Sunday, September 13, 2026
Homeಕರಾವಳಿಪ್ರವೀಣ್ ನೆಟ್ಟಾರು ಹತ್ಯೆಗೆ ಕ್ಷಣಕ್ಕೊಂದು ಟ್ವಿಸ್ಟ್:  ಕೊಲೆಗೆ ಶಫೀಕ್ ಮನೆಯಲ್ಲಿ ರೆಡಿಯಾಗಿತ್ತು ಸ್ಕೆಚ್

ಪ್ರವೀಣ್ ನೆಟ್ಟಾರು ಹತ್ಯೆಗೆ ಕ್ಷಣಕ್ಕೊಂದು ಟ್ವಿಸ್ಟ್:  ಕೊಲೆಗೆ ಶಫೀಕ್ ಮನೆಯಲ್ಲಿ ರೆಡಿಯಾಗಿತ್ತು ಸ್ಕೆಚ್

- Advertisement -
- Advertisement -

ಸುಳ್ಯ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಕ್ಷಣಕ್ಕೊಂದು ಸುಳಿವು ಸಿಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ವಿಶೇಷ ಟೀಮ್ ಗಳನ್ನು ರಚನೆ ಮಾಡಲಾಗಿದ್ದು,ಕರ್ನಾಟಕ, ಕೇರಳದಲ್ಲಿ ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ.

ಈಗಾಗಲೇ ಆರೋಪಿಗಳನ್ನು ಕಸ್ಟಡಿಗೆ ಪಡೆದಿರುವ ಪೊಲೀಸರು ಗೌಪ್ಯ ಸ್ಥಳದಲ್ಲಿ ಅವರ ವಿಚಾರಣೆ ನಡೆಸುತ್ತಿದ್ದಾರೆ. ಇದೀಗ ಆರೋಪಿಗಳ ವಿಚಾರಣೆ ಮೇಲೆ ಮಹತ್ವದ ಸುಳಿವು ಲಭಿಸಿದೆ ಎನ್ನಲಾಗಿದೆ. ಇನ್ನೊಂದು ತಂಡ ಆರೋಪಿಗಳಿಂದ ಸತ್ಯ ಹೊರಹಾಕಿಸುವ ಪ್ರಯತ್ನದಲ್ಲಿದೆ. ಸದ್ಯ ಈಗ ಪೊಲೀಸರ ತನಿಖೆಯಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ಪೂರ್ವನಿಯೋಜಿತ ಕೃತ್ಯ ಎನ್ನುವುದು ದೃಢಪಟ್ಟಿದೆ. ಹಾಗೂ ಹತ್ಯೆಗೆ ಯಾವ ರೀತಿ ಸಂಚು ರೂಪಿಸಲಾಗಿತ್ತು ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ.

ಪ್ರವೀಣ್ ಹತ್ಯೆಗೂ ಮುನ್ನ ಹಂತಕರು ಸ್ಟ್ರೀಟ್ ಲೈಟ್ ಆಫ್ ಮಾಡಿ ಬಳಿಕ ಕೊಲೆ ಮಾಡಿದ್ದಾರೆ ಎಂಬ ಸತ್ಯ ಬಯಲಾಗಿದೆ. ಆರೋಪಿಗಳು ಪ್ರವೀಣ್ ಅಂಗಡಿಯಿಂದ 500 ಮೀಟರ್ ದೂರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದರು ಎಂಬುವುದು ಬಹಿರಂಗವಾಗಿದೆ. ಪ್ರವೀಣ್ ಹತ್ಯೆ ಕೇಸ್ನಲ್ಲಿ ಶಫೀಕ್, ಝಾಕೀರ್ ಪಾತ್ರವಿರುವುದು ದೃಢವಾಗಿರುವ ಹಿನ್ನೆಲೆ ಸರ್ಚ್ ವಾರಂಟ್ ಪಡೆದು ಶಫೀಕ್ ಮನೆಯಲ್ಲಿ ಪೊಲೀಸರು ಶೋಧಕ್ಕೆ ಮುಂದಾಗಿದ್ದಾರೆ.

ಬೆಳ್ಳಾರೆ ಮುಖ್ಯರಸ್ತೆಯಲ್ಲೇ ಶಫೀಕ್ ಬಾಡಿಗೆ ಮನೆಯಲ್ಲಿ ವಾಸವಿದ್ದ. ಇದೇ ಮನೆಯಲ್ಲಿ ಕುಳಿತು ಪ್ರವೀಣ್ ಹತ್ಯೆಗೆ ಪ್ಲ್ಯಾನ್ ರೂಪಿಸಲಾಗಿತ್ತು. ಈ ಮನೆ ಬೆಳ್ಳಾರೆ ಠಾಣೆಯಿಂದ 300 ಮೀಟರ್ ದೂರದಲ್ಲೇ ಇದೆ. ಹಾಗೂ ಪ್ರವೀಣ್ ಅಂಗಡಿಯಿಂದ 500 ಮೀಟರ್ ದೂರದಲ್ಲಿದೆ. ಇದೇ ಮನೆಯಲ್ಲಿ ಕುಳಿತು ಪ್ರವೀಣ್ ಚಲನವಲನ ಗಮನಿಸಿ ಕೊಲೆಗೆ ಹಂತಕರು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಪ್ರವೀಣ್ ಹತ್ಯೆಗೂ ಮುನ್ನ ಸ್ಟ್ರೀಟ್ ಲೈಟ್ ಆಫ್ ಮಾಡಲಾಗಿದೆ. ಕೊಲೆ ದಿನ ಆ ಏರಿಯಾದಲ್ಲಿ ಕರೆಂಟ್ ಇದ್ದರೂ ಪವರ್ ಕಟ್ ಆಗಿತ್ತು. ಪ್ರವೀಣ್ ಅಂಗಡಿಯ 500 ಮೀಟರ್ ಸುತ್ತಮುತ್ತಾ ಆರೋಪಿಗಳು ಪವರ್ ಕಟ್ ಮಾಡಿಸಿದ್ದರು. ನಂತರ ಪ್ರವೀಣ್ ಅಂಗಡಿ ಬಳಿ ತೆರಳಿ ಮರ್ಡರ್ ಮಾಡಿದ್ದಾರೆ. ಹಾಗಾಗಿ ಯಾವ ಸಿಸಿಟಿವಿ ಕ್ಯಾಮೆರಾದಲ್ಲೂ ಆರೋಪಿಗಳ ಚಹರೆ ಸಿಕ್ಕಿಲ್ಲ. ಕೊಲೆ ಬಳಿಕ ಕಾದು ಕುಳಿತಿದ್ದ ಶಫೀಕ್ ಝಾಕಿರ್, ಹಂತಕರನ್ನು ಕರೆದೊಯ್ದಿದ್ದರು.

- Advertisement -

Latest News

error: Content is protected !!