Friday, April 26, 2024
Homeತಾಜಾ ಸುದ್ದಿಸೀರಿಯಲ್ ಪ್ರಿಯರಿಗೆ ಇಲ್ಲಿದೆ ಶಾಕಿಂಗ್ ನ್ಯೂಸ್: ಶೀಘ್ರದಲ್ಲೇ ಪ್ರಸಾರ ನಿಲ್ಲಿಸಲಿವೆ ನಿಮ್ಮ ನೆಚ್ಚಿನ ಧಾರಾವಾಹಿಗಳು

ಸೀರಿಯಲ್ ಪ್ರಿಯರಿಗೆ ಇಲ್ಲಿದೆ ಶಾಕಿಂಗ್ ನ್ಯೂಸ್: ಶೀಘ್ರದಲ್ಲೇ ಪ್ರಸಾರ ನಿಲ್ಲಿಸಲಿವೆ ನಿಮ್ಮ ನೆಚ್ಚಿನ ಧಾರಾವಾಹಿಗಳು

spot_img
- Advertisement -
- Advertisement -

ಬೆಂಗಳೂರು: ಕೋವಿಡ್ ಈ ಹೆಸರು ಕೇಳಿದ್ರೆ ಸಾಕು. ಇದೀಗ ಜನ ಬೆಚ್ಚಿ ಬೀಳುವಂತಾಗಿದೆ. ಎಲ್ಲಾ ಕ್ಷೇತ್ರಗಳ ಮೇಲೂ ಈ ಮಹಾಮಾರಿ ಹೊಡೆತ ಕೊಟ್ಟಿದೆ. ಅದರಲ್ಲೂ ಮನೋರಂಜನಾ ಕ್ಷೇತ್ರಕ್ಕೆ ಕೋವಿಡ್ ನೀಡಿರುವ ಹೊಡೆತ ಬಹುದೊಡ್ಡದು. ಸಿನಿಮಾ ಪ್ರದರ್ಶನಕ್ಕೆ ಬ್ರೇಕ್ ಹಾಕುತ್ತಿದ್ದಂತೆ ಸ್ಯಾಂಡಲ್ ವುಡ್ ಮಂದಿ ಮಾತ್ರವಲ್ಲದೇ ಸಿನಿರಸಿಕರೂ ಕಂಗಲಾಗಿದ್ದರು.


ಅದರಲ್ಲೂ ಲಾಕ್ ಡೌನ್ ಘೋಷಣೆಯಾಗುತ್ತಿದ್ದಂತೆ ಜನ ಅಯ್ಯೋ ಮನೇಲಿದ್ದು ಏನಪ್ಪಾ ಮಾಡೋದು ಅಂತಾ ಯೋಚ್ನೆ ಮಾಡೋದಕ್ಕೆ ಶುರು ಮಾಡಿದ್ರು. ಇರ್ಲಿ ಗುರು ಮನೇಲಿ ಟಿವಿಲೇ ರಿಯಾಲಿಟಿ ಶೋ ನೋ, ಇಲ್ಲಾ ಧಾರಾವಾಹಿನೋ ನೋಡ್ಕೊಂಡು ಇದ್ರಾಯ್ತು ಗುರು ಅಂದ್ಕೊತ್ತಿದ್ದರು.ಆದ್ರೀಗ ಅಂತಹ ಯೋಚ್ನೆಗೂ ಬ್ರೇಕ್ ಬೀಳುತ್ತಾ ಆತಂಕ ಶುರುವಾಗಿದೆ.

