Sunday, May 5, 2024
Homeತಾಜಾ ಸುದ್ದಿಲೋಕಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಪಡೆದ ಬೆನ್ನಲ್ಲೇ ಒಡೆಯರ್ ಗೆ ಸಿದ್ದು ಕೊಟ್ಟ ಶಾಕ್; ಚುನಾವಣಾ...

ಲೋಕಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಪಡೆದ ಬೆನ್ನಲ್ಲೇ ಒಡೆಯರ್ ಗೆ ಸಿದ್ದು ಕೊಟ್ಟ ಶಾಕ್; ಚುನಾವಣಾ ಹೊಸ್ತಿಲಲ್ಲಿ ಮರುಜೀವ ಪಡೆಯಲಿದೆ ಬೆಂಗಳೂರು ಅರಮನೆ ಮೈದಾನದ ವ್ಯಾಜ್ಯ ಜ್ಯಾಗ

spot_img
- Advertisement -
- Advertisement -

ಬೆಂಗಳೂರು: ಮೈಸೂರು-ಕೊಡಗು ಲೋಕಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಯದುವೀರ್ ಒಡೆಯರ್ ಗೆ ಘೋಷಣೆ ಆದ ಮರು ದಿನವೇ ಬೆಂಗಳೂರು ಅರಮನೆ ಮೈದಾನದ (ಮೈಸೂರು ಅರಸರ ಕುಟುಂಬದ ಸುಪರ್ದಿಯಲ್ಲಿರುವ ಜಾಗ) ಜಾಗದ ವ್ಯಾಜ್ಯ ವಿಚಾರದ ಕುರಿತು ಒಡೆಯರಿಗೆ ಬಿಗ್ ಶಾಕ್ ಎದುರಾಗಿದೆ.

ಬೆಂಗಳೂರಿನ ಅರಮನೆ ಮೈದಾನದ ಜಾಗದ ವ್ಯಾಜ್ಯ ಬಹಳ ಕಾಲದಿಂದ ಸುಪ್ರೀಂಕೋರ್ಟ್ ನಲ್ಲಿ ವಿಚಾರಣಾ ಹಂತದಲ್ಲಿದ್ದು, ಇದೀಗ ರಾಜ್ಯ ಸರ್ಕಾರ ಚುನಾವಣಾ ಹೊಸ್ತಿಲಲ್ಲಿ ಇದಕ್ಕೆ ಮರು ಜೀವ ಕೊಡುವ ಕಾರ್ಯಕ್ಕೆ ಮುಂದಾಗಿರುವುದು ಕಂಡುಬಂದಿದೆ. ಈ ಪ್ರಕರಣದ ಬಗ್ಗೆ ರಾಜ್ಯ ಸರಕಾರ ವಿಶೇಷ ಆಸಕ್ತಿ ವಹಿಸಿರುವುದು ಕುತೂಹಲ ಸೃಷ್ಟಿಸಿದೆ.

ಮೈಸೂರು ಅರಮನೆಗೆ ಸೇರಿರುವ ಜಾಗ ಬೆಂಗಳೂರಿನ ಅರಮನೆ ಮೈದಾನದಲ್ಲಿದ್ದು, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ರಿಗೆ ಅಲ್ಲಿ ನಾಲ್ಕು ಪಾಲಿದೆ. ಅವರ ಸಹೋದರಿಯರಿಗೆ ತಲಾ 28 ಎಕರೆ ಸೇರಿದೆ. ಓರ್ವ ಸಹೋದರಿಯ ಪುತ್ರರಾಗಿರುವ ಯದುವೀರ್ ಗೆ ಇನ್ನೂ ನೇರ ಹಕ್ಕು ಬಂದಿಲ್ಲವೆಂದು ತಿಳಿದು ಬಂದಿದೆ. ಅಲ್ಲದೆ ಪಾಲು ಹಂಚಿಕೆ ವಿಚಾರದಲ್ಲಿ ಶ್ರೀಕಂಠದತ್ತ ಒಡೆಯರ್ ವಿರುದ್ಧ ಅವರ ಸಹೋದರಿಯರು ಹೂಡಿರುವ ಪ್ರತ್ಯೇಕ ಪ್ರಕರಣ ನ್ಯಾಯಾಲಯದಲ್ಲಿದೆ. ಇಷ್ಟರ ಹೊರತಾಗಿ ಇಡೀ ಜಾಗ ಸರ್ಕಾರ ವಶಕ್ಕೆ ಪಡೆಯಲು ಕಾನೂನು ಮಾಡಿದ್ದು ರಾಜ್ಯ ಹೈಕೋರ್ಟ್ ನಲ್ಲಿ ವಿಚಾರಣೆ ನಡೆದು ಸರ್ಕಾರದ ಪರ ತೀರ್ಪು ಬಂದಿದೆ. ಬಳಿಕ ಒಡೆಯರ್ ಕುಟುಂಬ ಸುಪ್ರಿಂಕೋರ್ಟ್ ನಲ್ಲಿ ಪ್ರಶ್ನೆ ಮಾಡಿದ ಬಳಿಕ ಸುಪ್ರಿಂಕೋರ್ಟ್‌ ಯಥಾಸ್ಥಿತಿ ಕಾಪಾಡುವಂತೆ ಸೂಚನೆ ನೀಡಿದೆ. ಹೀಗಾಗಿ ಒಡೆಯರ್ ಕುಟುಂಬದ ಹಿಡಿತದಲ್ಲೇ ಆ ಜಾಗ ಇದೆ.

