Friday, June 5, 2026
Homeಕರಾವಳಿಸುಳ್ಯ: ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿ ಪರಾರಿಯಾಗಲು ಯತ್ನಿಸಿದ ಲಾರಿ ಚಾಲಕ: ಬೆನ್ನತ್ತಿ ಲಾರಿಯನ್ನು ತಡೆ...

ಸುಳ್ಯ: ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿ ಪರಾರಿಯಾಗಲು ಯತ್ನಿಸಿದ ಲಾರಿ ಚಾಲಕ: ಬೆನ್ನತ್ತಿ ಲಾರಿಯನ್ನು ತಡೆ ಹಿಡಿದ ಯುವಕರು

- Advertisement -
- Advertisement -

ಸುಳ್ಯ: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ ಲಾರಿ ಚಾಲಕನನ್ನು ಸ್ಥಳೀಯರು ಬೆನ್ನತ್ತಿ ಹೋಗಿ ಹಿಡಿದ ಘಟನೆ ಅಂಗಡಿ ಮಜಲು ಎಂಬಲ್ಲಿ ನಡೆದಿದೆ.

ಮರ್ಕಂಜದಿಂದ ಜಲ್ಲಿ ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದು ಅಂಗಡಿಮಜಲು ಬಳಿ ಮಡಪ್ಪಾಡಿ ಕಡೆಯಿಂದ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಬಳಿಕ ಲಾರಿಯನ್ನು ನಿಲ್ಲಿಸದೆ ಚಾಲಕ ಹೋಗಿದ್ದಾನೆ. ಕೂಡಲೇ ಸ್ಥಳೀಯ ಯುವಕರು ಲಾರಿಯನ್ನು ಸೇವಾಜೆ ಬಳಿ ತಡೆದಿದ್ದಾರೆ. ಬಳಿಕ ರಾಜಿಯಲ್ಲಿ ಪ್ರಕರಣವನ್ನು ಇತ್ಯರ್ಥಗೊಳಿಸಲಾಗಿದೆ.

- Advertisement -

Latest News

error: Content is protected !!