Sunday, June 7, 2026
Homeತಾಜಾ ಸುದ್ದಿರಿಜಿಸ್ಟರ್ ಮದುವೆ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಮಹಾಭಾರತ' ಧಾರಾವಾಹಿಯ ಅರ್ಜುನ

ರಿಜಿಸ್ಟರ್ ಮದುವೆ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಮಹಾಭಾರತ’ ಧಾರಾವಾಹಿಯ ಅರ್ಜುನ

- Advertisement -
- Advertisement -

ಮುಂಬೈ: ಹಿಂದಿಯ ಮಹಾಭಾರತ ಧಾರಾವಾಹಿಯ ಅರ್ಜುನ ಪಾತ್ರದ ಶಾಹೀರ್ ಶೇಖ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಸಿಂಪಲ್ ಆಗಿ ರಿಜಿಸ್ಟರ್ ಮ್ಯಾರೇಜ್ ಆಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಹಿಂದಿ ಕಿರುತೆರೆ ಲೋಕದ ಜನಪ್ರಿಯ ನಟ ಶಾಹೀರ್ ಶೇಖ್ ಬಹುಕಾಲದ ಗೆಳತಿ ರುಚಿಕಾ ಕಪೂರ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚಿಗಷ್ಟೆ ಶಾಹೀರ್ ಪ್ರೇಯಸಿ ರುಚಿಕಾ ಕಪೂರ್ ಅವರನ್ನು ಪರಿಚಯಿದ್ದರು. ಕೊರೊನಾ ವೈರಸ್ ಹಾವಳಿಯ ಪರಿಣಾಮ ಇಬ್ಬರು ಸರಳವಾಗಿ ರಿಜಿಸ್ಟರ್ ಮದುವೆ ಆಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

ಶಾಹೀರ್ ಪತ್ನಿರುಚಿಕಾ ಕಪೂರ್ ಅವರು ಏಕ್ತಾ ಕಪೂರ್ ಪ್ರೊಡಕ್ಷನ್ ಹೌಸ್‍ನಲ್ಲಿ ಕ್ರಿಯೇಟಿವ್ ಪ್ರೊಡ್ಯುಸರ್, ಎಕ್ಸಿಕ್ಯೂಟಿವ್ ವಾಯ್ಸ್ ಪ್ರೆಸಿಡೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಏಕ್ತಾ ಕಪೂರ್ ಅವರ ಬಹುಮುಖ್ಯವಾದ ಶೋಗಳಲ್ಲಿ ರುಚಿಕಾ ಕೆಲಸ ಮಾಡಿದ್ದಾರೆ. ಶಾಹೀರ್ ಶೇಖ್ ಹಾಗೂ ರುಚಿತಾ ಅನೇಕ ಪ್ರಾಜೆಕ್ಟ್ ಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ.

ಕೆಲ ದಿನಗಳ ಹಿಂದೆ ಈ ಜೋಡಿ ವಿವಾಹವಾಗಿದ್ದು, ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ. ಇತ್ತೀಚೆಗಷ್ಟೇ ಇಬ್ಬರೂ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದರು. 2021ರ ಜೂನ್ ತಿಂಗಳಲ್ಲಿ ಜಮ್ಮುವಿನಲ್ಲಿರುವ ಶಾಹೀರ್ ಅವರ ಮನೆಯಲ್ಲಿ ಸಾಂಪ್ರದಾಯಿಕವಾಗಿ ಇವರಿಬ್ಬರ ವಿವಾಹ ನಡೆಯಲಿದ್ದು, ಮುಂಬೈನ ರುಚಿಕಾ ಮನೆಯಲ್ಲಿ ಸಹ ಮದುವೆ ಶಾಸ್ತ್ರಗಳು ನಡೆಯಲಿವೆ. ಇದೀಗ ಸರಳವಾಗಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ.

- Advertisement -

Latest News

error: Content is protected !!