Saturday, June 6, 2026
Homeಕರಾವಳಿನಾರಾಯಣ ಗುರು ಯುವ ವೇದಿಕೆಯಿಂದ ಜು.28ರಂದು ರಜತ ಸಂಭ್ರಮ 

ನಾರಾಯಣ ಗುರು ಯುವ ವೇದಿಕೆಯಿಂದ ಜು.28ರಂದು ರಜತ ಸಂಭ್ರಮ 

- Advertisement -
- Advertisement -

ಮಂಗಳೂರು: ನಾರಾಯಣ ಗುರು ಯುವ ವೇದಿಕೆಯಿಂದ ರಜತ ಸಂಭ್ರಮ, ಬ್ರಹ್ಮಶ್ರೀ ಬಂಗಾರದ ಪದಕ ಪ್ರದಾನ, ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮವು ಜು. 28 ಭಾನುವಾರದಂದು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ. 

ಬೆಳಿಗ್ಗೆ 10.30ಕ್ಕೆ ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌  ಕಾರ್ಯಕ್ರಮವನ್ನು  ಉದ್ಘಾಟಿಸುವರು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಪದಕ ಪ್ರದಾನ ಮಾಡುವರು. ಶಾಸಕ ವೇದವ್ಯಾಸ ಕಾಮತ್‌ ವಿದ್ಯಾರ್ಥಿವೇತನ ವಿತರಿಸುವರು. ವೇದಿಕೆ ಅಧ್ಯಕ್ಷ ಸುದರ್ಶನ್‌ ಕೋಟ್ಯಾನ್‌ ಅಧ್ಯಕ್ಷತೆ ವಹಿಸುವರು.

ವೇದಿಕೆ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ  ಬೆಳಿಗ್ಗೆ 9ರಿಂದ ‘ಮರಿಯಲದ ಮಿನದನ’ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್‌ ಉದ್ಘಾಟಿಸುವರು. ಬದುಕು ಸಂಬಂಧಗಳ ಬಗ್ಗೆ ಪ್ರಾಧ್ಯಾಪಕ ಸೇಸಪ್ಪ ಅಮೀನ್‌  ಸೇಸಪ್ಪ ಅಮೀನ್‌ ಮಾತನಾಡಲಿರುವರು ಎಂದು ಪ್ರಕಟಣೆ ತಿಳಿಸಿದೆ.

- Advertisement -

Latest News

error: Content is protected !!