- Advertisement -
- Advertisement -
ಮಂಗಳೂರು :ಮಂಗಳೂರು ನಗರ ಸಭೆಯ ಮಾಜಿ ಉಪಾಧ್ಯಕ್ಷೆ ಶಾರದಾ ಆಚಾರ್ಯ (89) ನಿಧನರಾಗಿದ್ದಾರೆ.ಸ್ಕೌಟ್ ಚಟುವಟಿಕೆಗಳಲ್ಲೂ ಸಕ್ರಿಯರಾಗಿದ್ದ ಇವರು ಜನಸಂಘದ ಕರ್ನಾಟಕ ಪ್ರಾಂತದ ಉಪಾಧ್ಯಕ್ಷರಾಗಿದ್ದ ಅವರು 3 ಅವಧಿಗಳ ಕಾಲ ಮಂಗಳೂರು ನಗರಸಭೆಯ ಸದಸ್ಯರಾಗಿದ್ದು ಮಂಗಳೂರಿಗೆ ಚಿರಪರಿಚಿತರಾಗಿದ್ದರು.
ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸೆರೆವಾಸ ಅನುಭವಿಸಿದ್ದ ಈ ಧೀಮಂತ ಮಹಿಳೆ 1978ರಲ್ಲಿ ನಡೆದ ವಿಧಾನ ಸಭೆಯ ಚುನಾವಣೆಯಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ಉತ್ತಮ ಸ್ಪರ್ಧೆ ಕೊಟ್ಟಿದ್ದರು.
- Advertisement -