Friday, June 5, 2026
Homeಕೊಡಗುಆಗಸ್ಟ್ 26 ರಂದು ನಿಗದಿಯಾಗಿದ್ದ ಕಾಂಗ್ರೆಸ್ ಮಡಿಕೇರಿ ಚಲೋ ಮುಂದೂಡಿಕೆ

ಆಗಸ್ಟ್ 26 ರಂದು ನಿಗದಿಯಾಗಿದ್ದ ಕಾಂಗ್ರೆಸ್ ಮಡಿಕೇರಿ ಚಲೋ ಮುಂದೂಡಿಕೆ

- Advertisement -
- Advertisement -

ಬೆಂಗಳೂರು: ಕೊಡಗು ಜಿಲ್ಲಾ ಪ್ರವಾಸದ ವೇಳೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಪ್ರಕರಣ ಸಂಬಂಧ ಆಗಸ್ಟ್ 26 ರಂದು ನಿಗದಿಯಾಗಿದ್ದ ಕಾಂಗ್ರೆಸ್ ಮಡಿಕೇರಿ ಚಲೋ ಮುಂದೂಡಿಕೆಯಾಗಿದೆ.

ನಾಳೆಯಿಂದ ನಾಲ್ಕು ದಿನಗಳ ಕಾಲ ಕೊಡಗು ಜಿಲ್ಲೆಯಲ್ಲಿ ನಿಷೇದಾಜ್ಞೆ ವಿಧಿಸಿ ಕೊಡಗು ಡಿಸಿ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಮಡಿಕೇರಿ ಚಲೋ ಮುಂದೂಡಲ್ಪಟ್ಟಿದೆ.

ಕಾಂಗ್ರೆಸ್ ಮಡಿಕೇರಿ ಚಲೋಗೆ ಪ್ರತಿಯಾಗಿ ಬಿಜೆಪಿ ಆಗಸ್ಟ್ 26 ರಂದು ಮಡಿಕೇರಿಯಲ್ಲಿ ಜನಜಾಗೃತಿ ಸಮಾವೇಶ ಹಮ್ಮಿಕೊಂಡಿತ್ತು.

ರಾಜಕೀಯ ಸಮಾವೇಶಗಳಿಗೆ ಅನುಮತಿ ಕೊಡದಂತೆ ಸಂಘ-ಸಂಸ್ಥೆಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಆಗಸ್ಟ್ 27 ರ ಸಂಜೆಯವರೆಗೆ ನಿಷೇದಾಜ್ಞೆ ವಿಧಿಸಿ‌ ಕೊಡಗು ಡಿಸಿ ಡಾ. ಬಿ.ಸಿ. ಸತೀಶ್ ಆದೇಶ ಹೊರಡಿಸಿದ್ದರು.

- Advertisement -

Latest News

error: Content is protected !!