Monday, June 8, 2026
Homeಕರಾವಳಿಬಂಟ್ವಾಳ : ಬಿಲ್ಲವ ಸಮಾಜ ಸೇವಾ ಸಂಘ ಅಧ್ಯಕ್ಷರಾಗಿ ಸೇಸಪ್ಪ ಕೋಟ್ಯಾನ್ ಪುನರಾಯ್ಕೆ!

ಬಂಟ್ವಾಳ : ಬಿಲ್ಲವ ಸಮಾಜ ಸೇವಾ ಸಂಘ ಅಧ್ಯಕ್ಷರಾಗಿ ಸೇಸಪ್ಪ ಕೋಟ್ಯಾನ್ ಪುನರಾಯ್ಕೆ!

- Advertisement -
- Advertisement -

ಬಂಟ್ವಾಳ: ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ 25 ವರ್ಷಗಳಿಂದ ಸಂಘವನ್ನು ಮುನ್ನಡೆಸುತ್ತಿದ್ದ ಪಚ್ಚಿನಡ್ಕ ಸೇಸಪ್ಪ ಕೋಟ್ಯಾನ್ ಪುನರಾಯ್ಕೆ ಹೊಂದಿದ್ದಾರೆ.

ಭಾನುವಾರ ನಡೆದ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆಯ ಪದಾಧಿಕಾರಿಗಳ ಆಯ್ಕೆಯಲ್ಲಿ ಉಪಾಧ್ಯಕ್ಷರಾಗಿ ಮಹಾಬಲ ಬಂಗೇರ ಬಂಟ್ವಾಳ, ಪ್ರಧಾನ ಕಾರ್ಯದರ್ಶಿಯಾಗಿ ರಮೇಶ್ ತುಂಬೆ, ಕೋಶಾಧಿಕಾರಿಯಾಗಿ ಉಮೇಶ್ ಸುವರ್ಣ, ಜತೆ ಕಾರ್ಯದರ್ಶಿಯಾಗಿ ಆನಂದ ಸಾಲ್ಯಾನ್ ಶಂಭೂರು, ಲೆಕ್ಕ ಪರಿಶೋಧಕರಾಗಿ ಸತೀಶ್ ಬಿ.ಮಿತ್ತಬೈಲು ಆಯ್ಕೆ ಹೊಂದಿರುತ್ತಾರೆ.ಪದಾಧಿಕಾರಿಗಳ ಆಯ್ಕೆ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ನ್ಯಾಯವಾದಿ, ನೋಟರಿ ಚಂದ್ರಶೇಖರ ಪೂಜಾರಿ ಉಪಸ್ಥಿತರಿದ್ದರು. ಹೊಸ ಕಾರ್ಯಕಾರಿ ಸಮಿತಿ ಹಾಗೂ ಪದಾಧಿಕಾರಿಗಳ ಆಯ್ಕೆಯಲ್ಲಿ ಶ್ರೀನಿವಾಸ ಪೂಜಾರಿ ಮೆಲ್ಕಾರ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

- Advertisement -

Latest News

error: Content is protected !!