Friday, August 12, 2022
Homeಕರಾವಳಿಮಾದರಿಯಾಗಿ ಜನ್ಮದಿನ ಆಚರಿಸಿದ ರಾಜಕೇಸರಿ ಸಂಘಟನೆಯ ಸಂಸ್ಥಾಪಕ

ಮಾದರಿಯಾಗಿ ಜನ್ಮದಿನ ಆಚರಿಸಿದ ರಾಜಕೇಸರಿ ಸಂಘಟನೆಯ ಸಂಸ್ಥಾಪಕ

- Advertisement -
- Advertisement -

ಬೆಳ್ತಂಗಡಿ: ದೀನ ದಲಿತರ ಏಳಿಗೆಗಾಗಿ ನಿರಂತರ ಶ್ರಮಿಸುತ್ತಿರುವ ಜಿಲ್ಲೆಯ ಹೆಮ್ಮೆಯ ಸಂಘಟನೆ ರಾಜಕೇಸರಿಯ ಸಂಸ್ಥಾಪಕರಾಗಿರುವ ದೀಪಕ್ ಜಿ ಬೆಳ್ತಂಗಡಿ ಅವರ ಜನ್ಮದಿನದ ಪರವಾಗಿ ಇಂದು ತಾಲೂಕಿನಾದ್ಯಂತ ಆನೇಕ ಸಾಮಾಜಿಕ ಕಾರ್ಯಗಳು ನಡೆದವು.
ತಾಲೂಕಿನಲ್ಲಿ ಕೊರೊನ ಲಾಕ್ ಡೌನ್ ಹಿನ್ನಲೆಯಿಂದಾಗಿ ತೀರಾ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಡುಬಡವರಿಗೆ ಅಕ್ಕಿ ಹಾಗೂ ದಿನ ಸಾಮಗ್ರಿಗಳನ್ನು ನೀಡಿ ದೀಪಕ್ ಜಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಇವರಿಗೆ ವಿಶ್ವನಾಥ್ ಹಿರೇಬಂಡಾಡಿ, ಸುರೇಶ್ ಗೇರುಕಟ್ಟೆ ನಾಳ, ಮಮ್ತಾಜ್ ಪಿಲಿಚಂಡಿ ಕಲ್ಲು, ವಿಶ್ವನಾಥ್ ಮುಂಡೂರು, ಅಣ್ಣಿ ಆಚಾರಿ ಮುಂಡೂರು, ಸುಶೀಲಾ ದೇವಾಡಿಗ, ಸಂಪತ್ ಚಬಕ್ಕ ದಿನೇಶ್ ಪೂಜಾರಿ, ಸಂತೋಷ್ ಮುಂಡೂರು ಸಾಥ್ ನೀಡಿದರು.

(ಜನರು ಸಮಾಜಮುಖಿ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಪ್ರೇರಣೆಯಾಗಲಿ ಎಂಬ ಉದ್ದೇಶದಿಂದ ಈ ವರದಿಯನ್ನು ನಿಮ್ಮ “ಮಹಾ ಎಕ್ಸ್​ಪ್ರೆಸ್” ನಲ್ಲಿ​​ ಪ್ರಕಟಿಸುತ್ತಿದ್ದೇವೆ. ನಿಮ್ಮೂರಿನಲ್ಲೂ ಇಂತಹ ಕಾರ್ಯ ಮಾಡಿದ್ದರೆ +91 91378 26338 ನಂಬರ್ ಗೆ ವಾಟ್ಸಾಪ್ ನಲ್ಲಿ ಮಾಹಿತಿ ನೀಡಿ-ಸಂಪಾದಕರು)

- Advertisement -
- Advertisment -

Latest News

error: Content is protected !!