Thursday, May 16, 2024
Homeತಾಜಾ ಸುದ್ದಿಐಟಿಐ ಅಲ್ಪಾವಧಿ ಕೋರ್ಸ್ ಗಳಿಗೆ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮ ನೀಡುವ ಪ್ರಮಾಣ ಪತ್ರಕ್ಕೆ ಮಾನ್ಯತೆ

ಐಟಿಐ ಅಲ್ಪಾವಧಿ ಕೋರ್ಸ್ ಗಳಿಗೆ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮ ನೀಡುವ ಪ್ರಮಾಣ ಪತ್ರಕ್ಕೆ ಮಾನ್ಯತೆ

spot_img
- Advertisement -
- Advertisement -

ಬೆಂಗಳೂರು: ಟಾಟಾ ಟೆಕ್ನಾಲಜೀಸ್ ಲಿಮಿಟೆಡ್ ಸಹಯೋಗದಲ್ಲಿ ಉನ್ನತೀಕರಿಸಿರುವ 150 ಐಟಿಐಗಳಲ್ಲಿ ಅಲ್ಪಾವಧಿ ಕೋರ್ಸ್ ಗಳನ್ನು ಮಾಡುವವರಿಗೆ ಇನ್ನು ಮುಂದೆ ಕೌಶಲ್ಯ ಅಭಿವೃದ್ಧಿ ನಿಗಮವೇ ಪ್ರಮಾಣ ಪತ್ರಗಳನ್ನು ಕೊಡಲಿದೆ.

ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಇಂದು ಈ ವಿಚಾರ ತಿಳಿಸಿದ್ದು, ಈ ಸಂಬಂಧವಾಗಿ ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮ ಮತ್ತು ನವದೆಹಲಿಯಲ್ಲಿರುವ ರಾಷ್ಟ್ರೀಯ ವೃತ್ತಿ ಶಿಕ್ಷಣ ಮತ್ತು ತರಬೇತಿ ಮಂಡಳಿ ನಡುವೆ ಒಡಂಬಡಿಕೆ ಆಗಿದೆ ಹೀಗಾಗಿ ಇನ್ನು ಮುಂದೆ ಪ್ರಮಾಣಪತ್ರದ ವಿಷಯದಲ್ಲಿ ಗೊಂದಲಗಳಿರುವುದಿಲ್ಲ ಎಂದು ಹೇಳಿದ್ದಾರೆ.

ಇಂದು ದೆಹಲಿಯಲ್ಲಿ ಒಡಂಬಡಿಕೆಗೆ ಅಂಕಿತ ಹಾಕಲಾಗಿದ್ದು, ಈ ಸಂದರ್ಭದಲ್ಲಿ ಕೌಶಲ್ಯ ಅಭಿವೃದ್ಧಿ ನಿಗಮದ ಪರವಾಗಿ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಗೌಡ ಮತ್ತು ಎನ್ ಸಿವಿಇಟಿ ಪರವಾಗಿ ನಿರ್ದೇಶಕ ಕರ್ನಲ್ ಸತೀಶ್ ಹಾಜರಿದ್ದರು.

ಉನ್ನತಿಕರಿಸಿರುವ ಐಟಿಐಗಳಲ್ಲಿ ವಿದ್ಯಾರ್ಥಿಗಳಲ್ಲದೇ ಇತರರು ಸಾಮಾನ್ಯವಾಗಿ ಈ ಅಲ್ಪಾವಧಿ ಕೋರ್ಸ್ ಗಳನ್ನು ಅಭ್ಯಸಿಸುತ್ತಾರೆ. ಇಂತಹ 23 ಅಲ್ಪಾವಧಿ ಕೋರ್ಸ್ ಗಳು ರಾಜ್ಯದಲ್ಲಿ ಲಭ್ಯವಿದ್ದು ಇವುಗಳ ಅವಧಿ ಕನಿಷ್ಠ 3 ತಿಂಗಳಿನಿಂದ ಗರಿಷ್ಠ 6 ತಿಂಗಳಾಗಿದೆ ಎಂದು ಸಚಿವ ಡಾ. ಅಶ್ವಥ್ ನಾರಾಯಣ ಹೇಳಿದ್ದಾರೆ. ಆದರೆ ಇದುವರೆಗೆ ಇಂತಹವರಿಗೆ ಯಾರು ಪ್ರಮಾಣ ಪತ್ರ ನೀಡಬೇಕು ಎಂಬ ಗೊಂದಲವಿತ್ತು
ಇದನ್ನು ಬಗೆಹರಿಸಲು ಹಲವು ದಿನಗಳಿಂದ ಪ್ರಯತ್ನಿಸಲಾಗುತ್ತಿತ್ತು. ಈಗ ಈ ಸಮಸ್ಯೆ ಬಗೆಹರಿದಿರುವುದು ಸಂತಸ ತಂದಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಹೀಗಾಗಿ ಫಂಡಮೆಂಟಲ್ ಆಫ್ ಇನೋವೇಷನ್ ಅಂಡ್ ಟೆಕ್ನಾಲಜಿ, ಜೂನಿಯರ್ ಪ್ರಾಡಕ್ಟ್ ಡಿಸೈನರ್, ಆಟೋ ಎಲೆಕ್ಟ್ರಿಕಲ್ ಡಿಸೈನ್ ಟೆಕ್ನಿಷಿಯನ್, ಆಟೋಮೊಬೈಲ್ ರಿಪೇರ್ ಅಂಡ್ ಮೈನ್ಟೆನೆನ್ಸ್ ಜೂನಿಯರ್, ಸಿಎಎಂ ಪ್ರೋಗ್ರಾಮರ್, ಸಿಎನ್ಸಿ ಮಷೀನಿಂಗ್, ಜೂನಿಯರ್ ರೋಬೋಟ್ ಆಪರೇಟರ್ ಮುಂತಾದ ಅಲ್ಪಾವಧಿ ಕೋರ್ಸುಗಳನ್ನು ಮಾಡುವವರಿಗೆ ಅನುಕೂಲವಾಗಲಿದೆ ಎಂದು ಸಚಿವರು ವಿವರಿಸಿದ್ದಾರೆ.

- Advertisement -
spot_img

Latest News

error: Content is protected !!