Wednesday, June 3, 2026
Homeಕರಾವಳಿಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ;  ಆರೋಪಿ ಶಾರೀಕ್ ಗೆ ಪಾಕಿಸ್ತಾನದ ಉಗ್ರ ಸಂಘಟನೆಗಳ ಜೊತೆ...

ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ;  ಆರೋಪಿ ಶಾರೀಕ್ ಗೆ ಪಾಕಿಸ್ತಾನದ ಉಗ್ರ ಸಂಘಟನೆಗಳ ಜೊತೆ ಸಂಪರ್ಕ ಶಂಕೆ

- Advertisement -
- Advertisement -

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ವೇಳೆ ಮಹತ್ವದ ಮಾಹಿತಿಯೊಂದು ಲಭ್ಯವಾಗಿದೆ.  ಆರೋಪಿ ಶಾರೀಕ್ ಗೆ ಪಾಕಿಸ್ತಾನದ ಉಗ್ರ ಸಂಘಟನೆಗಳ ಜೊತೆಗೆಸಂಪರ್ಕ ಹೊಂದಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.

ಕುಕ್ಕರ್ ಬಾಂಬ್ ಪ್ರಕರಣ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಮಹತ್ವದ ಮಾಹಿತಿಯೊಂದು ಸಿಕ್ಕಿದ್ದು, ಒಡಿಸ್ಸಾದ ಟಾಸ್ಕ್ ಪೋರ್ಸ್ ನಿಂದ ಪ್ರೀತಂಕಾರ್ ಬಂಧನದ ಬೆನ್ನಲ್ಲೇ ಕುಕ್ಕರ್ ಬಾಂಬ್ ಪ್ರಕರಣದ ಆರೋಪಿ ಶಾರೀಕ್ ಗೆ ಐಸಿಸ್ ಏಜೆಂಟ್ ಗಳ ಜೊತೆಗೆ ನಂಟು ಹೊಂದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಒಡಿಸ್ಸಾ ಮೂಲದ ಪ್ರೀತಂಕಾರ್ ಎಂಬಾತ ಶಾರೀಕ್ ಗೆ ಸಿಮ್ ಪೂರೈಕೆ ಮಾಡಿದ್ದ. ಮಾಹಿತಿ ತಿಳಿದ ಒಡಿಸ್ಸಾದ ಸ್ಪೆಷಲ್ ಟಾಸ್ಕ್ ಪೋರ್ಸ್ ಪ್ರೀತಂಕಾರ್ ನನ್ನು ಬಂಧಿಸಿ ತೀವ್ರ ವಿಚಾರಣೆ ಕೈಗೊಂಡಿದ್ದರು. ಈ ವೇಳೆ ಪಾಕಿಸ್ತಾನದ ಐಎಸ್ ಐ ಏಜೆಂಟ್ ಒಬ್ಬನಿಗೆ ಪ್ರೀತಂಕಾರ್ ಸಿಮ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್ ಪೂರೈಸಿದ್ದ ಎನ್ನುವ ವಿಚಾರ ತಿಳಿದುಬಂದಿದೆ.

- Advertisement -

Latest News

error: Content is protected !!