ಮಂಗಳೂರು: ಜಿಲ್ಲಾಧಿಕಾರಿಯಾದರೂ ಓರ್ವ ತಾಯಿಯಾಗಿ ನಿತ್ಯವೂ ಮಗುವಿಗೆ ಒಂದಿಷ್ಟು ಸಮಯ ಮೀಸಲಿರಿಸಿ ಲಾಲನೆ-ಪಾಲನೆ ಮಾಡುತ್ತಿದ್ದವರು ಇಂದು ಸ್ವತಃ ಕ್ವಾರೆಂಟೈನ್ಗೆ ಒಳಗಾಗಿ ಮಗುವಿನಿಂದ ದೂರ ಉಳಿದಿದ್ದಾರೆ ಡಿಸಿ ಸಿಂಧೂ ಬಿ. ರೂಪೇಶ್.
ಹೌದು, ಡಿಸಿ ಬಂಗಲೆಯಲ್ಲಿಯೇ ಇರುವ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ತಮ್ಮ ಮಗುವಿನಿಂದ 21 ದಿನಗಳ ಕಾಲ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಡಿಸಿ ಅವರ ತಂದೆ-ತಾಯಿಯ ಸುಪರ್ದಿಗೆ ಬಿಟ್ಟಿರುವ ಮಗುವನ್ನು ಕ್ವಾರೆಂಟೈನ್ಗೊಳಗಾದ ಬಳಿಕ ಎಂತಹ ಸಂದರ್ಭದಲ್ಲಿಯೂ ಹತ್ತಿರಕ್ಕೆ ಸೇರಿಸಿಕೊಂಡಿಲ್ಲ. ಮಗು ರೆಚ್ಚೆ ಹಿಡಿದರೂ, ಅತ್ತು ರಂಪಾಟ ಮಾಡಿದರೂ ಡಿಸಿ ಮಗುವಿನ ಹಿತದೃಷ್ಟಿಯಿಂದ ಯಾವುದೇ ಕಾರಣಕ್ಕೂ ಹತ್ತಿರಕ್ಕೆ ಸೇರಿಸದೆ ಮಗುವನ್ನು ಸಮಾಧಾನ ಪಡಿಸುತ್ತಿದ್ದರಂತೆ.
ಜಿಲ್ಲಾಧಿಕಾರಿಯಾಗಿ ಎಲ್ಲಾ ಕಡೆಗಳಲ್ಲಿ ಓಡಾಟ ನಡೆಸಬೇಕಾಗುತ್ತದೆ. ಈ ಸಂದರ್ಭ ಸೋಂಕು ತಗುಲುವ ಭಯ ಇರೋದರಿಂದ ಈ ರೀತಿಯಲ್ಲಿ ಮುಂಜಾಗ್ರತೆ ಮಾಡಿಕೊಂಡಿದ್ದಾರೆ. ಇದೀಗ ಲಾಕ್ಡೌನ್ ಅವಧಿ ಇನ್ನಷ್ಟು ವಿಸ್ತರಣೆಯಾದ ಕಾರಣ ಮಗುವನ್ನು ಶನಿವಾರ ಬೆಂಗಳೂರಿಗೆ ತಮ್ಮ ಪತಿ ಇರುವಲ್ಲಿಗೆ ಕಳುಹಿಸಿಕೊಟ್ಟಿದ್ದಾರಂತೆ. ಒಟ್ಟಿನಲ್ಲಿ ಈ ರೀತಿಯ ನಿರ್ಧಾರದ ಮೂಲಕ ದ.ಕ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಎಲ್ಲರಿಗೂ ಮಾದರಿಯಾಗಿದ್ದಾರೆ.
ಮಗುವನ್ನು ದೂರವಿರಿಸಿ ಸೆಲ್ಫ್ ಕ್ವಾರಂಟೈನ್ ಆದ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್!
- Advertisement -
- Advertisement -
- Advertisement -