Saturday, June 28, 2025
Homeಕರಾವಳಿಮಂಗಳೂರು: 6ನೇ ಸೆಮಿಸ್ಟರ್ ಪರೀಕ್ಷೆಗೆ ದಿನಾಂಕ ಫಿಕ್ಸ್; ಮಂಗಳೂರು ವಿ.ವಿ ಸಿಂಡಿಕೇಟ್‌ ಸಭೆಯಲ್ಲಿ ತೀರ್ಮಾನ!

ಮಂಗಳೂರು: 6ನೇ ಸೆಮಿಸ್ಟರ್ ಪರೀಕ್ಷೆಗೆ ದಿನಾಂಕ ಫಿಕ್ಸ್; ಮಂಗಳೂರು ವಿ.ವಿ ಸಿಂಡಿಕೇಟ್‌ ಸಭೆಯಲ್ಲಿ ತೀರ್ಮಾನ!

spot_img
- Advertisement -
- Advertisement -

ಮಂಗಳೂರು: ಸೋಮವಾರ ನಡೆದ ವಿ.ವಿ. ಸಿಂಡಿಕೇಟ್‌ ಸಭೆಯಲ್ಲಿ ಮಂಗಳೂರು ವಿ.ವಿ. ವ್ಯಾಪ್ತಿಯಲ್ಲಿ ಬರುವ 6ನೇ ಸೆಮಿಸ್ಟರ್‌ ಪರೀಕ್ಷೆ ಹಾಗೂ ಸ್ನಾತಕೋತ್ತರ ನಾಲ್ಕನೇ ಸೆಮಿಸ್ಟರ್‌ ಪರೀಕ್ಷೆಯನ್ನು ಸೆ. 30ರಿಂದ ಆಫ್‌ಲೈನ್‌ ಮೂಲಕ ನಡೆಸಲು ನಿರ್ಧರಿಸಲಾಗಿದೆ.

ಈ ಕುರಿತ ಪರೀಕ್ಷಾ ವೇಳಾಪಟ್ಟಿ ಎರಡು ದಿನದೊಳಗೆ ಪ್ರಕಟವಾಗಲಿದ್ದು,1, 3 ಹಾಗೂ 5ನೇ ಸೆಮಿಸ್ಟರ್‌ ಮೌಲ್ಯಮಾಪನವನ್ನು ಕೂಡ ಶೀಘ್ರ ಮುಗಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

6ನೇ ಸೆಮಿಸ್ಟರ್ ಪರೀಕ್ಷೆ ಇನ್ನೂ ನಡೆಯದಿರುವ ಕಾರಣ ಸುಮಾರು 40 ಸಾವಿರ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೇರೆ ಕೋರ್ಸುಗಳಿಗೆ ಸೇರ್ಪಡೆಯಾಗಲು ಅಲ್ಲಿ ಆರನೇ ಸೆಮಿಸ್ಟರ್ ಅಂಕಪಟ್ಟಿ ಕೇಳುತ್ತಿರುವುದು ವಿದ್ಯಾರ್ಥಿಗಳಿಗೆ ದಾರಿ ತೋಚದಂತಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಆರನೇ ಸೆಮಿಸ್ಟರ್ ನಲ್ಲಿ ಹಾಕಿರುವ ತರಗತಿಗಳನ್ನು ಶೀಘ್ರ ಪೂರ್ಣಗೊಳಿಸಿ ಪರೀಕ್ಷೆ ನಡೆಸಲು ವಿ.ವಿ ತೀರ್ಮಾನಿಸಿದೆ. ಸೆಪ್ಟೆಂಬರ್ ಕೊನೆಯಲ್ಲಿ ಪರೀಕ್ಷೆ ಆರಂಭವಾದರೆ 10 ದಿನದೊಳಗೆ ಪೂರ್ಣಗೊಳಿಸಿ 15 ದಿನದೊಳಗೆ ಮೌಲ್ಯಮಾಪನ ಮುಗಿಸಿ ಅಕ್ಟೋಬರ್ ಮಧ್ಯದಲ್ಲಿ ಫಲಿತಾಂಶ ಪ್ರಕಟಿಸಬಹುದು ಎಂದು ವಿ.ವಿಯ ಚಿಂತನೆಯಾಗಿದೆ

- Advertisement -
spot_img

Latest News

error: Content is protected !!