Thursday, June 4, 2026
Homeಕರಾವಳಿಮಂಗಳೂರುಮಂಗಳೂರು; ಕೊಲಂಬೊದಿಂದ ಮುಂಬೈಗೆ ತೆರಳುತ್ತಿದ್ದ ಸಿಂಗಾಪುರ ಧ್ವಜ ಹೊತ್ತ ಕಂಟೇನರ್ ಹಡಗಿನಲ್ಲಿ ಅಗ್ನಿ ಅನಾಹುತ; ನಾಲ್ವರು...

ಮಂಗಳೂರು; ಕೊಲಂಬೊದಿಂದ ಮುಂಬೈಗೆ ತೆರಳುತ್ತಿದ್ದ ಸಿಂಗಾಪುರ ಧ್ವಜ ಹೊತ್ತ ಕಂಟೇನರ್ ಹಡಗಿನಲ್ಲಿ ಅಗ್ನಿ ಅನಾಹುತ; ನಾಲ್ವರು ನಾಪತ್ತೆ, ಐವರಿಗೆ ಗಾಯ

- Advertisement -
- Advertisement -

ಮಂಗಳೂರು; ಲಂಬೊದಿಂದ ಮುಂಬೈಗೆ ತೆರಳುತ್ತಿದ್ದ ಸಿಂಗಾಪುರ ಧ್ವಜ ಹೊತ್ತ ಕಂಟೇನರ್ ಹಡಗು MV ವಾನ್ ಹೈ 503, ಕೇರಳದ ಬೇಪೋರ್ ಕರಾವಳಿಯಿಂದ ಸುಮಾರು 78 ನಾಟಿಕಲ್ ಮೈಲು ದೂರದಲ್ಲಿ ಹಡಗಿನಲ್ಲಿ ಭಾರಿ ಜೂನ್ 9 ರಂದು ಬೆಂಕಿ ಅವಘಡ ಸಂಭವಿಸಿದೆ

22 ಸಿಬ್ಬಂದಿಯಲ್ಲಿ 18 ಜನರನ್ನು ಭಾರತೀಯ ನೌಕಾಪಡೆಯ ನೌಕೆ INS ಸೂರತ್ ರಕ್ಷಿಸಿದೆ.  ಆದರೆ 4 ಸಿಬ್ಬಂದಿ ಇನ್ನೂ ಕಾಣೆಯಾಗಿದ್ದಾರೆ. ಐದು ಮಂದಿ ಸಿಬ್ಬಂದಿಗೆ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಗಾಯಗೊಂಡ ಸಿಬ್ಬಂದಿಯನ್ನು ಹೊತ್ತ INS ಸೂರತ್ ಇಂದು ರಾತ್ರಿ  ಪಣಂಬೂರಿನ ನ್ಯೂ ಮಂಗಳೂರು ಬಂದರು ಪ್ರಾಧಿಕಾರ (NMPA)ಕ್ಕೆ ಆಗಮಿಸುವ ನಿರೀಕ್ಷೆಯಿದೆ. ಗಾಯಾಳುಗಳಿಗೆ ತಕ್ಷಣದ ವೈದ್ಯಕೀಯ ಚಿಕಿತ್ಸೆ ನೀಡಲು ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳು ವ್ಯವಸ್ಥೆ ಮಾಡಿದ್ದಾರೆ. ಹಡಗನಲ್ಲಿ ಚೀನಾ -8, ತೈವಾನ್ -4  ಮ್ಯಾನ್ಮಾರ್ ನಿಂದ ಇಬ್ಬರು ಹಾಗೂ  ಇಂಡೋನೇಷ್ಯಾದ ಸಿಬ್ಬಂದಿಯಿದ್ದರು ಎನ್ನಲಾಗಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

- Advertisement -

Latest News

error: Content is protected !!