Friday, May 3, 2024
Homeತಾಜಾ ಸುದ್ದಿಮಂಗಳೂರು: ಕಡತ ವಿಲೇವಾರಿ ಸದುಪಯೋಗಕ್ಕೆ ಶಾಸಕ ವೇದವ್ಯಾಸ್ ಕಾಮತ್ ಮನವಿ

ಮಂಗಳೂರು: ಕಡತ ವಿಲೇವಾರಿ ಸದುಪಯೋಗಕ್ಕೆ ಶಾಸಕ ವೇದವ್ಯಾಸ್ ಕಾಮತ್ ಮನವಿ

spot_img
- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸುನೀಲ್ ಕುಮಾರ್ ಅವರ ಸೂಚನೆ ಮೇರೆಗೆ ಫೆ. 19ರಿಂದ ಫೆ.28ರ ವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಡತ ವಿಲೇವಾರಿ ಸಪ್ತಾಹ ಏರ್ಪಡಿಸಲಾಗಿದ್ದು, ಆಡಳಿತ ಯಂತ್ರವನ್ನು ಚುರುಕುಗೊಳಿಸುವ ಬಗ್ಗೆ ಹಾಗೂ ಜನರ ಕುಂದುಕೊರತೆಗಳಿಗೆ ಹಾಗೂ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸುವ ಉದ್ದೇಶವನ್ನು ಇಟ್ಟುಕೊಂಡು ಬಾಕಿ ಇರುವ ಹಳೆಯ ಕಡತಗಳನ್ನು ವಿಲೇವಾರಿ ಮಾಡಲು ಉದ್ದೇಶಿಸಲಾಗಿದೆ.


ಸರಕಾರದ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದು ಮತ್ತು ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು ಅತ್ಯಂತ ಪ್ರಮುಖವಾದ ಭಾಗವಾಗಿರುತ್ತದೆ.ಆದ್ದರಿಂದ ವಿವಿಧ ಯೋಜನೆಗಳಿಗೆ ಮತ್ತು ಸೇವೆಗಳಿಗೆ ಸಂಬಂಧಿಸಿದಂತೆ ಕಡತಗಳು ವಿವಿಧ ಕಚೇರಿಯಲ್ಲಿ ಬಾಕಿ ಇದ್ದಲ್ಲಿ, ಸಾರ್ವಜನಿಕರಿಗೆ ಸಕಾಲದಲ್ಲಿ ಸೇವೆಯನ್ನು ನೀಡಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಸಾರ್ವಜನಿಕರು ತಾಲೂಕು ಮಟ್ಟದ ವಿವಿಧ ಕಚೇರಿಗಳಲ್ಲಿ ತಮ್ಮ ಬೇಡಿಕೆ ಹಾಗೂ ಸಮಸ್ಯೆಗಳ ಕುರಿತಾಗಿ ವಿವಿಧ ರೀತಿಯಾಗಿ ಮನವಿಗಳನ್ನು ಮತ್ತು ಅರ್ಜಿಗಳನ್ನು ಸಲ್ಲಿಸುತ್ತಿದ್ದು, ಈ ಮನವಿಗಳ ಹಾಗೂ ಅರ್ಜಿಗಳ ಕುರಿತಾಗಿ ನಿಗದಿತ ಅವಧಿಯಲ್ಲಿ ಸೂಕ್ತ ಕ್ರಮವಹಿಸಿ ಅರ್ಜಿದಾರರಿಗೆ ತಿಳಿಸುವುದು ಅವಶ್ಯಕವಾಗಿರುತ್ತದೆ.

ಸಾರ್ವಜನಿಕರು ಮತ್ತು ಜನಸಾಮಾನ್ಯರು ಸಲ್ಲಿಸಿದ ಹಲವಾರು ಬೇಡಿಕೆ, ಮನವಿಗಳ ಕುರಿತು ಜಿಲ್ಲಾ ಮಟ್ಟದಲ್ಲಿ ಮತ್ತು ತಾಲೂಕು ಮಟ್ಟದಲ್ಲಿ ಯಾವುದೇ ಕ್ರಮವಹಿಸದೇ ಧೀರ್ಘ ಕಾಲದಿಂದ ಬಾಕಿ ಇರಿಸಿಕೊಂಡಿರುವ ಕಡತಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸುವ ಅವಶ್ಯಕತೆ ಇರುವ ಕಾರಣ ಈ ಬಗ್ಗೆ ಜಂಟಿ ಸುತ್ತೋಲೆಯನ್ನು ನೀಡಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಶಾಸಕ ವೇದವ್ಯಾಸ್ ಕಾಮತ್ ವಿನಂತಿಸಿದ್ದಾರೆ.

- Advertisement -
spot_img

Latest News

error: Content is protected !!