Wednesday, May 1, 2024
Homeತಾಜಾ ಸುದ್ದಿತಾಯಿ ಬಳಿ ಪೆನ್ಸಿಲ್​, ರಬ್ಬರ್​ ಕೇಳಿದ್ರೆ ಬೈಯ್ತಾರೆ ಎಂದು ಪ್ರಧಾನಿ ಮೋದಿಗೆ ಪತ್ರ ಬರೆದ ಬಾಲಕಿ...

ತಾಯಿ ಬಳಿ ಪೆನ್ಸಿಲ್​, ರಬ್ಬರ್​ ಕೇಳಿದ್ರೆ ಬೈಯ್ತಾರೆ ಎಂದು ಪ್ರಧಾನಿ ಮೋದಿಗೆ ಪತ್ರ ಬರೆದ ಬಾಲಕಿ  

spot_img
- Advertisement -
- Advertisement -

ಉತ್ತರಪ್ರದೇಶ: ತಾಯಿ ಬಳಿ ಪೆನ್ಸಿಲ್​, ರಬ್ಬರ್​ ಕೇಳಿದ್ರೆ ಬೈಯ್ತಾರೆ ಎಂದು ಪ್ರಧಾನಿ ಮೋದಿಗೆ ಬಾಲಕಿಯೊಬ್ಬಳು ಬರೆದ ಪತ್ರ ವೈರಲ್ ಆಗಿದೆ.ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ಛಿಬ್ರಮೌ ಪಟ್ಟಣದ ನಿವಾಸಿಯಾದ 1 ನೇ ತರಗತಿ ಬಾಲಕಿ ಕೃತಿ ದುಬೆ ಪ್ರಧಾನಿಗೆ ಪತ್ರ ಬರೆದಿದ್ದಾರೆ.ಹಿಂದಿಯಲ್ಲಿ ಪತ್ರವನ್ನು ಬರೆದಿದ್ದು, ನಮಸ್ಕಾರ ಮೋದಿಜಿ, ನೀವು‌ ನಿರಂತರ ಬೆಲೆ ಏರಿಕೆಗೆ ಕಾರಣರಾಗಿದ್ದೀರಿ. ನನ್ನ ಅಭ್ಯಾಸಕ್ಕೆ ಅಗತ್ಯವಿರುವ ಪೆನ್ಸಿಲ್, ರಬ್ಬರ್​ ಬೆಲೆ ಹೆಚ್ಚಾಗಿದೆ. ನನಗೆ ಇಷ್ಟವಾದ ಮ್ಯಾಗಿಯ ಬೆಲೆಯೂ ದುಬಾರಿಯಾಗಿದೆ.

ತಾಯಿಗೆ ಪೆನ್ಸಿಲ್​, ರಬ್ಬರ್​ ಕೇಳಿದಲ್ಲಿ ನನ್ನ ಮೇಲೆ ರೇಗುತ್ತಾರೆ. ದಬಾಯಿಸುತ್ತಾರೆ. ನಾನೇನು ಮಾಡಲಿ ಎಂದು ಪ್ರಶ್ನಿಸಿದ್ದಾಳೆ.ಬಾಲಕಿಯ ತಂದೆ ವಿಶಾಲ್ ದುಬೆ ಈ ಬಗ್ಗೆ ಮಾತನಾಡಿ, ಈ ಪತ್ರ ತನ್ನ ಮಗಳ ಮನ್‌ ಕಿ ಬಾತ್‌ ಎಂದು ಅವರು ಹೇಳಿದ್ದಾರೆ. ಇತ್ತೀಚೆಗೆ ಶಾಲೆಯಲ್ಲಿ ಪೆನ್ಸಿಲ್ ಕಾಣೆಯಾಗಿದ್ದಕ್ಕೆ ತಾಯಿ ಗದರಿಸಿದಾಗ ಆಕೆಗೆ ಕೋಪ ಬಂದಿತ್ತು. ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಪತ್ರ ಬರೆದಿದ್ದಾಳೆ.

ಬಾಲಕಿ ಬರೆದ ಪತ್ರ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡಿದ್ದು, ಇದು ಅಲ್ಲಿನ ಶಿಕ್ಷಣಾಧಿಕಾರಿಗಳ ಗಮನಕ್ಕೆ ಬಂದು, ಮಗುವಿಗೆ ಸಹಾಯ ಮಾಡಲು ನಾವು ಸಿದ್ಧ ಎಂದು ಹೇಳಿದ್ದಾರೆ.

- Advertisement -
spot_img

Latest News

error: Content is protected !!