Friday, June 27, 2025
HomeUncategorizedಹೋಟೆಲ್ ಉದ್ಯಮಕ್ಕೆ ಗುಡ್ ಬೈ ಹೇಳಿದ  ಶೈನ್ ಶೆಟ್ಟಿ;  ಗಲ್ಲಿ ಕಿಚನ್ ಮಾರಾಟ ಮಾಡಿ ನಟನ...

ಹೋಟೆಲ್ ಉದ್ಯಮಕ್ಕೆ ಗುಡ್ ಬೈ ಹೇಳಿದ  ಶೈನ್ ಶೆಟ್ಟಿ;  ಗಲ್ಲಿ ಕಿಚನ್ ಮಾರಾಟ ಮಾಡಿ ನಟನ ಭಾವುಕ ಪೋಸ್ಟ್

spot_img
- Advertisement -
- Advertisement -

ಬೆಂಗಳೂರು; ಬಿಗ್ ಬಾಸ್ ಸೀಸನ್ 7 ರ ವಿನ್ನರ್ , ಗಲ್ಲಿ ಕಿಚನ್ ಖ್ಯಾತಿಯ ಶೈನ್ ಶೆಟ್ಟಿ ತಮ್ಮ ಹೋಟೆಲ್ ಉದ್ಯಮಕ್ಕೆ ವಿದಾಯ ಹೇಳಿದ್ದಾರೆ. ಗಲ್ಲಿ ಕಿಚನ್ ನನ್ನು ಮಾರಾಟ ಮಾಡಿರೋದಾಗಿ ಭಾವುಕ ಪೋಸ್ಟ್ ಒಂದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಅವರ ಪೋಸ್ಟ್ ಈ ರೀತಿಯಿದೆ.  ಗಲ್ಲಿ ಕಿಚನ್ ಎಂಬ ಕನಸನ್ನು ಬೆಳಸಿದ ಎಲ್ಲರಿಗೂ,ಜೀವನದ ಕೆಲವೊಂದು ಪ್ರಯಾಣ ನಮ್ಮ ಅಸ್ತಿತ್ವನ ತೋರ್ಸಿ ನಮ್ಮ ವ್ಯಕ್ತಿತ್ವನ ಎತ್ತಿ ಹಿಡಿಯುತ್ತೆ ನನ್ನ ಲೈಫ್ ಅಲ್ಲಿ ಅದು ಗಲ್ಲಿ ಕಿಚನ್. ಜೀವನ ಸಾಕೆ ಅಂತ ಶುರು ಮಾಡಿದ ಒಂದು ಪುಟ್ಟ ದೋಸೆ ಕ್ಯಾಂಪ್ ನೀವೆಲ್ಲ ಇಷ್ಟಾ ಪಟ್ಟು ಕೊಂಡಾಡಿ ಎರಡು ಬ್ರಾಂಚ್ ಗಳ ಹೋಟೆಲ್ ಮಟ್ಟಕ್ಕೆ ಪ್ರೀತಿಯಿಂದ ಬೆಳೆಸಿದ್ರಿ. ಆ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಚಿರರಣಿ.

ಆದ್ರೆ ಬೆಳೀತಾ ಬೆಳಸ್ತಾ ಮುಂದಕ್ಕೆ ಸಾಗೋದೆ ಜೀವನ ಅಲ್ವಾ. So, ಮುಂದೊಂದಿಷ್ಟು ಕೆಲಸ ಮಾಡೋದ್ ಇದೆ ಅದಕ್ಕಾಗಿ ಹೊಸದೊಂದು ಪ್ರಯಾಣ ಶುರು ಮಾಡಬೇಕಾಗಿದೆ. ಹಾಗಾಗಿ 6 ವರ್ಷಗಳ ಗಲ್ಲಿ ಕಿಚನ್ ಪ್ರಯಾಣಕ್ಕೆ ವಿದಾಯ ಹೇಳೋ ಸಮಯ. ವಿದಾಯ ಹೇಳೋದು ಇಲ್ಲಿ ಬರದಷ್ಟು ಸುಲಭ ಅಲ್ಲ ನಿಮ್ಮ ಗೊತ್ತು. ಆದ್ರೆ, ಜೀವನದಲ್ಲಿ ದಿಕ್ಕು ಮತ್ತು ಗುರಿ ಬದಲಾದಾಗ ಅದಕ್ಕೆ ಹೊಂಡ್ಕೊಂಡು ಹೋಗೋದು ಅನಿವಾರ್ಯ.

ಗಲ್ಲಿ ಕಿಚನ್ನನ ನನ್ನಂತೆ ಆಸಕ್ತಿ ಇರೋ ಯುವ ಪ್ರತಿಭೆಗೆ ಹಸ್ತಾಂತ್ರ ಮಾಡಿದೀನಿ. ಈ ಕನಸಿಗೆ ಹೊತ್ತಿದ್ದ ಜ್ವಾಲೆ ಇನ್ನು ಮುಂದೆ ಹೊಸ ಪಾಲುದಾರನ ಕೈಯಲ್ಲಿ ಹೊಸ ರೀತಿಯಲ್ಲಿ ಮುಂದುವರಿಯಲಿದೆ. ಶ್ರದ್ಧೆ ಇಂದ ಜನರ ಪ್ರೀತಿನ ಉಳ್ಕೊಂಡು ಬೆಳಸ್ಕೊಂಡು ಹೋಗ್ಲಿ ಅಂತ ಆಶಿಸ್ತೀನಿ.

ತಿಂದುಂಡು ಹೊಗಳಿದ, ತಪ್ಪಿದ್ದಲ್ಲಿ ತಿದ್ದಿದ ನನ್ನೆಲ್ಲ ಅಭಿಮಾನಿಗಳೇ, ಭೋಜನ ಪ್ರಿಯರೇ, ಗಲ್ಲಿ ಕಿಚನ್ ಕುಟುಂಬಸ್ಥರೆ, ಮತ್ತೊಂದು ಪ್ರಯತ್ನದೊಂದಿಗೆ ಮರಳಿ ಬರುವೆ, ಮತ್ತೊಮ್ಮೆ ನಿಮ್ಮೆಲ್ಲರ ಸಹಕಾರ ಪ್ರೀತಿ ಬೇಡುವೆ.ಪ್ರೀತಿ ಇರಲಿ, ಶೈನ್ ಶರಶ್ ಶೆಟ್ಟಿ ಎಂದು ಹೇಳಿದ್ದಾರೆ.

- Advertisement -
spot_img

Latest News

error: Content is protected !!