Thursday, July 16, 2026
Homeಕರಾವಳಿಕಾಸರಗೋಡಿನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಮಳಿಗೆಗಳು

ಕಾಸರಗೋಡಿನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಮಳಿಗೆಗಳು

- Advertisement -
- Advertisement -

ಕಾಸರಗೋಡು: ಇಲ್ಲಿನ ಹಳೆ ಬಸ್ಸು ನಿಲ್ದಾಣ ಸಮೀಪದಲ್ಲಿದ್ದ ಎರಡು ಮಳಿಗೆಗಳು ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿಗೆ ಧಗಧಗನೆ ಹೊತ್ತಿ ಉರಿದ ಘಟನೆ ನಡೆದಿದೆ.

ಈ ಬೆಂಕಿ ಅವಘಡವು ಹಳೆ ಬಸ್ಸು ನಿಲ್ದಾಣ ಸಮೀಪದ ಸರಕು ಸಾಮಾಗ್ರಿ, ಮೊಬೈಲ್ ಹಾಗೂ ವಾಚ್ ವರ್ಕ್ಸ್ ಮಳಿಗೆಗಳಲ್ಲಿ ನಡೆದಿದ್ದು, ಶಾರ್ಟ್ ಸರ್ಕ್ಯೂಟ್ ನಿಂದ ಈ ಬೆಂಕಿ ಅಪಘಾತ ನಡೆದಿದೆ ಎನ್ನಲಾಗುತ್ತಿದೆ. ಮೊಬೈಲ್ ಮಳಿಗೆಯಲ್ಲಿ ಮೂರು ಲಕ್ಷ ರೂ. ಹಾಗೂ ಸರಕು ಸಾಮಾಗ್ರಿ ಮಳಿಗೆಯಲ್ಲಿ ಸುಮಾರು 12 ಲಕ್ಷ ರೂ. ನಷ್ಟವುಂಟಾಗಿರಬಹುದು ಎಂದು ಅಂದಾಜಿಸಲಾಗಿದೆ.

ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ಹಾರಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

- Advertisement -

Latest News

error: Content is protected !!