Sunday, June 7, 2026
Homeಕರಾವಳಿಮಂಗಳೂರು; 8ನೇ ತರಗತಿ ಬಾಲಕ ನೇಣಿಗೆ ಶರಣು

ಮಂಗಳೂರು; 8ನೇ ತರಗತಿ ಬಾಲಕ ನೇಣಿಗೆ ಶರಣು

- Advertisement -
- Advertisement -

ಮಂಗಳೂರು: ಶಾಲಾ ಬಾಲಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ  ಸುರತ್ಕಲ್‌ ಸಮೀಪದ ಕೃಷ್ಣಾಪುರದಲ್ಲಿ ನಡೆದಿದೆ. ಇಲ್ಲಿನ ಖಾಸಗಿ ಶಾಲಾ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಕಾಟಿಪಳ್ಳದ ಹರ್ಷಿತ್‌ (13) ಮೃತ ವಿದ್ಯಾರ್ಥಿ. ಹರ್ಷಿತ್ ಪ್ರತೀ ವಾರದ ಕೊನೆಯಲ್ಲಿ ಸೂರಿಂಜೆಯಲ್ಲಿರುವ ತನ್ನ ಅಜ್ಜನ ಮನೆಗೆ ಹೋಗುತ್ತಿದ್ದ. ಅದರಂತೆ ಈ ಬಾರಿಯೂ ಶಾಲೆ ಮುಗಿಸಿ ಶನಿವಾರ ತೆರಳಿದ್ದ ಹರ್ಷಿತ್‌ ಭಾನುವಾರ ಮುಂಜಾನೆ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಅನಿರೀಕ್ಷಿತವಾಗಿ ಯಾವುದೋ ಕಾರಣಕ್ಕೆ ಮನನೊಂದು ಈ ರೀತಿ ಮಾಡಿರಬಹುದು ಎಂದು ಬಾಲಕನ ತಂದೆ ಸುಧಾಕರ ದೇವಾಡಿಗ ಸುರತ್ಕಲ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -

Latest News

error: Content is protected !!