Saturday, June 6, 2026
Homeಕರಾವಳಿಸುಳ್ಯದಲ್ಲಿ ಯುವಕನ ಮೇಲೆ ಅಪರಿಚಿತರಿಂದ ಗುಂಡಿನ ದಾಳಿ

ಸುಳ್ಯದಲ್ಲಿ ಯುವಕನ ಮೇಲೆ ಅಪರಿಚಿತರಿಂದ ಗುಂಡಿನ ದಾಳಿ

- Advertisement -
- Advertisement -

ಸುಳ್ಯ: ಅಪರಿಚಿತರಿಂದ ಯುವಕನ ಮೇಲೆ ಗುಂಡಿನ ದಾಳಿಯಾಗಿರುವ ಘಟನೆ ಸುಳ್ಯದ ವೆಂಕಟರಮಣ ಸೊಸೈಟಿ ಬಳಿ ನಡೆದಿದೆ. ಸುಳ್ಯದ ಮೊಗರ್ಪಣೆ ಬಳಿಯಿರುವ ವೆಂಕಟರಮಣ ಸೊಸೈಟಿ ಬಳಿ ತನ್ನ ಕಾರು ನಿಲ್ಲಿಸಿ ಶಾಹಿ ಎಂಬುವವರು ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ತನ್ನ ತಂಗಿ ಮನೆಗೆ ಹೋಗಿದ್ದರು. ತಂಗಿ ಮನೆಯಿಂದ ಹೊರ ಬಂದು ಕಾರು ಹತ್ತುತ್ತಿದ್ದಂತೆ ಸ್ಕಾರ್ಫಿಯೋ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಶಾಹಿ ಮೇಲೆ ಗುಂಡು ಹಾರಿಸಿದ್ದಾರೆ.

ಕಾರು ಶಾಹಿ ಅವರಿಗೆ ತಾಗದೇ ಕಾರಿಗೆ ತಾಗಿದ ಪರಿಣಾಮ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಆದರೆ ಗುಂಡಿನ ಚಿಲ್ ಅವರ ಹೊಟ್ಟೆ ಭಾಗಕ್ಕೆ ತಾಗಿದ್ದರಿಂದ ಸ್ವಲ್ಪ ಗಾಯವಾಗಿದೆ. ಸದ್ಯ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!