Friday, April 19, 2024
Homeತಾಜಾ ಸುದ್ದಿವಲಸಿಗರಿಗಾಗಿ ಕೇಂದ್ರದಿಂದ ಗುಡ್ ನ್ಯೂಸ್ : 'ಶ್ರಮಿಕ್ ಸ್ಪೆಷಲ್' ರೈಲು ವ್ಯವಸ್ಥೆ

ವಲಸಿಗರಿಗಾಗಿ ಕೇಂದ್ರದಿಂದ ಗುಡ್ ನ್ಯೂಸ್ : 'ಶ್ರಮಿಕ್ ಸ್ಪೆಷಲ್' ರೈಲು ವ್ಯವಸ್ಥೆ

spot_img
- Advertisement -
- Advertisement -

ನವದೆಹಲಿ : ಕೋವಿಡ್ 19 ಲಾಕ್ ಡೌನ್ ಕಾರಣದಿಂದ ದೇಶದ ವಿವಿಧ ರಾಜ್ಯಗಳಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ತೆರಳಲು ರೈಲು ಸೇವೆಯನ್ನು ಬಳಸಿಕೊಳ್ಳಲು ಕೇಂದ್ರ ಗೃಹ ಸಚಿವಾಲಯ ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿದೆ. ಈ ಮೂಲಕ ಶ್ರಮಿಕ್ ಸ್ಪೆಷಲ್ ರೈಲು ಬಳಸಿಕೊಳ್ಳಲು ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿದೆ.

ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗ ಸೂಚಿಯೊಂದನ್ನು ಇದಕ್ಕಾಗಿ ಪ್ರಕಟಿಸಿದ್ದು, ಕಾರ್ಮಿಕರು, ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರನ್ನು ತಮ್ಮ ರಾಜ್ಯಗಳಿಗೆ ತೆರಳಲು ರೈಲು ಸೇವೆ ಬಳಕೆ ಮಾಡಲು ಹಸಿರು ನಿಶಾನೆ ನೀಡಿದೆ. ಶ್ರಮಿಕ್ ಸ್ಪಷಲ್ ರೈಲು ಬಳಕೆ ಮಾಡಿಕೊಂಡು, ದೇಶದ ವಿವಿಧೆಡೆ ಇರುವಂತ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರನ್ನು ಅವರವ ಊರಿಗೆ ತೆರಳಲು ವ್ಯವಸ್ಥೆ ಮಾಡುವಂತೆ ಎಲ್ಲಾ ರಾಜ್ಯಗಳಿಗೆ ಹೊಸ ಮಾರ್ಗಸೂಚಿಯಲ್ಲಿ ಸೂಚಿಸಿದೆ.
ಈ ಹಿನ್ನಲೆಯಲ್ಲಿ ರೈಲು ಸಂಚಾರ ಸದ್ಯದಲ್ಲಿಯೇ ದೇಶಾದ್ಯಂತ ಆರಂಭವಾಗಲಿದ್ದು, ವಲಸೆ ಕಾರ್ಮಿಕರಿಗೆ ವಿಶೇಷ ರೈಲು ವ್ಯವಸ್ಥೆ ಆಗಲಿದೆ. ಈ ಮೂಲಕ ಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರು ಅವರವರ ಊರಿಗೆ ತೆರಳಲು ವ್ಯವಸ್ಥೆ ಆಗಲಿದೆ. ಆದ್ರೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು , ಮಸ್ಕ್ ಧರಿಸುವುದು ಮತ್ತು ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವುದು ಕಡ್ಡಾಯವಾಗಿದೆ.

- Advertisement -
spot_img

Latest News

error: Content is protected !!