- Advertisement -
- Advertisement -
ಮಂಗಳೂರು: ಕೋವಿಡ್-19 ದೃಢಪಟ್ಟ ಜಿಲ್ಲೆಯ ಪುತ್ತೂರಿನ 49 ವರ್ಷದ ವ್ಯಕ್ತಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಮಾ. 21ರಂದು ದುಬೈನಿಂದ ಪುತ್ತೂರಿಗೆ ಬಂದಿದ್ದ ಇವರಿಗೆ ಏಪ್ರಿಲ್ 1ರಂದು ಕೋವಿಡ್-19 ದೃಢಪಟ್ಟಿತ್ತು. ಏಪ್ರಿಲ್ 12 ಮತ್ತು 13ರಂದು ಇವರ ಗಂಟಲು ದ್ರವದ ಮಾದರಿಯನ್ನು ಮರು ಪರೀಕ್ಷೆಗೆ ಕಳುಹಿಸಲಾಗಿದ್ದು, ಅದು ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನು ಗುಣಮುಖ ಎಂದು ಘೋಷಿಸಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 12 ಕೊರೊನಾ ಪ್ರಕರಣ ದೃಢಪಟ್ಟಿದ್ದು, ಇದರಲ್ಲಿ 9 ಮಂದಿ ಗುಣಮುಖರಾಗಿ ಇನ್ನು ಮೂರು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
- Advertisement -