ಇದೀಗ ಆ ಜಾಗವನ್ನು ಸರ್ಕಾರದ ತೆಕ್ಕೆಗೆ ತೆಗೆದುಕೊಳ್ಳುವ ಕುರಿತು ಬಲವಾದ ವಾದ ಮಂಡಿಸಲು ಪ್ರಬಲ ವಕೀಲರನ್ನು ನೇಮಿಸುವಂತೆ ಅಧಿಕಾರಿಗಳಿಗೆ ಸಿಎಂ ತಾಕೀತು ಮಾಡಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಉತ್ತಮ ವಕೀಲ ರನ್ನು ನಿಯೋಜಿಸಿ ಮೂಲ ದಾವೆಯನ್ನು ಇತ್ಯರ್ಥಪಡಿಸಿ. ಇಷ್ಟು ವರ್ಷಗಳಾದರೂ ದಾವೆ ಯಥಾಸ್ಥಿತಿಯಲ್ಲಿದೆ ಎಂದರೆ ಅದಕ್ಕೆ ನಿಮ್ಮ ನಿರ್ಲಕ್ಷ್ಯ ಕಾರಣವಲ್ಲವೇ?’ ಎಂದು ಕಿಡಿಕಾರಿದರು.

ಇನ್ನು 1996ರಲ್ಲಿ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗಲೇ ಬೆಂಗಳೂರು ಅರಮನೆ ಜಾಗವನ್ನು ಸ್ವಾಧೀನ ಪಡಿಸಿಕೊಳ್ಳಲು ವಿಧೇಯಕ ಮಂಡಿಸಿ ಅಂಗೀಕಾರ ಪಡೆದು ಕಾಯ್ದೆ ಮಾಡಲಾಗಿತ್ತು. ಜಾಗವನ್ನು ಸಾರ್ವಜನಿಕ ಬಳಕೆಗೆ ಉದ್ದೇಶಿಸಲಾಗಿತ್ತು. ರಾಜಮನೆತನ ದವರು ಹೈಕೋರ್ಟೆ ಹೋಗಿದ್ದರೂ ಹೈಕೋರ್ಟ್‌ ಸರ್ಕಾರದ ಕ್ರಮವನ್ನು ಎತ್ತಿ ಹಿಡಿದಿತ್ತು. ಈ ಬಗ್ಗೆ ಅವರು ಸುಪ್ರೀಂ ಕೋರ್ಟ್‌ ಮೇಲ್ಮನವಿ ಹೋಗಿದ್ದರು. ಸುಪ್ರೀಂ ಯಥಾಸ್ಥಿತಿ ಇರುವಂತೆ ನೀಡಿದ್ದ ಆದೇಶ ಇನ್ನು ಇದೆ ಎಂದರೆ ಏನರ್ಥ ಎಂದು ಅವರು ಪ್ರಶ್ನಿಸಿದರು.

ಪ್ರಕರಣದ ವಿವರ : ರಾಜ್ಯ ಸರ್ಕಾರವು 1996ರಲ್ಲಿ ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಕಾಯಿದೆ -1996ರ ಅಡಿ ಒಟ್ಟು 472.16 ಎಕರೆ ವಿಸ್ತೀರ್ಣದ ಬೆಂಗಳೂರು ಅರಮನೆ (ರಾಜಹಲ್ ವಿಲಾಸ್) ಜಾಗವನ್ನು ನಿಗದಿತ ಪರಿಹಾರ ನೀಡಿ ಸ್ವಾಧೀನಪಡಿಸಿಕೊಳ್ಳಲು ಕಾಯಿದೆ ಮಾಡಿತ್ತು. ಕಾಯಿದೆಯನ್ನು 1996ರ ನವೆಂಬರ್ 21ರಿಂದ ಅನ್ವಯವಾಗುವಂತೆ ಅನುಷ್ಠಾನಗೊಳಿಸಿತ್ತು.

ಶ್ರೀಕಂಠದತ್ತ ನರಸಿಂಹರಾಜ್ ಒಡೆಯ‌ರ್ ಈ ವಿಚಾರವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್ ರಾಜ್ಯ ಸರ್ಕಾರದ ಕ್ರಮವನ್ನು ಎತ್ತಿ ಹಿಡಿದಿತ್ತು. ಇದರ ವಿರುದ್ಧ ಸುಪ್ರೀಂ ಮೊರೆ ಹೋದ ಅವರು, ಆಸ್ತಿಯಲ್ಲಿ ತಮ್ಮ ಸಹೋದರಿಯರಿಗೂ ಪಾಲು ಈಗಾಗಲೇ ನೀಡಿರುವು ದಾಗಿ ಹೇಳಿ ವಾದ ಮಂಡಿಸಿದ್ದರು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹಾ ಗೂ ಯಾವುದೇ ಶಾಶ್ವತ ಕಟ್ಟಡಗಳನ್ನು ನಿರ್ಮಾಣ ಮಾಡ ದಂತೆ ಆದೇಶಿಸಿದೆ.

ಇನ್ನು ಈ ದಾವೆಯ ಅಂತಿಮ ತೀರ್ಪು ಯಾರ ಪರವಾಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.

- Advertisement -
spot_img

Latest News

error: Content is protected !!