Thursday, May 16, 2024
Homeಚಿಕ್ಕಮಗಳೂರುಚಿಕ್ಕಮಗಳೂರು; ನಿಧಿಗಾಗಿ ನಿರ್ಜನ ಪ್ರದೇಶದಲ್ಲಿ ಗುಂಡಿ ತೋಡಿದ ದುಷ್ಕರ್ಮಿಗಳು

ಚಿಕ್ಕಮಗಳೂರು; ನಿಧಿಗಾಗಿ ನಿರ್ಜನ ಪ್ರದೇಶದಲ್ಲಿ ಗುಂಡಿ ತೋಡಿದ ದುಷ್ಕರ್ಮಿಗಳು

spot_img
- Advertisement -
- Advertisement -

ಚಿಕ್ಕಮಗಳೂರು; ನಿಧಿಗಾಗಿ ನಿರ್ಜನ ಪ್ರದೇಶದಲ್ಲಿ ದುಷ್ಕರ್ಮಿಗಳು ಗುಂಡಿ ತೋಡಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ತಾಲೂಕಿನ ಆಣೂರು ಸಮೀಪದ ಕೆಸರಿಕೆ‌ ಗ್ರಾಮದ ನಿರ್ಜನ ಪ್ರದೇಶದಲ್ಲಿ ನಿಧಿಗಾಗಿ 15 ಅಡಿ ಅಗಲ, 25 ಅಡಿ ಆಳದ ಗುಂಡಿ ತೋಡಿದ್ದಾರೆ ದುಷ್ಕರ್ಮಿಗಳು. ಗ್ರಾಮದಲ್ಲಿ ನಿಧಿಗಾಗಿ ಶೋಧ ಹಿನ್ನೆಲೆ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

ನಿಧಿಗಾಗಿ ಮಧ್ಯರಾತ್ರಿಯಲ್ಲಿ ಪೂಜೆ ಕೂಡ ಮಾಡಿದ್ದಾರೆ ಕಿಡಿಗೇಡಿಗಳು. ಇನ್ನು ನಿರ್ಜನ ಪ್ರದೇಶದಲ್ಲಿ ಬೆಳಕು ಕಂಡು ಸ್ಥಳಕ್ಕೆ ಗ್ರಾಮಸ್ಥರು ತೆರಳಿದ್ದಾರೆ. ಇನ್ನು ಗ್ರಾಮಸ್ಥರು ಸ್ಥಳಕ್ಕೆ ಬರುತ್ತಿದ್ದಂತೆ ಕಿಡಿಗೇಡಿಗಳು ಎಸ್ಕೇಪ್ ಆಗಿದ್ದಾರೆ. ನಿಧಿಗಾಗಿ ಶೋಧ ನಡೆಸಿದ ಸ್ಥಳದಲ್ಲಿ ಅರಿಶಿಣ-ಕುಂಕುಮ, ಕುಂಬಳಕಾಯಿ, ಕೋಳಿ, ಕಾಯಿ, ಸೇರಿ ವಿವಿಧ ವಸ್ತುಗಳು ಪತ್ತೆಯಾಗಿವೆ. ಉಡುಪಿ ನೋಂದಣಿ ಸಂಖ್ಯೆ ಇರುವ ಎರಡು ಕಾರಿನಲ್ಲಿ ಬಂದಿದ್ದ ತಂಡ ನಿಧಿಗಾಗಿ  ಶೋಧ ನಡೆಸಿದೆ ಎನ್ನಲಾಗಿದೆ.ಈ ಬಗ್ಗೆ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!