Tuesday, July 1, 2025
Homeಕರಾವಳಿಉಡುಪಿಕರಾವಳಿಯಲ್ಲಿ ಮತ್ತೆ ಸದ್ದು ಮಾಡುತ್ತಿದೆ ನಿಷೇಧಿತ 'ತುರಾಯಾ' ಸ್ಯಾಟಲೈಟ್ ಫೋನ್ ?

ಕರಾವಳಿಯಲ್ಲಿ ಮತ್ತೆ ಸದ್ದು ಮಾಡುತ್ತಿದೆ ನಿಷೇಧಿತ ‘ತುರಾಯಾ’ ಸ್ಯಾಟಲೈಟ್ ಫೋನ್ ?

spot_img
- Advertisement -
- Advertisement -

ಮಂಗಳೂರು: ಭಯೋತ್ಪಾದಕ ಸಂಘಟನೆಗಳು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಅರಣ್ಯಗಳಲ್ಲಿ ತಮ್ಮ ಜಾಲವನ್ನ ವಿಸ್ತರಣೆ ಮಾಡಿಕೊಳ್ಳುತ್ತಿರುವ ಅನುಮಾನ ಮತ್ತೆ ದಟ್ಟವಾಗ್ತಿದೆ. ಇದಕ್ಕೆ ಪುರಾವೆ ಎಂಬಂತೆ ಜುಲೈ ಮೊದಲ ವಾರದಲ್ಲಿ ಧರ್ಮಸ್ಥಳದ ಸಮೀಪದ ಅರಣ್ಯದಲ್ಲಿ ಮತ್ತು ಉಡುಪಿಯ ಕಾರ್ಕಳದ ಅಭಯಾರಣ್ಯದಲ್ಲಿ ನಿಷೇಧಿತ ಸ್ಯಾಟಲೈಟ್​ ಫೋನ್​ಗಳು ಆಕ್ಟಿವ್ ಆಗಿದೆ.

ಆ ಭಾಗಗಳಲ್ಲಿ ಆಗಾಗ ಸಾಟಲೈಟ್​ ಫೋನ್ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತವೆ ಎಂದು ಗುಪ್ತಚರ ಸಂಸ್ಥೆ ಮಾಹಿತಿ ನೀಡಿತ್ತು. ಇದೀಗ ಮತ್ತೆ ಎರಡು ಸ್ಯಾಟಲೈಟ್​ ಕರೆಗಳನ್ನ ರಾ ಏಜೆನ್ಸಿ ಪತ್ತೆ ಮಾಡಿದೆ ಅನ್ನೋ ಮಾಹಿತಿ ತಿಳಿದು ಬಂದಿದೆ.

ಕೋರಿಯಾ ದೇಶದ ತುರಾಯಾ ಬ್ರಾಂಡ್‌ನ ಸೆಟೆಲೈಟ್ ಫೋನ್‌ ಮತ್ತೆ ಆಯಕ್ಟಿವ್ ಆಗಿದ್ದು, ಧರ್ಮಸ್ಥಳದ ಅರಣ್ಯ ಪ್ರದೇಶ ಹಾಗೂ ಕಾರ್ಕಳದ ಬಜಗೋಳಿಯಲ್ಲಿ ಲೊಕೇಷನ್ ಟ್ರೇಸ್ ಆಗಿದೆ. ಕಳೆದ 6 ದಿನಗಳಲ್ಲಿ 2 ಬಾರಿ ಸ್ಯಾಟಲೈಟ್ ಫೋನ್ ಸಂಪರ್ಕವನ್ನ ಸಾಧಿಸುವ ಪ್ರಯತ್ನ ನಡೆದಿದೆ. ಈ ಸಂಬಂಧ ಗುಪ್ತಚರ ಹಾಗೂ ಆಂತರಿಕ ಭದ್ರತಾ ಇಲಾಖೆಯ ಅಧಿಕಾರಿಗಳು ತಮ್ಮ ತನಿಖೆಯನ್ನ ಮುಂದುವರಿಸಿವೆ.

2019 ರಲ್ಲಿ ಬೆಳ್ತಂಗಡಿ ತಾಲೂಕಿನ ಗೋವಿಂದೂರಿನಲ್ಲಿ ಇಂತಹ ಘಟನೆ ನಡೆದಿತ್ತು. ಇಲ್ಲಿಗೆ ಅಧಿಕಾರಿಗಳು ಬಂದು ತನಿಖೆ ನಡೆಸಿ ಹೋಗಿದ್ದರು.

ರಾಜ್ಯ ಕೊರೊನಾ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಹೀಗಾಗಿ ಪೊಲೀಸ್ ಅಧಿಕಾರಿಗಳೂ ಸೇರಿದಂತೆ ಎಲ್ಲಾ ಅಧಿಕಾರಿ ವರ್ಗಗಳು ಕೊರೊನಾ ನಿಯಂತ್ರಣಕ್ಕೆ ಹೆಚ್ಚು ಒತ್ತು ನೀಡುತ್ತಿವೆ. ಇದರ ಮಧ್ಯೆ ಕರಾವಳಿ ಭಾಗದಲ್ಲಿ ಸಮಾಜಘಾತುಕ ಶಕ್ತಿಗಳು ಸದ್ದಿಲ್ಲದೇ ಹುಟ್ಟಿಕೊಳ್ಳುತ್ತಿದೆಯಾ ಅನ್ನೋ ಪ್ರಶ್ನೆ ಶುರುವಾಗಿದೆ.

ಮುಂಬೈ ದಾಳಿಯಲ್ಲೂ ಬಳಕೆಯಾಗಿದ್ದ ಫೋನ್
2008 ರ ಮುಂಬೈ ದಾಳಿ ವೇಳೆ ಭಯೋತ್ಪಾದಕರು ‘ತುರಾಯಾ’ ಸ್ಯಾಟಲೈಟ್ ಫೋನ್ ಬಳಸಿದ್ದರು. ಈ ದಾಳಿ ನಂತರ ಭಾರತದಾದ್ಯಂತ ‘ತುರಾಯಾ’ ಸ್ಯಾಟಲೈಟ್ ಫೋನ್ ಗಳನ್ನು ನಿಷೇಧ ಮಾಡಲಾಗಿದೆ.

- Advertisement -
spot_img

Latest News

error: Content is protected !!