ಅಷ್ಟಕ್ಕೂ ಆಗಿರೋದು ಏನಪ್ಪಾ ಅಂದ್ರೆ ಈ ಹಿಂದೆ ಲಾಕ್ ಡೌನ್ ವೇಳೆ ಸಿನಿಮಾ ಹಾಗೂ ಧಾರಾವಾಹಿ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿತ್ತು. ಹಾಗಾಗಿ ಮನೇಲೇ ಕೂತು ಧಾರಾವಾಹಿ ನೋಡ್ಕೊಂಡು ಸಮಯ ಕಳೆಯಬಹುದು ಅಂದುಕೊಂಡಿದ್ದ ಮಂದಿಗೆ ನಿರಾಸೆಯಾಗಿತ್ತು.ಅನೇಕ ಧಾರಾವಾಹಿಗಳು ಪ್ರಸಾರ ನಿಲ್ಲಿಸಿ ಮರುಪ್ರಸಾರವನ್ನು ಆರಂಭಿಸಿದ್ದವು. ಇದೀಗ ಮತ್ತೆ ಅದೇ ಆತಂಕ ಅಭಿಮಾನಿಗಳನ್ನು ಕಾಡೋದಕ್ಕೆ ಶುರುವಾಗಿದೆ.


ಕೊರೊನಾ ವ್ಯಾಪಕವಾಗಿ ಹರಡ್ತಾ ಇರೋದರಿಂದ ಚಿತ್ರೀಕರಣವನ್ನು ನಿಲ್ಲಿಸೋದಕ್ಕೆ ವಾಹಿನಿಗಳ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಕೆಲವು ಸೀರಿಯಲ್ ಗಳ ನಟ ನಟಯರಿಗೂ ಕೊರೊನಾ ಪಾಸಿಟಿವ್ ಆಗಿರೋದರಿಂದ ಇದೀಗ ಶೂಟಿಂಗ್ ನಡೆಸೋದು ಕೂಡ ಕಷ್ಟವಾಗುತ್ತಿದೆ.ಅದರಲ್ಲೂ ಸೀರಿಯಲ್ ನ ಪ್ರಮುಖ ಪಾತ್ರದಾರಿಗಳಿಗೆ ಕೊರೊನಾ ಪಾಸಿಟಿವ್ ಬಂದಿರೋದು ಧಾರಾವಾಹಿ ತಂಡಕ್ಕೆ ತಲೆ ನೋವು ತರಿಸಿದೆ. ಅದರಲ್ಲೂ ಕಲರ್ಸ್ ಕನ್ನಡವಾಹಿನಿಯಲ್ಲಿ ಪ್ರಸಾರವಾಗುವ ಗಿಣಿರಾಮ ಧಾರವಾಹಿಯ ಹಿರೋಯಿನ್ ನಯನಾ ಅವರಿಗೆ ಕೊರೊನಾ ಪಾಸಿಟಿವ್ ಬಂದು ಅವರು ಚಿತ್ರೀಕರಣದಲ್ಲಿ ಭಾಗಿಯಾಗುತ್ತಿಲ್ಲ.

ಸದ್ಯ ಚಿತ್ರೀಕರಣವಾಗಿರುವ ಎಪಿಸೋಡ್ ಗಳನ್ನು ಪ್ರಸಾರ ಮಾಡುತ್ತಿದ್ದಾರೆ. ಆದ್ರೆ ಅವರಿಗೆ ಪಾಸಿಟಿವ್ ಬಂದ ಬಳಿಕ ಚಿತ್ರೀಕರಣದಲ್ಲಿ ಭಾಗಿಯಾಗದೇ ಇರೋದರಿಂದ ಮತ್ತೆ ಹೊಸ ಎಪಿಸೋಡ್ ಪ್ರಸಾರ ಮಾಡೋದು ಕಷ್ಟವಾಗುತ್ತೆ. ಪ್ರಸಾರ ಮಾಡಬೇಕು ಅಂದ್ರೆ ಕಥೆಯಲ್ಲೂ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಲಾಗುತ್ತೆ. ಕಥೆಯಲ್ಲಿ ಬದಲಾವಣೆ ಮಾಡಿಕೊಂಡ್ರು ಕೊರೊನಾ ಆರ್ಭಟದಿಂದಾಗಿ ಚಿತ್ರೀಕರಣ ಮಾಡೋದಕ್ಕೂ ಸಮಸ್ಯೆಯಾಗುತ್ತಿದೆ. ಹಾಗಾಗಿ ಮೊದಲೇ ಎಪಿಸೋಡ್ ಬ್ಯಾಂಕ್ ಮಾಡಿರದ ಧಾರವಾಹಿಗಳ ಹೊಸ ಎಪಿಸೋಡ್ಗಳು ಇನ್ನು ಸದ್ಯಕ್ಕೆ ಪ್ರಸಾರವಾಗೋದಿಲ್ಲ. ಮತ್ತೆ ಈ ಹಿಂದೆ ಲಾಕ್ ಡೌನ್ ವೇಳೆ ಹಳೆ ಎಪಿಸೋಡ್ ಗಳನ್ನು ಪ್ರಸಾರ ಮಾಡಿದಂತೆ ಇದೀಗ ಮತ್ತೆ ಹಳೆ ಎಪಿಸೋಡ್ಗಳೇ ಪ್ರಸಾರವಾಗಲಿವೆ ಎನ್ನಲಾಗುತ್ತಿದೆ.

