Wednesday, June 3, 2026
Homeಕರಾವಳಿಬಂಟ್ವಾಳ : ಖಡಕ್ ಐಪಿಎಸ್ ಅಧಿಕಾರಿ ಶಿವಾಂಶು ರಜಪೂತ್ ಮತ್ತೆ ಕರ್ತವ್ಯಕ್ಕೆ ಹಾಜರು

ಬಂಟ್ವಾಳ : ಖಡಕ್ ಐಪಿಎಸ್ ಅಧಿಕಾರಿ ಶಿವಾಂಶು ರಜಪೂತ್ ಮತ್ತೆ ಕರ್ತವ್ಯಕ್ಕೆ ಹಾಜರು

- Advertisement -
- Advertisement -

ಬಂಟ್ವಾಳ : ಕಡಿಮೆ ಅವಧಿಯಲ್ಲಿ ಖಡತ್ ಐಪಿಎಸ್ ಅಧಿಕಾರಿಯೆಂದೇ ಹೆಸರು ಗಳಿಸಿದ ಶಿವಾಂಶು ರಜಪೂತ್ ಅವರು ಮೂರು ತಿಂಗಳ ತರಬೇತಿ ಬಳಿಕ ಮತ್ತೆ ಬಂಟ್ವಾಳ ಎಎಸ್ಪಿ ಯಾಗಿ ಅಧಿಕಾರವನ್ನು ಇಂದು ಸ್ವೀಕರಿಸಿಕೊಂಡರು.

ಕಳೆದ ವರ್ಷ ಅಗಸ್ಟ್ 1 ರಂದು ಬಂಟ್ವಾಳ ಉಪ ವಿಭಾಗಕ್ಕೆ 2019-20 ನೇ ಐಪಿಎಸ್ ಬ್ಯಾಚ್ ನ ಶಿವಾಂಶು ರಜಪೂತ್ ಅವರು ಅಧಿಕಾರ ಸ್ವೀಕರಿಸಿಕೊಂಡಿದ್ದರು. ಜನವರಿ 15 ರಂದು ಹೈದರಾಬಾದ್ ಹೆಚ್ಚಿನ ತರಬೇತಿಗಾಗಿ ಹೋಗಿದ್ದರು ಈ ವೇಳೆ ಇವರ ಜಾಗಕ್ಕೆ ತಾತ್ಕಾಲಿಕವಾಗಿ ಬೆಂಗಳೂರು ಅಂತರಿಕ ಭದ್ರತಾ ವಿಭಾಗದಲ್ಲಿದ್ದ ಡಿವೈಎಸ್ಪಿ ಪ್ರತಾಪ್ ಥೋರಟ್ ಅವರನ್ನು ನೇಮಿಸಲಾಗಿತ್ತು. ತರಬೇತಿಯನ್ನು ಏಪ್ರಿಲ್‌ 29 ರಂದು ಮುಗಿಸಿ ಮತ್ತೆ ಬಂಟ್ವಾಳ ಎಎಸ್ಪಿಯಾಗಿ ಕರ್ತವ್ಯಕ್ಕೆ ಏ.30 ಶನಿವಾರದಂದು ಬೆಳಗ್ಗೆ ಹಾಜರಾಗಿದ್ದಾರೆ. ಡಿವೈಎಸ್ಪಿ ಪ್ರತಾಪ್ ಥೋರಟ್ ಬೆಂಗಳೂರು ಅಂತರಿಕ ಭದ್ರತಾ ವಿಭಾಗಕ್ಕೆ ವಾಪಸಗಿದ್ದಾರೆ.

ಶಿವಾಂಶೂ ರಾಜಪೂತ್ ಅವರು ಅತಿ ಕಡಿಮೆ ಅವಧಿಯಲ್ಲಿ ಬಂಟ್ವಾಳ ಉಪವಿಭಾದಲ್ಲಿ ಸಾರ್ವಜನಿಕರ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಪ್ರೀತಿ ಗಳಿಸಿದ್ದರು. ಬಂಟ್ವಾಳ ಕೋಮು ಸೂಕ್ಷ್ಮ ಪ್ರದೇಶವಾದ ಇಲ್ಲಿ ಯಾವುದೇ ಒಂದು ಅಹಿತಕರ ಘಟನೆ ನಡೆಯದಂತೆ ಪ್ರಮುಖ ಪಾತ್ರ ವಹಿಸಿದ್ದರು. ಅದಲ್ಲದೆ ಅನೇಕ ಅಕ್ರಮಗಳಿಗೆ ಮಾರು ವೇಷದಲ್ಲಿ ರಾತ್ರಿ ಹಗಲು ಎನ್ನದೆ ತಮ್ಮ ಸಿಬ್ಬಂದಿ ಜೊತೆ ಹೋಗಿ ದಾಳಿ ಮಾಡಿ ಬಂದ್ ಮಾಡಿಸಿದ್ದರು.

- Advertisement -

Latest News

error: Content is protected !!