Thursday, June 4, 2026
Homeಕರಾವಳಿಚಾರ್ಮಾಡಿ ಘಾಟ್: ಜೀವವನ್ನೇ ಪಣಕ್ಕಿಟ್ಟು ಪ್ರಪಾತದಲ್ಲಿ ಬಿದ್ದಿದ್ದ ಕಾರಿನ ದಾಖಲೆಗಳನ್ನ ತಂದುಕೊಟ್ಟ ವ್ಯಕ್ತಿ

ಚಾರ್ಮಾಡಿ ಘಾಟ್: ಜೀವವನ್ನೇ ಪಣಕ್ಕಿಟ್ಟು ಪ್ರಪಾತದಲ್ಲಿ ಬಿದ್ದಿದ್ದ ಕಾರಿನ ದಾಖಲೆಗಳನ್ನ ತಂದುಕೊಟ್ಟ ವ್ಯಕ್ತಿ

- Advertisement -
- Advertisement -

ಚಾರ್ಮಾಡಿ: ಎರಡು ದಿನಗಳ ಹಿಂದೆ ಧರ್ಮಸ್ಥಳಕ್ಕೆ ಬರುತ್ತಿದ್ದ ಸ್ವಿಫ್ಟ್ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಜಲಪಾತದತ್ತ ಮಗುಚಿ ಬಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ನಡೆದಿತ್ತು.

ದಾವಣಗೆರೆ ಮೂಲದ ಐದು ಮಂದಿ ಕಾರಿನಲ್ಲಿ ಧರ್ಮಸ್ಥಳ ಕಡೆ ಪ್ರಯಾಣಿಸುತ್ತಿದ್ದರು. ಅದೃಷ್ಟವಶಾತ್ ಕಾರಿನಲ್ಲಿದ್ದ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದ್ರೆ ಕಾರಿನಲ್ಲಿದ್ದ ಅಮೂಲ್ಯ ದಾಖಲೆಗಳು ಚಲ್ಲಾಪಿಲ್ಲಿ ಆಗಿದ್ವು. ಆ ದಾಖಲೆಗಳು ತುಂಬಾ ಮುಖ್ಯವಾಗಿವೆ ಎಂದು ಕಾರಿನಲ್ಲಿದ್ದವರು ಸಂಕಟ ಪಡುತ್ತಿದ್ರು.

ಪ್ರಪಾತದಲ್ಲಿ ಬಿದ್ದಿದ್ದ ಕಾರಿನ ದಾಖಲೆಗಳನ್ನ ತಂದುಕೊಟ್ಟ ವ್ಯಕ್ತಿ

ಚಾರ್ಮಾಡಿ ಘಾಟ್: ಜೀವವನ್ನೇ ಪಣಕ್ಕಿಟ್ಟು ಪ್ರಪಾತದಲ್ಲಿ ಬಿದ್ದಿದ್ದ ಕಾರಿನ ದಾಖಲೆಗಳನ್ನ ತಂದುಕೊಟ್ಟ ವ್ಯಕ್ತಿ

Posted by Maha Xpress on Monday, 14 September 2020

ಚಾರ್ಮಾಡಿಯ ಆಪತ್ಭಾಂದವ, ಸ್ಥಳಿಯ ಸ್ನೇಕ್ ಆರೀಫ್ ಜೀವವನ್ನೇ ಪಣಕ್ಕಿಟ್ಟು ಕ್ರೇನ್ ಮೂಲಕ ಚಾರ್ಮಾಡಿ ಘಾಟಿಯ ಪ್ರಪಾತಕ್ಕೆ ಇಳಿದು ದಾಖಲೆಗಳನ್ನ ಕಾರಿನಲ್ಲಿದ್ದ ವ್ಯಕ್ತಿಗೆ ಹಿಂದಿರುಗಿಸಿ ಸಾಹಸ ಮೆರೆದಿದ್ದಾರೆ. ಅವರ ಈ ಸಾಹಸಿ ಪ್ರವೃತ್ತಿಗೆ ಕಾರಿನಲ್ಲಿದ್ದವರು ಅಭಿನಂದನೆ ಸಲ್ಲಿಸಿದ್ದಾರೆ. ದಾಖಲೆಗಳನ್ನ ಹುಡುಕಲು ಸ್ನೇಕ್ ಆರೀಫ್ ತೆಗೆದುಕೊಂಡ ರಿಸ್ಕ್ ಬಗ್ಗೆ ಸ್ಥಳಿಯರು ಮೆಚ್ಚುಗೆ ವ್ಯಕ್ತಪಡಿಸಿದರು.

- Advertisement -

Latest News

error: Content is protected !!