Wednesday, June 3, 2026
Homeಕರಾವಳಿಶಾಲೆಗಳನ್ನು ಪ್ರಾರಂಭಿಸಲು ಅವಸರ ಮಾಡಬೇಡಿ: ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಒತ್ತಾಯ

ಶಾಲೆಗಳನ್ನು ಪ್ರಾರಂಭಿಸಲು ಅವಸರ ಮಾಡಬೇಡಿ: ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಒತ್ತಾಯ

- Advertisement -
- Advertisement -

ಪುತ್ತೂರು: ಕೊರೋನಾ ಸೋಂಕಿನಿಂದ ರಾಜ್ಯ ಸೇರಿದಂತೆ ಇಡೀ ದೇಶ ಜರ್ಜರಿತವಾಗಿದೆ. ಅದು ನಿಯಂತ್ರಣಕ್ಕೆ ಬಾರದೆ ಶಾಲೆಗಳನ್ನು ಆರಂಭಿಸಲು ಸರಕಾರ ಆತುರದ ನಿರ್ಧಾರ ಕೈಗೊಳ್ಳದೆ ಮಕ್ಕಳ ಹಿತದೃಷ್ಟಿಯಿಂದ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಂದ ಬಳಿಕವೇ ಶಾಲೆಗಳನ್ನು ಆರಂಭಿಸುವಂತಾಗಬೇಕು ಎಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು ಸರಕಾರಕ್ಕೆ ಒತ್ತಾಯಿಸಿದ್ದಾರೆ.

ಪುತ್ತೂರು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪದಾಧಿಕಾರಿಗಳ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು ಅವಸರದಿಂದ ಶಾಲೆಗಳನ್ನು ಆರಂಭಿಸಿದ್ದಲ್ಲಿ ಚಿಕ್ಕ-ಚಿಕ್ಕ ಮಕ್ಕಳಿಂದ ಅಂತರವನ್ನು ಕಾಯ್ದುಕೊಳ್ಳಲು ಸಾಧ್ಯವಾಗದು ಇದರಿಂದಾಗಿ ಅವರ ಭವಿಷ್ಯ ಮಂಕಾಗಲಿದೆ ಎಂದು ಹೆತ್ತವರು ದಿಗಿಲುಗೊಂಡಿದ್ದಾರೆ ಎಂದು ಹೇಳಿದರು.

ವೇದಿಕೆಯಲ್ಲಿ ಕೆಪಿಸಿಸಿ ಸದಸ್ಯ ಎಮ್. ಬಿ. ವಿಶ್ವನಾಥ ರೈ, ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಅಮಲಾ ರಾಮಚಂದ್ರ, ಯುವಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಆರ್ಷದ್ ದರ್ಬೆ, ಇಸಾಕ್ ಸಾಲ್ಮರ, ಸಂತೋಷ್ ರೈ ಚಿಲ್ಮೆತ್ತಾರು, ದಿನೇಶ್ ಪಿ. ವಿ., ಗಂಗಾಧರ ಶೆಟ್ಟಿ ಎಲಿಕ ಉಪಸ್ಥಿತರಿದ್ದರು.

- Advertisement -

Latest News

error: Content is protected !!