Thursday, June 4, 2026
Homeಕರಾವಳಿದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಮಗೆ ಓಡಾಡೋಕೆ ಭಯವಾಗುತ್ತಿದೆ ; ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಮಗೆ ಓಡಾಡೋಕೆ ಭಯವಾಗುತ್ತಿದೆ ; ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ

- Advertisement -
- Advertisement -

ಬೆಂಗಳೂರು : ಮುಸ್ಲಿಂರಿಗೆ ಸಿದ್ದರಾಮಯ್ಯ, ಕ್ರಿಮಿನಲ್ ಗಳಿಗೆ ಡಿ.ಕೆ.ಶಿವಕುಮಾರ್ ನಾಯಕ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಮಗೆ ಓಡಾಡೋಕೆ ಭಯವಾಗುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಂರಿಗೆ ಸಿದ್ದರಾಮಯ್ಯ, ಕ್ರಿಮಿನಲ್ ಗಳಿಗೆ ಡಿ.ಕೆ. ಶಿವಕುಮಾರ್ ನಾಯಕರಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಮಗೆ ಓಡಾಡೋಕೆ ಭಯವಾಗುತ್ತಿದೆ. ನಮ್ಮ ಕಾರು ಹೋಗುವಾಗ ಹಿಂದೆಯಿಂದ ಹಸಿರುಧ್ವಜ ಹಿಡಿದು ಬರ್ತಾರೆ, ಸಿದ್ದರಾಮಯ್ಯ ಬರ್ತಾರೆ ನಿಮ್ಮನ್ನು ನೋಡಿಕೊಳ್ಳುತ್ತಾರೆ ಅಂತಾರೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಗೋಹತ್ಯೆ ಕಾಯ್ದೆಯನ್ನು ಹಿಂಪಡೆಯುವುದಾಗಿ ಕಾಂಗ್ರೆಸ್ ನವರು ಹೇಳಿದ್ದಾರೆ. ಕೇರಳದಲ್ಲಿ ರಸ್ತೆಯಲ್ಲಿ ಹಸುಗಳನ್ನು ಹತ್ಯೆಗೈದ ರಸೂಲ್ ನನ್ನು ಕಾಂಗ್ರೆಸ್ ಯುವ ಮೊರ್ಚಾ ಅಧ್ಯಕ್ಷನನ್ನಾಗಿ ಮಾಡಿದೆ. ಅಂಥವನ ಜೊತೆಗೆ ಡಿ.ಕೆ.ಶಿವಕುಮಾರ್ ಓಡಾಡುತ್ತಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ 1,700 ಪಿಎಫ್ ಐ ಕಾರ್ಯಕರ್ತರ ಮೇಲಿನ ಕೇಸ್ ವಾಪಸ್ ಪಡೆದಿದ್ದಾರೆ ಎಂದಿದ್ದಾರೆ.

- Advertisement -

Latest News

error: Content is protected !!