Thursday, July 4, 2024
Homeಕರಾವಳಿಮಂಗಳೂರುಬೆಳ್ತಂಗಡಿ: ಮೇಲಂತಬೆಟ್ಟುವಿನ ಕಲ್ಲಿನ ಕೋರೆ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ; ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದವರಿಗೆ...

ಬೆಳ್ತಂಗಡಿ: ಮೇಲಂತಬೆಟ್ಟುವಿನ ಕಲ್ಲಿನ ಕೋರೆ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ; ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದವರಿಗೆ ತಕ್ಕ ಶಿಕ್ಷೆಯಾಗಲಿ ಎಂದ ಶಶಿರಾಜ್ ಶೆಟ್ಟಿ

spot_img
- Advertisement -
- Advertisement -

ಬೆಳ್ತಂಗಡಿ: ಮೇಲಂತಬೆಟ್ಟುವಿನಲ್ಲಿ ನಡೆದ ಕಲ್ಲಿನ ಕೋರೆಯ ಪ್ರಕರಣಕ್ಕೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ. ಕಾಂಗ್ರೆಸ್ ನವರು ಷಡ್ಯಂತ್ರ ಮಾಡಿ , ನನ್ನ ಮೇಲೆ ವೈಯಕ್ತಿಕ ದ್ವೇಷದಿಂದ ಕೇಸು ದಾಖಲಿಸಿದ್ದಾರೆ. ಕಾಂಗ್ರೆಸ್ ನವರ ಷಡ್ಯಂತ್ರದಿಂದಾಗಿ ನನ್ನ  ಮಾಡದ ತಪ್ಪಿಗೆ 27 ದಿನಗಳ ಕಾಲ ಸೆರೆಮನೆ ವಾಸ ಅನುಭವಿಸಬೇಕಾಯಿತು ಎಂದು ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಹೇಳಿದ್ದಾರೆ.

ಗುರುವಾಯನಕೆರೆ ನವಶಕ್ತಿ ಹಾಲ್ ನಲ್ಲಿ ನಡೆದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರುಕಳೆದ 19 ವರ್ಷಗಳಿಂದ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬಂದಿದ್ದು, ನನ್ನ ಕೆಲಸ ಗುರುತಿಸಿ ಬಿಜೆಪಿ ಪಕ್ಷ ನನ್ನನ್ನು ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷನ್ನಾಗಿ ಮಾಡಿದೆ. ಆದರೆ ಕಾಂಗ್ರೆಸಿನ ರಕ್ಷಿತ್ ಶಿವರಾಂ ನಾನೊಬ್ಬ ರೌಡಿ ಶೀಟರ್, ಹಪ್ತ ವಸೂಲಿಗ ಎಂದಿದ್ದಾರೆ. ರಕ್ಷಿತ್ ಶಿವರಾಂ ಅವರು ಮಾಡಿದ ಆರೋಪಗಳಿಗೂ ನನಗೂ ಯಾವುದೇ ಸಂಬಂಧವಿಲ್ಲ. ಒಂದು ವೇಳೆ ನಾನೂ ತಪ್ಪು ಮಾಡಿದ್ದರೆ, ನನಗೆ ಶಿಕ್ಷೆಯಾಗಿಲಿ, ಇಲ್ಲದಿದ್ದರೆ ಆರೋಪ ಮಾಡಿದವರಿಗೆ ತಕ್ಕ ಶಿಕ್ಷೆ ಸಿಗಲಿ. ಜು.8 ರಂದು ಕಾರಣಿಕ ಶಕ್ತಿ ಮಾರಿಗುಡಿಯಲ್ಲಿ ನಾನು ಪ್ರಾರ್ಥನೆ ಸಲ್ಲಿಸಲಿದ್ದೇನೆ ಎಂದಿದ್ದಾರೆ.

ಕಲ್ಲಿನ ಕೋರೆಯ ಪ್ರಕರಣದ ಹಿಂದೆ ಕಾಣದ ಕೈಗಳ ಕೈವಾಡವಿದೆ. ಪೋಲಿಸರು ರಾತ್ರಿ 11.45 ಕ್ಕೆ ಬಂದು ನನ್ನನ್ನು ವಿಚಾರಣೆಗಾಗಿ ಕರೆದುಕೊಂಡು ಹೋದರು. ಹೋಗುವಾಗ ನಾನು ಶಾಸಕರಿಗೆ ಕರೆ ಮಾಡಿ ಹೇಳಿದ್ದೇನೆ. ಪೋಲೀಸರಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ. ಕಲ್ಲಿನ ಕೊರೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದರೂ, ಬಿಡಲಿಲ್ಲ. ಬೇಕಾದರೆ ನನ್ನನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಎಂದರೂ ಕೇಳಲಿಲ್ಲ. ಕಾಂಗ್ರೆಸ್ ನವರು ಒತ್ತಡ ಹಾಕಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಮೇಲೆ ಕೇಸು ಹಾಕಿ ಒಳಗೆ ಹಾಕುವ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಪೋಲೀಸರು ಪ್ರಭಾವಕ್ಕೆ ಒಳಗಾಗಿ ನನ್ನ ಹೆಸರನ್ನು ಆರೋಪಿಗಳ ಪಟ್ಟಿಯಲ್ಲಿ ಸೇರಿಸಿದ್ದಾರೆ ಎಂದರು.

ವಸಂತ ಬಂಗೇರರು ಬೆಳ್ತಂಗಡಿಯಲ್ಲಿ ದ್ವೇಷ ರಾಜಕಾರಣ ಮಾಡಿದವರಲ್ಲ. ಏನಿದ್ರೂ ನೇರವಾಗಿ ಮಾತಾಡುತ್ತಿದ್ದರು. ಆದರೆ ರಕ್ಷಿತ್ ಶಿವರಾಂ ನನ್ನ ವಿರುದ್ದ ಸೇಡಿನ ರಾಜಕೀಯ ಮಾಡುತ್ತಿದ್ದಾರೆ. ಯಾವುದೇ ಗಂಭೀರವಾದ ಪ್ರಕರಣಗಳು ಇಲ್ಲದಿದ್ದರೂ ನನ್ನ ವಿರುದ್ದ ರೌಡಿಶೀಟ್ ಹಾಕಲಾಗಿದೆ‌. ಇದು ಕಾರ್ಯಕರ್ತರನ್ನು ಬೆದರಿಸುವ ತಂತ್ರವಾಗಿದೆ ಎಂದರು.

ನಾನು ಇಲ್ಲೆ ಹುಟ್ಟಿ ಇಲ್ಲೆ ಬೆಳೆದವನು. ರಕ್ಷಿತ್ ಶಿವರಾಂ ಬೆಳ್ತಂಗಡಿಗೆ ಬಂದು ನಾಲ್ಕು ವರ್ಷಗಳಾಗಿವೆ. ಸುಖ ಸುಮ್ಮನೆ ಬಿಜೆಪಿ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಬೆಳ್ತಂಗಡಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ ಪಾರೆಂಕಿ, ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ವಿನೀತ್ ಕೋಟ್ಯಾನ್ ಸಾವ್ಯ ಬಿಜೆಪಿ ಯುವಮೋರ್ಚಾ ಪದಾಧಿಕಾರಿಗಳಾದ ಹರೀಶ್‌ ಗೌಡ ಸಂಭೋಳ್ಯ ಸ್ವಸ್ತಿಕ್ ಗೌಡ ಹಟ್ಟತ್ತೋಡಿ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!