Saturday, April 27, 2024
Homeಕರಾವಳಿಮಂಗಳೂರಿನಲ್ಲಿ ಸೆಕ್ಯೂರಿಟಿ ಗಾರ್ಡ್ ಗೊಲಿದ ಅದೃಷ್ಟ ಲಕ್ಷ್ಮೀ: ಒಂದು ಕೋಟಿ ಲಾಟರಿ ಗೆದ್ದ ಮೊಯ್ದಿನ್...

ಮಂಗಳೂರಿನಲ್ಲಿ ಸೆಕ್ಯೂರಿಟಿ ಗಾರ್ಡ್ ಗೊಲಿದ ಅದೃಷ್ಟ ಲಕ್ಷ್ಮೀ: ಒಂದು ಕೋಟಿ ಲಾಟರಿ ಗೆದ್ದ ಮೊಯ್ದಿನ್ ಕುಟ್ಟಿ

spot_img
- Advertisement -
- Advertisement -

ಮಂಗಳೂರು:  ಇಲ್ಲಿನ ತೊಕ್ಕೊಟ್ಟು ಜಂಕ್ಷನ್‍ನಲ್ಲಿರುವ ಸ್ಮಾರ್ಟ್ ಪ್ಲಾನೆಟ್ ವಸತಿ ಸಂಕೀರ್ಣದಲ್ಲಿ ಕಳೆದ ಮೂರು ವರ್ಷಗಳಿಂದ ಸೆಕ್ಯೂರಿಟಿ  ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಕೇರಳ ಕ್ಯಾಲಿಕಟ್ ಮೂಲದ ಮೊಯ್ದಿನ್ ಕುಟ್ಟಿ(65) ಅವರಿಗೆ ಅದೃಷ್ಟ ಲಕ್ಷ್ಮೀ ಒಲದಿದ್ದಾಳೆ. ಕೇರಳ ರಾಜ್ಯ ಭಾಗ್ಯಮಿತ್ರ ಲಾಟರಿಯಲ್ಲಿ ಒಂದು ಕೋಟಿ ರೂ. ಪ್ರಥಮ ಬಹುಮಾನ ಲಭಿಸಿದೆ.

ಲಾಟರಿ ತೆಗೆಯುವ ಹವ್ಯಾಸವಿದ್ದ ಮೊಯ್ದಿನ್ ಕುಟ್ಟಿ ಉಪ್ಪಳದಲ್ಲಿ ಖರೀದಿಸಿದ ಎ.4ರಂದು ಡ್ರಾ ಆದ ಲಾಟರಿಯಲ್ಲಿ ಇವರು ಖರೀದಿಸಿದ ಬಿ.ಜೆ. 134048 ಸಂಖ್ಯೆಗೆ ಒಂದು ಕೋಟಿ ರೂ. ಪ್ರಥಮ ಬಹುಮಾನ ಬಂದಿದ್ದು ಲಾಟರಿಯ ಪ್ರಥಮ ಬಹುಮಾನದಲ್ಲಿ ಐದು ಮಂದಿ ಕೋಟಿ ವಿಜೇತರಲ್ಲಿ ಮೊಯ್ದಿನ್ ಕುಟ್ಟಿ ಒಬ್ಬರಾಗಿದ್ದಾರೆ.

ಮೊಯದ ಇನ್ ಕುಟ್ಟಿ ಅವರು ಸ್ಮಾರ್ಟ್‍ಸಿಟಿಯಲ್ಲಿ ಒಮೆಗಾ ಟೈಲರ್ ಅಂಗಡಿಯ ಮಾಲಕ ರವಿ ಅವರಿಂದ ಐನೂರು ರೂ. ಸಾಲ ಪಡೆದು ಉಪ್ಪಳಕ್ಕೆ ತೆರಳಿ ಲಾಟರಿ ಖರೀದಿಸಿದ್ದರು. ಕಳೆದ ಹಲವು ದಶಕಗಳಿಂದ ಲಾಟರಿ ಖರೀದಿಸುವ ಗೀಳು ಇಟ್ಟುಕೊಂಡಿದ್ದ ಕುಟ್ಟಿಗೆ ಈ ಬಾರಿ ಭಾಗ್ಯಮಿತ್ರ ಅದೃಷ್ಟ ನೀಡಿದೆ.

ವಿದೇಶದಲ್ಲಿ ಉದ್ಯೋಗದಲ್ಲಿದ್ದ ಮೊಯ್ದಿನ್ ಕುಟ್ಟಿ ಅವರಿಗೆ 1988ರ ಸುಮಾರಿಗೆ ದುಬೈ ಮೂಲದ ಲಾಟರಿಯಲ್ಲೂ ಒಂದು ಕೋಟಿ ಬಹುಮಾನ ಪಡೆದಿದ್ದೆ ಎನ್ನುವ ಕುಟ್ಟಿ ಭಾರತದ ಕರೆನ್ಸಿಯ ಪ್ರಕಾರ 10 ಕೋಟಿ ರೂ. ಈ ಗೆದ್ದ ಲಾಟರಿಯ ಮೌಲ್ಯವಾಗಿದ್ದು, ಈ ಹಣದಿಂದ ಜಾಗ ಖರೀದಿಸಿ ಮನೆ ಕಟ್ಟಿದ್ದರಂತೆ.

ಲಾಟರಿಯಲ್ಲಿ ಕೋಟಿ ಪಡೆಯುತ್ತಿದ್ದಂತೆ ಮೊಯ್ದಿನ್ ಕುಟ್ಟಿ ಅವರನ್ನು ಕಳೆದೆರಡು ದಿನಗಳಿಂದ ವಿಚಾರಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಲಾಟರಿಯನ್ನು ಸಂಬಂಧಿತ ಏಜೆನ್ಸಿಯ ಮೂಲಕ ಲಾಟರಿ ನಡೆಸುವ ಇಲಾಖೆಗೆ ಹಸ್ತಾಂತರಿಸಿದ್ದು, ಬಹುಮಾನ ಪಡೆದ ಲಾಟರಿಯ ಝೆರಾಕ್ಸ್ ಪ್ರತಿ ಕೈಯಲ್ಲಿಟ್ಟುಕೊಂಡಿದ್ದಾರೆ.

- Advertisement -
spot_img

Latest News

error: Content is protected !!