Sunday, April 28, 2024
Homeಕರಾವಳಿಮಂಗಳೂರು: ಹೆಂಚು ತೆಗೆದು ಬೆಡ್ ರೂಂ ಗೆ ನುಗ್ಗಿದ ಕಾಮುಕ; ಮಂಚದಡಿಯಲ್ಲಿ ಅಡಗಿ ಕುಳಿತು ಮಹಿಳೆಗೆ...

ಮಂಗಳೂರು: ಹೆಂಚು ತೆಗೆದು ಬೆಡ್ ರೂಂ ಗೆ ನುಗ್ಗಿದ ಕಾಮುಕ; ಮಂಚದಡಿಯಲ್ಲಿ ಅಡಗಿ ಕುಳಿತು ಮಹಿಳೆಗೆ ಲೈಂಗಿಕ ಕಿರುಕುಳ

spot_img
- Advertisement -
- Advertisement -

ಮಂಗಳೂರು: ಕಾಮುಕನೊಬ್ಬ ಹೆಂಚು ತೆಗೆದು ಬೆಡ್ ರೂಂ ಗೆ ನುಗ್ಗಿ ಮಂಚದಡಿಯಲ್ಲಿ ಅಡಗಿ ಕುಳಿತು ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಮಂಗಳೂರಿನ ಕೋಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಹರೇಕಳ ನಿವಾಸಿ ನೌಫಾಲ್ (38) ನನ್ನು ಬಂಧಿಸಲಾಗಿದೆ.

ನಿನ್ನೆ ರಾತ್ರಿ ಮನೆಯೊಂದರ ಹಂಚು ತೆಗೆದು ಮನೆಯ ಬೆಡ್ ರೂಂಗೆ ನುಗ್ಗಿದ ನೌಫಾಲ್ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಹೆಂಚು ತೆಗೆದು ಒಳಗೆ ನುಗ್ಗಿದ ನೌಫಾಲ್ ಮಂಚದ ಅಡಿಯಲ್ಲಿ ಮಲಗಿದ್ದ. ರಾತ್ರಿ 10 ರ ಸುಮಾರಿಗೆ ತನ್ನ ಮಕ್ಕಳಿಬ್ಬರ ಜೊತೆ ಮಹಿಳೆ ಮಲಗಿದ್ದರು.ರಾತ್ರಿ 12.10 ರ ಸುಮಾರಿಗೆ ಮಹಿಳೆಗೆ ಆರೋಪಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಮಹಿಳೆ ಕಿರುಚುತ್ತಾ ಲೈಟ್ ಹಾಕಿದಾಗ ಮೊಬೈಲ್ ಬಿಟ್ಟು ನೌಫಾಲ್ ಪರಾರಿಯಾಗಿದ್ದಾನೆ. ಮೊಬೈಲ್ ಆಧಾರದ ಮೇಲೆ ಬಂದಿದ್ದು ನೌಫಾಲ್ ಅಂತಾ ಗೊತ್ತಾಗಿದೆ. ಬಳಿಕ ಆತನನ್ನು ಬಂಧಿಸಲಾಗಿದೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -
spot_img

Latest News

error: Content is protected !!