Friday, June 5, 2026
Homeಕರಾವಳಿಪ್ರವೀಣ್ ನೆಟ್ಟಾರು ಕೊಲೆಗೆ ಪ್ರತೀಕಾರವಾಗಿ ಫಾಝಿಲ್ ನನ್ನು ಕೊಲೆ ಮಾಡಲಾಗಿದೆ; ವಿ ಹೆಚ್ ಪಿ ಮುಖಂಡ...

ಪ್ರವೀಣ್ ನೆಟ್ಟಾರು ಕೊಲೆಗೆ ಪ್ರತೀಕಾರವಾಗಿ ಫಾಝಿಲ್ ನನ್ನು ಕೊಲೆ ಮಾಡಲಾಗಿದೆ; ವಿ ಹೆಚ್ ಪಿ ಮುಖಂಡ ಶರಣ್ ಪಂಪವೆಲ್ ವಿವಾದಾತ್ಮಕ ಹೇಳಿಕೆ

- Advertisement -
- Advertisement -

ತುಮಕೂರು:ಪ್ರವೀಣ್ ನೆಟ್ಟಾರು ಅವರ ಕೊಲೆಗೆ ಪ್ರತೀಕಾರವಾಗಿಯೇ ಸುರತ್ಕಲ್ ನಲ್ಲಿ  ಫಾಝೀಲ್ ನನ್ನು ಕೊಲೆ ಮಾಡಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ತುಮಕೂರಿನಲ್ಲಿ ನಡೆದ ಬಜರಂಗದಳದ ಶೌರ್ಯ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಶರಣ್ ಪಂಪ್ವೆಲ್, ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದ್ದ ಮುಸ್ಲಿಂ ಜಿಹಾದಿಗಳ ವಿರುದ್ದ ಸುರತ್ಕಲ್ ನಲ್ಲಿದ್ದ ಬಿಸಿ ರಕ್ತದ ಯುವಕರು ಮಾರ್ಕೆಟ್ ನಲ್ಲಿ ಜನರು ಇರುವಂತ ಸಂದರ್ಭದಲ್ಲೇ ನುಗ್ಗಿ ನುಗ್ಗಿ ಹೊಡೆದ ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರ ನೀಡಿದ್ದಾರೆ. ಇದು ಹಿಂದೂ ಯುವಕರ ತಾಕತ್ತು, ಇದು ಹಿಂದೂ ಯುವಕರ ಸಾಮರ್ಥ್ಯ ಎಂದು ಹೇಳಿಕೆ ನೀಡಿದ್ದಾರೆ. ಇದೀಗ ಸದ್ಯ ವಿವಾದಕ್ಕೆ ಕಾರಣವಾಗಿದೆ.

- Advertisement -

Latest News

error: Content is protected !!