- Advertisement -
- Advertisement -
ಶಿಶಿಲ: ದಕ್ಷಿಣ ಕನ್ನಡ ಜಿಲ್ಲೆಯ ಮತ್ಸ್ಯ ತೀರ್ಥ ಪ್ರಖ್ಯಾತ ಶಿಶಿಲ ಗ್ರಾಮದ ಶ್ರೀ ಶಿಶಿಲೆಶ್ವರ ದೇವರ ಜಾತ್ರೆಗೂ ಕೊರೊನಾ ಕರಿನೆರಳಿನ ಭಾಧೆ ತಟ್ಟಿದೆ.
ಶತಮಾನದ ಇತಿಹಾಸ ಇರುವ ಈ ಜಾತ್ರೆ ಈ ತನಕ ನಿಂತಿರುವುದಿಲ್ಲ. ದ.ಕ. ಜಿಲ್ಲೆಯಲ್ಲಿ ಕೊನೆಯ ಜಾತ್ರೆ ಇದಾಗಿದ್ದು ತುಳುನಾಡಿನ ಕೊರೊತ್ತಾಯನ ಎಂಬ ಹೆಸರಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಜಾತ್ರೆ ಮಾಡುವುದು ತೊಂದರೆ ಆಗಿರುತ್ತದೆ. ಆದುದರಿಂದ ದೇವಾಲಯದ ತಂತ್ರಿಗಳ ನಿರ್ದೆಶನದಂತೆ ಬೆರಳೆಣಿಕೆಯಷ್ಟು ಮಂದಿಯ ಪಾಲ್ಗೊಳ್ಳುವಿಕೆಯಲ್ಲಿ ವೈದಿಕ ಕಾರ್ಯಕ್ರಮ ಸಂಪ್ರದಾಯದಂತೆ ಜಾತ್ರೆ ಜರಗಲಿರುವುದಾಗಿ ತಿಳಿದುಬಂದಿದೆ. ಅಲ್ಲದೆ ಈ ಸಂಧರ್ಭದಲ್ಲಿ ಭಕ್ತಾಧಿಗಳಿಗೆ ಪ್ರವೇಶ ಇರುವುದಿಲ್ಲ. ಅಲ್ಲದೆ ದಾಸೊಹದ ವ್ಯವಸ್ಥೆ ಇರುವುದಿಲ್ಲ ಎಂದು ತಿಳಿದು ಬಂದಿದೆ.
- Advertisement -