ಇನ್ನು ಕೊರೊನಾ ಲಾಕ್ಡೌನ್ 14 ದಿನಗಳ ಬಳಿಕವೂ ಇದೇ ಪರಿಸ್ಥಿತಿ ಇದ್ದರೆ ಮತ್ತೆ ಮುಂದುವರೆಯುವ ಸಾಧ್ಯತೆ ಎನ್ನಲಾಗುತ್ತಿದ್ದು ಒಂದು ವೇಳೆ ಇದು ಕಂಟಿನ್ಯೂ ಆದ್ರೆ ಮತ್ತೆ ಹೊಸ ಎಪಿಸೋಡ್ ಗಳ ಪ್ರಸಾರ ಮಾಡೋದಕ್ಕೆ ಸಾಧ್ಯವಾಗೋದಿಲ್ಲ. ಅಲ್ಲಿವರೆಗೂ ಹಳೆಯ ಎಪಿಸೋಡ್ ಗಳನ್ನೇ ಪ್ರಸಾರ ಮಾಡಬೇಕಾಗುತ್ತೆ. ಹಾಗಾಗಿ ಇದೀಗ ಧಾರಾವಾಹಿ ಅಭಿಮಾನಿಗಳಿಗೆ ಭಾರೀ ಆಘಾತ ಎದುರಾಗಿದೆ.

ಸದ್ಯ ಮನೆಯಿಂದ ಹೊರಗೆ ಬರೋದಕ್ಕೆ ಆಗುತ್ತಿಲ್ಲ ಮನೆಯಲ್ಲಿ ಕೂತು ಧಾರಾವಾಹಿ, ರಿಯಾಲಿಟಿ ಶೋ ನೋಡ್ಕೊಂಡು ಆರಾಮಾಗಿರೋಣ ಅಂದ್ರೆ ಅದು ಕೂಡ ಸಾಧ್ಯವಾಗುತ್ತಿಲ್ಲ. ಅಂತಾ ಬೇಸರಿಸಿಕೊಳ್ಳುತ್ತಿದ್ದಾರ. ಅದರಲ್ಲೂ ಸಂಜೆ ಆದ್ರೆ ಸಾಕು ಟಿವಿ ಮುಂದೆ ಹಾಜರಾಗುತ್ತಿದ್ದ ಹೆಣ್ಣು ಮಕ್ಕಳಂತೂ ಈ ಕೊರೊನಾ ಮಹಾಮಾರಿ ಯಾವಾಗ ತೊಲಗುತ್ತಪ್ಪಾ ಅಂತಾ ಹಿಡಿಶಾಪ ಹಾಕುತ್ತಾ ಕೂತಿದ್ದಾರೆ. ಅಲ್ಲಿ ತನಕ ಹಳೆ ಎಪಿಸೋಡ್ ಗಳನ್ನೇ ಮತ್ತೆ ನೋಡ್ಕೊಂಡು ಸಮಯ ಕಳೆಯಬೇಕಷ್ಟೇ…

- Advertisement -
spot_img

Latest News

error: Content is protected !!