Friday, June 5, 2026
Homeಕರಾವಳಿದ್ವಿ ಚಕ್ರ ವಾಹನಗಳ ಸೈಲೆಂಸರ್ ಸೀಝ್:ಬೆಳ್ತಂಗಡಿ ಸಂಚಾರಿ ಪೊಲೀಸರಿಂದ ಧ್ವಂಸ

ದ್ವಿ ಚಕ್ರ ವಾಹನಗಳ ಸೈಲೆಂಸರ್ ಸೀಝ್:ಬೆಳ್ತಂಗಡಿ ಸಂಚಾರಿ ಪೊಲೀಸರಿಂದ ಧ್ವಂಸ

- Advertisement -
- Advertisement -

ಬೆಳ್ತಂಗಡಿ : ಅತಿಯಾಗಿ ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯವಾಗುವ  ದ್ವಿ ಚಕ್ರ ವಾಹನಗಳಲ್ಲಿ ಬಳಕೆ ಮಾಡುತ್ತಿದ್ದ ಸೈಲೆಂಸರ್ ಗಳನ್ನು ಬೆಳ್ತಂಗಡಿ ಸಂಚಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬೆಳ್ತಂಗಡಿ ಸಂಚಾರಿ ಪೊಲೀಸರು ಕಳೆದ ಮೂರು ತಿಂಗಳಿಂದ ಅತಿಯಾಗಿ ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯವಾಗುವ ದ್ವಿ ಚಕ್ರ ವಾಹನಗಳ 20 ಸೈಲೆಂಸರ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದರು.

ಡಿ.15 ರಂದು(ಇಂದು) ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಮುಂದೆ ಸಬ್ ಇನ್ಸ್ಪೆಕ್ಟರ್ ಅರ್ಜುನ್ ನೇತೃತ್ವದಲ್ಲಿ ರೋಲರ್ ಬಳಸಿ 20 ಸೈಲೆಂಸರ್ ಗಳನ್ನು ಧ್ವಂಸ ಮಾಡಿದ್ದಾರೆ.

ವಾಯುಮಾಲಿನ್ಯವನ್ನು ತಡೆಯುವ ಉದ್ದೇಶದಿಂದ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅರ್ಜುನ್ ಮತ್ತು ತಂಡ ಕಳೆದ ಮೂರು ತಿಂಗಳಿಂದ ಕಾರ್ಯಾಚರಣೆ ನಡೆಸಿ ದ್ವಿಚಕ್ರ ವಾಹನ ಸಾವರರಿಗೆ 20 ಸಾವಿರ ದಂಡವನ್ನು ಹಾಕಿ ಕಾನೂನು ಕ್ರಮ ಕೈಗೊಂಡಿದ್ದಾರೆ.

- Advertisement -

Latest News

error: Content is protected !!