Thursday, May 2, 2024
Homeತಾಜಾ ಸುದ್ದಿಮಂಗಳೂರು: ಮಳಲಿ ಮಸೀದಿ ವಿವಾದದಲ್ಲಿ ಹಿಂದೂ ನಾಯಕನ ವಿರುದ್ದ ಅಪಪ್ರಚಾರ: ಸಾಮಾಜಿಕ ತಾಣಗಳಲ್ಲಿ ಶರಣ್ ಪಂಪ್...

ಮಂಗಳೂರು: ಮಳಲಿ ಮಸೀದಿ ವಿವಾದದಲ್ಲಿ ಹಿಂದೂ ನಾಯಕನ ವಿರುದ್ದ ಅಪಪ್ರಚಾರ: ಸಾಮಾಜಿಕ ತಾಣಗಳಲ್ಲಿ ಶರಣ್ ಪಂಪ್ ವೆಲ್ ಅಶ್ಲೀಲ ಫೋಟೋ ವೈರಲ್

spot_img
- Advertisement -
- Advertisement -

ಮಂಗಳೂರು: ಮಳಲಿ ಮಸೀದಿ ವಿವಾದದಲ್ಲಿ ನಾಯಕತ್ವ ವಹಿಸಿದ್ದ ವಿಎಚ್ ಪಿ ಮುಖಂಡರೊಬ್ಬರ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಅಪಪ್ರಚಾರ ಮಾಡಲಾಗಿದ್ದು, ಈ ವಿಚಾರ ಕರಾವಳಿಯಲ್ಲಿ ಮತ್ತೊಂದು ಸಂಘರ್ಷಕ್ಕೆ ಕಾರಣವಾಗುತ್ತಾ ಎಂಬ ಆತಂಕ ಎದ್ದಿದೆ.

ಮಳಲಿ ಮಸೀದಿ ವಿವಾದದ ನಾಯಕತ್ವ ವಹಿಸಿದ ವಿಎಚ್ ಪಿ ಮುಖಂಡನ ಶರಣ್ ಪಂಪ್ ವೆಲ್ ವಿರುದ್ದ ಅಪಪ್ರಚಾರ ಮಾಡಲಾಗಿದ್ದು, ಸಾಮಾಜಿಕ ತಾಣಗಳಲ್ಲಿ ಶರಣ್ ಪಂಪ್ ವೆಲ್ ಅಶ್ಲೀಲ ಫೋಟೋಗಳನ್ನ ವೈರಲ್ ಮಾಡಲಾಗಿದೆ. ‘ವೀಲ್ಯದೆಲೆಯಲ್ಲಿ ಕಂಡು ಬಂದ ಅಮೋಘ ದೃಶ್ಯ’ ಅಂತ ಫೋಟೋ ವೈರಲ್ ಮಾಡಲಾಗಿದ್ದು, ಮಳಲಿ ವಿವಾದದ ನೇತೃತ್ವ ವಹಿಸಿದ ಕಾರಣಕ್ಕೆ ಅಶ್ಲೀಲ ಫೋಟೋ ವೈರಲ್ ಮಾಡಲಾಗಿದೆ ಎನ್ನಲಾಗಿದೆ. ‌ಹಿಂದೂ ನಾಯಕನ ವಿರುದ್ದ ಅಪಪ್ರಚಾರಕ್ಕೆ ಕಾರ್ಯಕರ್ತರು ಕೆಂಡವಾಗಿದ್ದು, ಫೋಟೋ ಎಡಿಟ್ ಮಾಡಿದವರ ವಿರುದ್ದ ಹಿಂದೂ ನಾಯಕರು ಬಹಿರಂಗವಾಗಿ ಸಂಘರ್ಷಕ್ಕೆ ಕರೆ ಕೊಟ್ಟಿದ್ದಾರೆ. ಈ ವಿಚಾರದಲ್ಲಿ ನಡೆದ ಪ್ರತಿಭಟನೆ ವೇಳೆ ಭಜರಂಗದಳದ ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ ಕೊಡಗಿನಲ್ಲಿ ನಡೆದ ತ್ರಿಶೂಲ ದೀಕ್ಷೆ, ಬಂದೂಕು ತರಬೇತಿಯನ್ನು ಸಮರ್ಥಿಸಿಕೊಂಡಿದ್ದಾರೆ. ತ್ರಿಶೂಲ ದೀಕ್ಷೆ, ಬಂದೂಕು ತರಬೇತಿ ಪಡೆದಿದ್ದು ಸಮಾಜಘಾತುಕರನ್ನ ಅಟ್ಟಾಡಿಸಿ ಹೊಡೆಯಲು. ದೇಶ ರಕ್ಷಣೆಗಾಗಿ ತ್ರಿಶೂಲ ದೀಕ್ಷೆ ಪಡೆದಿದ್ದು, ಪ್ರತೀ ಜಿಲ್ಲೆ, ಗ್ರಾಮದಲ್ಲಿ ದೀಕ್ಷೆ ಕೊಡ್ತೇವೆ. ಇದನ್ನ ತಾಕತ್ತಿದ್ರೆ ನಿಲ್ಲಿಸಿ, ಗ್ರಾಮ ಗ್ರಾಮಗಳಲ್ಲೂ ಕೊಡ್ತೇವೆ ಎಂದಿದ್ದಾರೆ. ಅಲ್ಲದೇ ಕೆಲವು ನಾಯಿಗಳ ಉಪಟಳ ಜಾಸ್ತಿಯಾಗಿದೆ, ಹುಚ್ಚು ನಾಯಿಗಳಿಗೆ ನೀಯತ್ತು ಕಮ್ಮಿ. ಈ ಹುಚ್ಚು ನಾಯಿಗಳಿಗೆ ಬಜರಂಗದಳ ಉತ್ತರ ಕೊಡಲಿದೆ.‌ ನಾಮರ್ಧ ಮುಸ್ಲಿಂ ಯುವಕರು ಶರಣ್ ಅವರ ಅಶ್ಲೀಲ ಫೋಟೋ ಹರಿಬಿಟ್ಟಿದ್ದಾರೆ‌. ನಮಗೂ ಜನ ಸೇರಿಸಲು ಗೊತ್ತಿದೆ, ಫೋಟೋ ಎಡಿಟ್ ಮಾಡಿದವನಿಗೆ ಉತ್ತರ ಕೊಡ್ತೇವೆ. ಅವನನ್ನ ಅವನ 72 ಕನ್ಯೆಯರ ಸ್ವರ್ಗಕ್ಜೆ ಕಳುಹಿಸಲು ಬಜರಂಗದಳ ಸಿದ್ದ ಎಂದಿದ್ದಾರೆ.

