Thursday, April 25, 2024
Homeಕರಾವಳಿಸವಣಾಲು: ಶ್ರೀ ದುರ್ಗಾಕಾಳಿಕಾಂಬ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವ ಇಂದು ಸಂಪನ್ನ

ಸವಣಾಲು: ಶ್ರೀ ದುರ್ಗಾಕಾಳಿಕಾಂಬ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವ ಇಂದು ಸಂಪನ್ನ

spot_img
- Advertisement -
- Advertisement -

ಬೆಳ್ತಂಗಡಿ: ಸವಣಾಲು ಕಾಳಿಬೆಟ್ಟ ದ ಶ್ರೀ ದುರ್ಗಾಕಾಳಿಕಾಂಬ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ.

ಫೆಬ್ರವರಿ 25 ರಂದು ಪ್ರಾರಂಭವಾದ ಜಾತ್ರಾ ಮಹೋತ್ಸವದ ಅಂಗವಾಗಿ ಅದೇ ದಿನ ಪ್ರಾರ್ಥನೆ, ಗಣಹೋಮ, ಧ್ವಜಾರೋಹಣ,ನಾಗ ಸನ್ನಿಧಿಯಲ್ಲಿ ಸರ್ಪ ಸೂಕ್ತ ಹೋಮ, ಮಧ್ಯಾಹ್ನ ವಿಶೇಷ ಪೂಜೆ, ಅನ್ನಸಂತರ್ಪಣೆ, ರಾತ್ರಿ ಕಾಳಿಗುಡಿಯಲ್ಲಿ ಹೂವಿನ ಪೂಜೆ, ರಂಗಪೂಜೆ, ಅಷ್ಟಾವಧಾನ ಸೇವೆ ಹಾಗೂ ವಿಶೇಷ ಪೂಜೆ, ಅನ್ನಸಂತರ್ಪಣೆ ನೆರವೇರಿತು. ರಾತ್ರಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಶ್ರೀ ಗಾಯತ್ರಿ ಮಹಾತ್ಮೇ ಯಕ್ಷಗಾನ ಜರುಗಿತು.

ಫೆ.26ರಂದು (ನಿನ್ನೆ) ಕಾಳಿಗುಡಿಯಲ್ಲಿ ಚಂಡಿಕಾಹೋಮ ಮತ್ತು ಅದರ ಪೂರ್ಣಾಹುತಿ, ಯಾಗ ಶಾಲೆಯಲ್ಲಿ ವಿಶೇಷ ಹೋಮಾದಿ ಹವನಗಳು, ದೇವರ ಬಲಿ, ಮೂಲದುರ್ಗಾ ಗುಡಿಯಲ್ಲಿ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಮೂಲದುರ್ಗಾ ಗುಡಿಯಲ್ಲಿ ಹೂವಿನ ಪೂಜೆ, ರಂಗಪೂಜೆ, ದೇವರ ಬಲಿ ಹಾಗೂ ವಸಂತ ಮಂಟಪದಲ್ಲಿ ಶ್ರೀ ದೇವಿಗೆ ಅಷ್ಟಾವಧಾನ ಸೇವೆ, ಅನ್ನಸಂತರ್ಪಣೆ ನಡೆಯಿತು.

ಜಾತ್ರೆಯ ಕೊನೆಯ ದಿನವಾದ ಇಂದು ಬೆಳಗ್ಗೆ ತುಲಾಭಾರ ಸೇವೆ, ದೇವರ ಬಲಿ, ಓಕುಳಿ, ದುರ್ಗಾ ಹೋಮ ಪೂರ್ಣಾಹುತಿ ಹಾಗೂ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆಯೊಂದಿಗೆ ವಾರ್ಷಿಕ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.

- Advertisement -
spot_img

Latest News

error: Content is protected !!