Sunday, May 19, 2024
Homeಕರಾವಳಿಬೆಳ್ತಂಗಡಿ : ಉಜಿರೆಯ ಪೆರ್ಲದಲ್ಲಿ ಪುರಾತನ ಶಿವಲಿಂಗ ಪತ್ತೆ

ಬೆಳ್ತಂಗಡಿ : ಉಜಿರೆಯ ಪೆರ್ಲದಲ್ಲಿ ಪುರಾತನ ಶಿವಲಿಂಗ ಪತ್ತೆ

spot_img
- Advertisement -
- Advertisement -

ಬೆಳ್ತಂಗಡಿ : ಉಜಿರೆಯ ಪೆರ್ಲದಲ್ಲಿ ಗ್ರಾಮಸ್ಥರಿಂದ ಪುರಾತನ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ನವೀಕರಣಕ್ಕಾಗಿ ದೈವಜ್ಞರಿಂದ ಅಷ್ಟಮಂಗಲ ಪ್ರಶ್ನೆ ಇಟ್ಟ ಸಂದರ್ಭದಲ್ಲಿ ದೇವಸ್ಥಾನದ ಕುರುಹು ಇದ್ದ ಪಕ್ಕದ ಮಣ್ಣಿನಡಿಯಲ್ಲಿ ಪುರಾತನ ಶಿವಲಿಂಗವೊಂದು ಡಿ.16 ರಂದು(ಇಂದು) ಪತ್ತೆಯಾಗಿದೆ.

ಪೆರ್ಲದಲ್ಲಿ ಕಳೆದ ಡಿ.8 ಮತ್ತು 9 ಹಾಗೂ 15 ಮತ್ತು 16ರಂದು ದೈವಜ್ಞರಾದ ನೆಲ್ಯಾಡಿ ಶ್ರೀಧರ ಗೋರೆಯವರ ನೇತೃತ್ವದಲ್ಲಿ ಅಷ್ಟಮಂಗಲ ಪ್ರಶ್ನೆ ನಡೆಯುತ್ತಿತ್ತು. ಈ ವೇಳೆ  ಪರಿಸರದಲ್ಲಿ ಶಿವನ ಸಾನಿಧ್ಯವಿದೆಯೆಂದು ಗೋಚರಿಸುತ್ತದೆ ಎಂದು ತಿಳಿಸಿದ್ದರು. ಅಂತೆಯೇ ಅವರು ತಿಳಿಸಿದ ಜಾಗದಲ್ಲಿ ಅಗೆದಾಗ ಮಣ್ಣಿನಡಿಯಲ್ಲಿ ಪುರಾತನ ಶಿವಲಿಂಗ ಪತ್ತೆಯಾಗಿದೆ.

ದೇವಸ್ಥಾನದ ಜೀರ್ಣೋದ್ದಾರಕ್ಕಾಗಿ ಕೆಲಸ ಕಾರ್ಯಗಳು ನಡೆಯುತ್ತಿದ್ದು ಉಜಿರೆ ಗ್ರಾ.ಪಂ ಉಪಾಧ್ಯಕ್ಷ ರವಿಕುಮಾರ್ ಇವರ ಅಧ್ಯಕ್ಷತೆಯಲ್ಲಿ ಮೊಕ್ತೇಸರ ಹಾಗೂ ಕಾರ್ಯದರ್ಶಿ ಕೃಷ್ಣ ಒಪ್ಪಂತಾಯ ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ. ಅಷ್ಟಮಂಗಲ ಪ್ರಶ್ನೆ ಸಂದರ್ಭದಲ್ಲಿ ಶ್ರೀಧರ ಗೋರೆ ಅವರ ಜತೆಗೆ ಮಂಗಳೂರು ಮಂಗಳಾದೇವಿ ದೇವಸ್ಥಾನದ ಅರ್ಚಕ ಗಣೇಶ್ ಐತಾಳ, ಶ್ರೀನಿಧಿ ಮುಚ್ಚಿನ್ನಾಯ ಕಾರಿಂಜ, ಅರ್ಚಕ ಅನಂತ ಇರ್ವತ್ರಾಯ ಸಹಕರಿಸಿದರು.ಸ್ಥಳೀಯರಾದ ರಾಮಣ್ಣ ನಾಯ್ಕ, ಉಜಿರೆ ಗ್ರಾ.ಪಂ ಮಾಜಿ ಅಧ್ಯಕ್ಷ ಶ್ರೀಧರ ಪೂಜಾರಿ, ಪಿ.ಬಿ ಬೂಚನಾಯ್ಕ, ದಾಮೋದರ, ಪ್ರವೀಣ್ ಕುಮಾರ್,ಇತರರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!