Friday, June 5, 2026
HomeWorldಸೌದಿ ಅರೇಬಿಯಾದಲ್ಲಿ ಕೋವಿಡ್ ನಿರ್ಬಂಧಗಳು ಇನ್ನಷ್ಟು ಸಡಿಲ, ಪ್ರಯಾಣಿಕರಿಗೆ ಸಿಹಿ ಸುದ್ದಿ

ಸೌದಿ ಅರೇಬಿಯಾದಲ್ಲಿ ಕೋವಿಡ್ ನಿರ್ಬಂಧಗಳು ಇನ್ನಷ್ಟು ಸಡಿಲ, ಪ್ರಯಾಣಿಕರಿಗೆ ಸಿಹಿ ಸುದ್ದಿ

- Advertisement -
- Advertisement -

ದೇಶದಲ್ಲಿ ಕೊರೋನಾ ಹಾವಳಿ ಕಡಿಮೆಯಾಗಿತ್ತಿರುವುದರಿಂದ ಸೌದಿ ಅರೇಬಿಯಾ ಕೋವಿಡ್ -19 ವಿರುದ್ಧ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಹಾಕುವುದಾಗಿ ಘೋಷಿಸಿದೆ.

ಸಾಮಾಜಿಕ ಅಂತರವನ್ನು ರದ್ದುಗೊಳಿಸಲಾಗುವುದು ಎಂದು ಆಂತರಿಕ ಸಚಿವಾಲಯ ನಿರ್ಧರಿಸಿದೆ ಆದರೆ ಜನರು ಮಾಸ್ಕ್ ಗಳನ್ನು ಧರಿಸಬೇಕು ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ನೀಡಿದೆ.

ಇದಲ್ಲದೆ, ಸೌದಿ ಅರೇಬಿಯಾಕ್ಕೆ ಬರುವ ಪ್ರಯಾಣಿಕರು ಇನ್ನು ಮುಂದೆ ಪಿಸಿಆರ್ ಅಥವಾ ರಾಪಿಡ್ ಟೆಸ್ಟ್ ರಿಪೋರ್ಟ್ ಒದಗಿಸುವ ಅಗತ್ಯವಿಲ್ಲ ಮತ್ತು ಆಗಮನದ ನಂತರ ಕಡ್ಡಾಯವಾಗಿ ಕೋವಿಡ್ -19 ಕ್ವಾರಂಟೈನ್‌ಗೆ ಒಳಗಾಗುವ ಅಗತ್ಯವಿಲ್ಲ ಎಂದು ಸಚಿವಾಲಯ ತಿಳಿಸಿದೆ.

2020 ರ ಆರಂಭದಲ್ಲಿ ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ, ಸೌದಿ ಅರೇಬಿಯಾದಲ್ಲಿ ಒಟ್ಟು 747,119 ಕೋವಿಡ್ -19 ಪ್ರಕರಣಗಳು ಮತ್ತು 9,006 ಸಾವುಗಳು ದಾಖಲಾಗಿವೆ.

- Advertisement -

Latest News

error: Content is protected !!