ಹಿಂದೂ ಸಮಾಜವನ್ನು ಕೆಣಕಬೇಡಿ, ಪ್ರತ್ಯುತ್ತರ ಕೊಡಲು ಮನಸ್ಸು ಮಾಡಿದರೆ ಗುಜರಾತ್, ಅಯೋಧ್ಯೆಯ ಇತಿಹಾಸವನ್ನು ತಿರುಚಿ ನೋಡಿ ಎಂದು  ಬಜರಂಗ ದಳದ ಪ್ರಾಂತ ಸಂಚಾಲಕ ಮುರಳೀ ಕೃಷ್ಣ ಹಂಸತ್ತಡ್ಕ ಎಚ್ಚರಿಸಿದ್ದಾರೆ. ಲವ್ ಜಿಹಾದ್, ಮತಾಂತರ, ಗೋಹತ್ಯೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹಿಂದೂ ನಾಯಕರ ಅವಹೇಳನ ಖಂಡಿಸಿ ವಿಶ್ವ ಹಿಂದು ಪರಿಷತ್ ಬಜರಂಗದಳ ವತಿಯಿಂದ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಮುಖ್ಯ ಭಾಷಣ  ಮಾಡಿದರು. ಅಡ್ಯಾರ್ ನಲ್ಲಿ ಪ್ರತಿಭಟನೆ ನಡೆಸಿದ ನಾಯಿಗಳು ಬಾಲದ ಮುಖಾಂತರ ಶರೀರವನ್ನು ಅಲ್ಲಾಡಿಸಲು ಪ್ರಯತ್ನ ಮಾಡಿದೆ. ದಲಿತರೊಂದಿಗೆ ನಾವಿದ್ದೇವೆಂದು ಹೇಳುವ 14 ವರ್ಷದ ದಲಿತ ಬಾಲಕಿಯ ಹತ್ಯೆಗೆ ನ್ಯಾಯ ಕೊಟ್ಟಿಲ್ಲ, ಯಾಕೆಂದರೆ ಎಸ್ ಡಿಪಿಐ ನಾಯಿಗಳ ಸಂತತಿಯಿಂದ ಬಾಲಕಿಯ‌ ಹತ್ಯೆಯಾಗಿದೆ. ನಮ್ಮ ನಂಬಿಕೆಗಳಿಗೆ ಘಾಸಿ ಮಾಡಿದರೆ ನಾವು ಜಾಲತಾಣಗಳಲ್ಲಿ ಭಾವಚಿತ್ರ ವಿಕೃತಿ ಮಾಡುವುದಿಲ್ಲ, ಅಟ್ಟಾಡಿಸಿ ಹೊಡೆಯುತ್ತೇವೆ ಎಂದು ಹೇಳಿದರು.

ಹಿಂದು ನಾಯಕರ ವಿರುದ್ಧ ಜಾಲತಾಣದಲ್ಲಿ ಅವಹೇಳನ ಮಾಡಿರುವ ಬಗ್ಗೆ ಕೇಸು ಕೊಟ್ಟರೆ ಇನ್ನೂ ಕ್ರಮ ಆಗಿಲ್ಲ. ಪತ್ರಕರ್ತರ ಮೇಲೆ ಕೇಸು ಕೊಟ್ಟಾಗ ತಕ್ಷಣ ದಾಖಲಿಸುವ ಮೂಲಕ ಜಿಲ್ಲೆಯ ಎಸ್.ಪಿ. ಷಂಡತನದ ಕೆಲಸ ಮಾಡಿದ್ದಾರೆ.‌ ಜಾಲತಾಣದಲ್ಲಿ ಹಿಂದೂ ಮುಖಂಡರನ್ನು ಅವಹೇಳನ ಮಾಡಿದವರನ್ನು ವಾರದೊಳಗೆ ಬಂಧಿಸದಿದ್ದರೆ ಬರೆದುಕೊಡಿ, ನಾವೇ ನೋಡಿಕೊಳ್ಳುತ್ತೇವೆ ಎಂದು ಸವಾಲು ಹಾಕಿದ್ದಾರೆ.

- Advertisement -
spot_img

Latest News

error: Content is protected !!