Thursday, June 4, 2026
Homeಅಪರಾಧ3ರ ಹರೆಯದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ; ವ್ಯಕ್ತಿಯ ವಿರುದ್ಧ ದೂರು ದಾಖಲು

3ರ ಹರೆಯದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ; ವ್ಯಕ್ತಿಯ ವಿರುದ್ಧ ದೂರು ದಾಖಲು

- Advertisement -
- Advertisement -

ಪಣಂಬೂರು: ಇಲ್ಲಿನ ಬೆಂಗ್ರೆಯಲ್ಲಿ ಕೂಲಿ ಕಾರ್ಮಿಕಕರ 3ರ ಹರೆಯದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಮೇಲೆ ವ್ಯಕ್ತಿಯೊಬ್ಬರ ಮೇಲೆ ಎಫ್ ಐ ಆರ್ ದಾಖಲಾಗಿದೆ.

ಉತ್ತರ ಭಾರತದಿಂದ ಕೂಲಿ ಕೆಲಸಕ್ಕಾಗಿ ಪಣಂಬೂರಿನ ಬೆಂಗ್ರೆಗೆ ಬಂದಿದ್ದ ದಂಪತಿಗಳ 3ರ ಹರೆಯದ ಮಗುವನ್ನು ತಂದೆ ತಾಯಿ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಅಶೋಕ್ ಖಾರ್ವಿ(50) ಎನ್ನುವ ವ್ಯಕ್ತಿಯೋರ್ವ ಚಾಕಲೇಟ್ ನೀಡುವ ನೆಪದಲ್ಲಿ ಪುಸಲಾಯಿಸಿ ತನ್ನ ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ರವಿವಾರ ರಾತ್ರಿ ಮಗುವಿನ ಅಳುವಿನ ಶಬ್ದ ಕೇಳಿ ಮಗುವನ್ನು ಹುಡುಕಾಡಿದಾಗ ಪಕ್ಕದಲ್ಲೇ ವಾಸವಿರುವ ಅಶೋಕ್ ಖಾರ್ವಿ ಮನೆಯೊಳಗೆ ಮಗು ಪತ್ತೆಯಾಗಿದೆ.

ಈ ಘಟನೆ ಬಗ್ಗೆ ಪಣಂಬೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಇನ್ನು ಘಟನೆಗೆ ಸಂಬಂಧಪಟ್ಟಂತೆ ಆರೋಪಿಯ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿದ್ದು ಲೈಂಗಿಕ ದೌರ್ಜನ್ಯ ದೃಢ ಪಟ್ಟಲ್ಲಿ ಪೋಸ್ಕೋ ಕೇಸು ದಾಖಲಾಗುವ ಸಾಧ್ಯತೆಯಿದೆ.

- Advertisement -

Latest News

error: Content is protected !!