- Advertisement -
- Advertisement -
ಸಾಮಾಜಿಕ ಕಾರ್ಯಕರ್ತ, 87 ವರ್ಷದ ಅಣ್ಣಾ ಹಜಾರೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾದ ಹಿನ್ನೆಲೆಯಲ್ಲಿ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ.
ತೀವ್ರವಾದ ವೈರಲ್ ಸೋಂಕು, ನಿರ್ಜಲೀಕರಣ ಹಾಗೂ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ಆರಂಭದಲ್ಲಿ ಸ್ವಗ್ರಾಮ ರಾಳೇಗಾಂನ್ ಸಿದ್ಧಿ ಬಳಿಯ ವೈದ್ಯಕೀಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಆರೋಗ್ಯ ಸ್ಥಿತಿ ಉಲ್ಬಣಗೊಂಡಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ತುರ್ತಾಗಿ ಮುಂಬೈಗೆ ರವಾನಿಸಲಾಗಿದೆ.
ಪ್ರಸ್ತುತ ಡಾ. ಗೌತಮ್ ಭನ್ಸಾಲಿ ಅವರ ಉಸ್ತುವಾರಿಯಲ್ಲಿ ವೈದ್ಯರ ತಂಡವು ಐಸಿಯುವಿನಲ್ಲಿ ಅವರ ಮೇಲೆ ನಿರಂತರ ನಿಗಾ ವಹಿಸಿದ್ದು, ಪರೀಕ್ಷಾ ವರದಿಗಳು ಬಂದ ನಂತರ ಮುಂದಿನ ಚಿಕಿತ್ಸಾ ಯೋಜನೆಯನ್ನು ನಿರ್ಧರಿಸಲಿದೆ.
- Advertisement -


