Monday, June 30, 2025
Homeತಾಜಾ ಸುದ್ದಿಕೊನೆಗೂ ತನ್ನ ಪ್ರೇಯಸಿ ಯಾರೆಂದು ಹೇಳಿದ ಮಹಾಭಾರತ ಅರ್ಜುನ ಖ್ಯಾತಿಯ ಈ ನಟ

ಕೊನೆಗೂ ತನ್ನ ಪ್ರೇಯಸಿ ಯಾರೆಂದು ಹೇಳಿದ ಮಹಾಭಾರತ ಅರ್ಜುನ ಖ್ಯಾತಿಯ ಈ ನಟ

spot_img
- Advertisement -
- Advertisement -

ಮುಂಬೈ: ಕನ್ನಡದಲ್ಲಿ ಹಿಂದಿ ಧಾರಾವಾಹಿಗಳು ಡಬ್ ಆಗಿ ಬಂದಮೇಲೆ ಈ ಧಾರಾವಾಹಿಗಳಿಗೆ ಸಕತ್ ರೆಸ್ಪಾನ್ಸ್ ಸಿಕ್ಕಿದೆ. ಹಲವು ಪಾತ್ರದಾರಿಗಳು ಜನರಿಗೆ ಇಷ್ಟವಾಗಿವೆ. ಶಾಹಿರ್ ಶೇಖ್.. ಹೀಗೆ ಅನ್ನೋಕ್ಕಿಂತ ‘ಅರ್ಜುನ’ ಅಂದತಕ್ಷಣ ಥಟ್ ಅಂತ ಕಣ್ಮುಂದೆ ಬರೋದೆ ಮಹಾಭಾರತ ಧಾರಾವಹಿಯ ಅರ್ಜುನ. ಸದ್ಯ ಕಿರುತೆರೆ ಮಹಾಬಾರತದಲ್ಲಿ ಅರ್ಜುನನಾಗಿ ಮಿಂಚಿರುವ ಶಾಹೀರ್ ಶೇಖ್ ನಟನೆ ಅಷ್ಟೇ ಅಲ್ದೇ ಲುಕ್ಸ್ ಗೂ ಅಷ್ಟೇ ಪ್ರಸಿದ್ಧಿ ಪಡೆದಿರುವ ನಟ.

ಯುವತಿಯರ ಹಾಟ್ ಫೇವರೇಟ್ ಆಗಿರುವ ಶಾಹೀರ್ ಇಂದು ತಮ್ಮ ಪ್ರೇಯಸಿಯನ್ನ ಅಧಿಕೃತವಾಗಿ ಪರಿಚಯಿಸುವ ಮೂಲಕ ಅಭಿಮಾನಿಗಳಿಗೆ ಶಾಕ್ನಿ ಡಿದ್ದಾರೆ.ಮಹಾಭಾರತದಲ್ಲಿನ ನಟಿಸಿದ ಅರ್ಜುನನ ಗರ್ಲ್ ಫ್ರೆಂಡ್ ಶಾಹೀರ್ ಪ್ರೇಯಸಿ ಯಾರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಅಲ್ಲದೇ ಸಾಕಷ್ಟು ನಟಿಯರ ಜೊತೆ ಶಾಹೀರ್ ಹೆಸರು ತಳಕುಹಾಕಿಕೊಂಡಿತ್ತು.

ಆದರೀಗ ಶಾಹೀರ್ ಗರ್ಲ್ ಫ್ರೆಂಡ್ ಪರಿಚಯಿಸಿ ಎಲ್ಲಾ ಗಾಸಿಪ್ ಗಳಿಗೆ ತೆರೆಎಳೆದಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಪ್ರೇಯಸಿ ಜೊತೆಗಿನ ಫೋಟೋ ಶೇರ್ ಮಾಡುವ ಮೂಲಕ ಅಧಿಕೃತವಾಗಿ ಪ್ರೀತಿ ವಿಚಾರವನ್ನ ಬಹಿರಂಗ ಪಡಿಸಿದ್ದಾರೆ. ಶಾಹೀರ್ ಪ್ರೇಯಸಿಯ ಹೆಸರು ರುಚಿಕಾ ಕಪೂರ್. ಸ್ಟುಡಿಯೋ ಕಾರ್ಯನಿರ್ವಾಹಕಿಯಾಗಿ ಕೆಲಸ ಮಾಡುತ್ತಿರುವ ರುಚಿಕಾ ಹಾಗೂ ಶಾಹೀರ್ ಇಬ್ಬರು ಕೆಲವು ಸಮಯದಿಂದ ಡೇಟಿಂಗ್ ಮಾಡುತ್ತಿದ್ದಾರೆ.

- Advertisement -
spot_img

Latest News

error: Content is protected !!