Friday, March 29, 2024
Homeತಾಜಾ ಸುದ್ದಿಮಾಸ್ಕ್ ಧರಿಸುವಂತೆ ಸೂಪರ್ ಮಾರ್ಕೆಟ್ ನ ಮಾಲೀಕನಿಂದ ಆಗ್ರಹ: ಸಾರ್ವಜನಿಕರ ಎದುರೇ ಒಳ ಉಡುಪು ಕಳಚಿ...

ಮಾಸ್ಕ್ ಧರಿಸುವಂತೆ ಸೂಪರ್ ಮಾರ್ಕೆಟ್ ನ ಮಾಲೀಕನಿಂದ ಆಗ್ರಹ: ಸಾರ್ವಜನಿಕರ ಎದುರೇ ಒಳ ಉಡುಪು ಕಳಚಿ ಮಾಸ್ಕ್​ ಮಾಡಿಕೊಂಡ ಯುವತಿ…!

spot_img
- Advertisement -
- Advertisement -

ಜೋಹಾನ್ಸ್ ಬರ್ಗ್: ಕೊರೋನಾ ಭಾರತಕ್ಕೆ ಕಾಲಿಟ್ಟು ಒಂದು ವರ್ಷವೇ ಆಗುತ್ತಾ ಬಂದರೂ ಅದರ ತಾಂಡವ ಕಡಿಮೆ ಆಗದೇ ಇರುವುದರಿಂದ ಈಗಲೂ ಜಗತ್ತಿನೆಲ್ಲೆಡೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಆದರೆ, ಬಹುತೇಕರಿಗೆ ಮನೆಯಿಂದ ಹೊರ ಹೋಗುವಾಗ ಮಾಸ್ಕ್​ ಧರಿಸೋದು ಮರೆತೇ ಹೋಗುತ್ತದೆ.

ಇದೆ ರೀತಿ ದಕ್ಷಿಣ ಆಫ್ರಿಕಾ ಮೂಲದ ಯುವತಿಯೋರ್ವಳು ಸೂಪರ್ ಮಾರ್ಕೆಟ್​ಗೆ ಮಾಸ್ಕ್​ ಮರೆತು ತೆರಳಿದ್ದಳು. ಆದರೆ, ಸೂಪರ್​ ಮಾರ್ಕೆಟ್​ನ ಮಾಲೀಕ ಮಾಸ್ಕ್​ ಧರಿಸದಿದ್ದರೆ ನಾವು ಇಲ್ಲಿ ಖರೀದಿ ಮಾಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದ. ಆಕೆ, ಅವಕಾಶ ನೀಡುವಂತೆ ಮನವಿ ಮಾಡಿದ್ದಳು. ಆದರೆ, ಅದು ಸಾಧ್ಯವೇ ಇಲ್ಲ ಎಂದು ಮಾಲೀಕ ಕಠುವಾಗಿ ಹೇಳಿದ್ದ. ಅಲ್ಲದೆ, ಮಾಸ್ಕ್​ ಧರಿಸದಿದ್ದರೆ ಶಾಪ್​ನಿಂದ ಹೊರಗೆ ಹಾಕುತ್ತೇವೆ ಎಂದು ಧಮ್ಕಿ ಕೂಡ ಹಾಕಿದ್ದ. ಇದರಿಂದ ಅವಮಾನಕ್ಕೆ ಒಳಗಾದ ಮಹಿಳೆ ತಡ ಮಾಡಲಿಲ್ಲ. ಎಲ್ಲರ ಎದುರೇ ತಾನು ಧರಿಸಿದ್ದ ಒಳ ಉಡುಪನ್ನ ಕಳಚಿ ಮುಖಕ್ಕೆ ಹಾಕಿಕೊಂಡಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಈ ವಿಡಿಯೋ ನೋಡಿದ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಟ್ವಿಟ್ಟರ್​ನಲ್ಲಿ ಈ ವಿಡಿಯೋ ಬರೋಬ್ಬರಿ 2.2 ಲಕ್ಷ ಬಾರಿ ವೀಕ್ಷಣೆ ಕಂಡಿದೆ. ಒಳ ಉಡುಪನ್ನು ತೆಗೆದು ಮಾಸ್ಕ್ ಮಾಡಿಕೊಂಡಿದ್ದು ಇದೇ ಮೊದಲೇನಲ್ಲ. ಕಳೆದ ಮೇ ತಿಂಗಳಲ್ಲಿ ಮಹಿಳೆಯೊಬ್ಬಳು ಉಕ್ರೇನ್​ನಲ್ಲಿ ತನ್ನ ಅಂಡರ್​ವೇರ್​ ತೆಗೆದು ಮಾಸ್ಕ್​ ಮಾಡಿಕೊಂಡಿದ್ದ ವಿಡಿಯೋ ಭಾರೀ ವೈರಲ್​ ಆಗಿತ್ತು.

- Advertisement -
spot_img

Latest News

error: Content is protected !!