Wednesday, July 15, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಜಯಂತ್.ಟಿ ಮನೆಯಲ್ಲಿ ಎಸ್.ಐ.ಟಿ ಶೋಧ ಕಾರ್ಯ ಅಂತ್ಯ

ಬೆಳ್ತಂಗಡಿ : ಜಯಂತ್.ಟಿ ಮನೆಯಲ್ಲಿ ಎಸ್.ಐ.ಟಿ ಶೋಧ ಕಾರ್ಯ ಅಂತ್ಯ

- Advertisement -
- Advertisement -

ಬೆಳ್ತಂಗಡಿ : ಬುರುಡೆ ಪ್ರಕರಣದಲ್ಲಿ ಚಿನ್ನಯ್ಯನ ಜೊತೆ ಎಸ್.ಐ.ಟಿ ಅಧಿಕಾರಿಗಳು ಬೆಂಗಳೂರಿನ ಬಗಳಗುಂಟೆಯ ಪೀಣ್ಯ ದಲ್ಲಿರುವ ಜಯಂತ್ ಟಿ ಬಾಡಿಗೆ ಮನೆ ಮೇಲೆ ಆ.30 ರಂದು ಮಾದ್ಯಾಹ್ನ ಕೋರ್ಟ್ ನಿಂದ ಸರ್ಚ್ ವಾರಂಟ್ ಪಡೆದು ದಾಳಿ ಮಾಡಿ ಪರಿಶೀಲನೆ ನಡೆಸಿ ಸಂಜೆ 6:45 ಕ್ಕೆ ಶೋಧ ಮತ್ತು ಮಹಜರು ಕಾರ್ಯ ಮುಕ್ತಾಯವಾಗಿದೆ.

ದಾಳಿ ಮಾಡುವ ವೇಳೆ ಜಯಂತ್.ಟಿ ಮಗ ಎಸ್.ಐ.ಟಿ ಅಧಿಕಾರಿಗಳಿಗೆ ಮನೆಯನ್ನು ಕೀ ನೀಡಿ ಓಪನ್ ಮಾಡಿಸಿ ಮನೆಯೊಳಗೆ ಶೋಧ ನಡೆಸುತ್ತಿದ್ದಾರೆ.

ಎಸ್‌.ಐ.ಟಿ ಶೋಧ ವೇಳೆ ಜಯಂತ್.ಟಿ ಪತ್ನಿಯ ಹಳೆ ಆಂಡ್ರೈಡ್ ಮೊಬೈಲ್ ಫೋನ್ ಹಾಗೂ ಮನೆಯಲ್ಲಿದ್ದ ಕೆಲ ದಾಖಲೆಗಳನ್ನು ವಶಕ್ಕೆ ಪಡೆದು ಮಹಜರು ಮಾಡಿ ವಶಕ್ಕೆ ಪಡೆದಿದ್ದಾರೆ.ಬೆಂಗಳೂರಿನಿಂದ ವಾಪಸ್ ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಚಿನ್ನಯ್ಯನ ಜೊತೆ ಅಧಿಕಾರಿಗಳು ಬರುತ್ತಾರೆ.

- Advertisement -

Latest News

error: Content is protected !!