡಿಸಲು ₹28 ಸಾವಿರ ಕಟ್ಟಿದ್ದೇನೆ. ಇನ್ನಷ್ಟು ಹಣದ ಅವಶ್ಯಕತೆ ಇದೆ’ ಎಂದು ತಿಳಿಸಿದ್ದರು. ಮತ್ತೆ ₹5,800 ಅನ್ನು ಗೂಗಲ್ ಪೇ ಮೂಲಕ ದೂರು ಹಣ ಪಾವತಿಸಿದ್ದಾರೆ. ಇದೇ ರೀತಿ ಫೆ 28ರಂದು ಮತ್ತೆ ₹5 ಸಾವಿರ ಕಳುಹಿಸಿದ್ದಾರೆ. ಮಾರ್ಚ್‌ 2ರಿಂದ14ರ ನಡುವೆ ಮತ್ತೆ ಹಂತ ಹಂತವಾಗಿ ಒಟ್ಟು ₹84,100 ಕಳುಹಿಸಿದ್ದಾರೆ. ಬಳಿಕ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪರಿಚಯ ಮಾಡಿಕೊಂಡ ವ್ಯಕ್ತಿಯ ನಡವಳಿಕೆ ಸಂಶಯ ಬಂದು ದೂರು ನೀಡಿದ್ದಾರೆ.

‘ಯಾರೋ ಅಪರಿಚಿತ ವ್ಯಕ್ತಿ ನನಗೆ ಮೋಸ ಮಾಡುವ ಉದ್ದೇಶದಿಂದ ಹುಡುಗಿಯ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಂ ಖಾತೆ ಸೃಷ್ಟಿಸಿ ಫೆ 26ರಿಂದ ಮಾ 14ರವರೆಗೆ ಹಂತ ಹಂತವಾಗಿ ಒಟ್ಟು ₹98,700 ಮೊತ್ತವನ್ನು ಆನ್ ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಆತನ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಸಂತ್ರಸ್ತ ವ್ಯಕ್ತಿ ದೂರಿನಲ್ಲಿ ಆರೋಪಿಸಿದ್ದಾರೆ .

ನಾವು ಎಲ್ಲಿ ತನಕ ಮೋಸ ಹೋಗುತ್ತೇವೋ ಅಲ್ಲಿಯವರಗೆ ಮೋಸ ಮಾಡುವವರು ಇರುತ್ತಾರೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ಸೋಷಿಯಲ್ ಮೀಡಿಯಾ ಅನ್ನೋದು ಎಷ್ಟು ಉತ್ತಮವೋ ಅದರಿಂದ ಅಷ್ಟೇ ಅಪಾಯವೂ ಇದೆ ಅನ್ನೋದನನ್ನು ಮರೆಯಬಾರದು. ಬಳಸುವಾಗ ಎಚ್ಚರಿಕೆಯಿಂದರಷ್ಟೇ ನಾವು ಸೇಫ್. ಅತಿಯಾದರೆ ಅಮೃತವೂ ವಿಷವಲ್ಲವೇ?

- Advertisement -
spot_img

Latest News

error: Content is protected !!