Saturday, April 27, 2024
Homeಅಪರಾಧಬೆಳ್ತಂಗಡಿ: ಸಾಟಲೈಟ್ ಕರೆ ಮಾಡಿದ ಸ್ಥಳ ಪತ್ತೆಹಚ್ಚಿ ತನಿಖೆ ನಡೆಸಿದ ಐಎಸ್ ಡಿ ಅಧಿಕಾರಿಗಳು!

ಬೆಳ್ತಂಗಡಿ: ಸಾಟಲೈಟ್ ಕರೆ ಮಾಡಿದ ಸ್ಥಳ ಪತ್ತೆಹಚ್ಚಿ ತನಿಖೆ ನಡೆಸಿದ ಐಎಸ್ ಡಿ ಅಧಿಕಾರಿಗಳು!

spot_img
- Advertisement -
- Advertisement -

ಬೆಳ್ತಂಗಡಿ : ಕಳೆದ ವರ್ಷದಿಂದ ಭಾರಿ ಸುದ್ದಿಯಾಗುತ್ತಿರುವ ನಿಷೇಧಿತ ಸಾಟಲೈಟ್(ತುರಾಯ) ಫೋನ್ ಬಳಕೆ ಈಗ ಮತ್ತೆ ಸುದ್ದಿಯಲ್ಲಿದೆ.

ದಕ್ಷಿಣ ಕನ್ನಡ ಜಿಲ್ಲೆ, ಉತ್ತರ ಕನ್ನಡ , ಚಿಕ್ಕಮಗಳೂರು ಕಡೆಗಳಲ್ಲಿ ಕಳೆದ ವಾರ ಸಾಟಲೈಟ್ ಫೋನ್ ಕರೆ ಸಂಪರ್ಕ ಸಾಧಿಸಿರುವ ಬಗ್ಗೆ ರಾ ಏಜೆನ್ಸಿ ರಾಜ್ಯದ ( ಐಎಸ್ ಡಿ)ಅಂತರಿಕ ವಿಭಾಗಕ್ಕೆ ತನಿಖೆ ನಡೆಸಲು ಆದೇಶಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಬೀಜದಡಿ ಎಂಬ ಪ್ರದೇಶದಲ್ಲಿ ಸಾಟಲೈಟ್ ಫೋನ್ ಕರೆ ಸಂಪರ್ಕ ಸಾಧಿಸಿದ ಬಗ್ಗೆ ರಾ ಏಜೆನ್ಸಿ ಗೆ ಲೋಕೆಷನ್ ಸಿಕ್ಕಿದ್ದು ಅದನ್ನು ರಾಜ್ಯದ ( ಐಎಸ್ ಡಿ)ಅಂತರಿಕ ವಿಭಾಗಕ್ಕೆ ಕಳುಹಿಸಿದ್ದು ಅದರಂತೆ ಮಂಗಳೂರು ಅಂತರಿಕ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಬಂದು ತನಿಖೆ ನಡೆಸಿ ತೆರಳಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮ ಬೀಜದಡಿ ಪ್ರದೇಶದಲ್ಲಿ ಖಾಸಗಿ ವ್ಯಕ್ತಿಯೊಬ್ಬರಿಗೆ ಸಂಬಂಧಪಟ್ಟ ಜಾಗದಲ್ಲಿ ಲೋಕೆಷನ್ ಟ್ರೇಸ್ ಆಗಿದ್ದು, ಆ ಜಾಗದ ಮಾಲಿಕರು ಪುಂಜಾಲಕಟ್ಟೆಯಲ್ಲಿ ವಾಸವಾಗಿದ್ದಾರೆ. ಇಲ್ಲಿ ಜಾಗ ಮಾತ್ರ ಇದ್ದು ಯಾರು ವಾಸವಿಲ್ಲ ಎಂಬ ಮಾಹಿತಿ ಮಂಗಳೂರು ಅಂತರಿಕ ವಿಭಾಗದ ಇನ್ಸ್ಪೆಕ್ಟರ್ ಮಂಜುಳಾ ಮತ್ತು ತಂಡದ ಅಧಿಕಾರಿಗಳು ಬಂದು ಕಲೆ ಹಾಕಿದ್ದಾರೆ. ಜೊತೆಗೆ ಸುತ್ತಮುತ್ತಲಿನ ಮನೆ ಮಂದಿಯನ್ನು ವಿಚಾರಿಸಿ ತೆರಳಿದ್ದಾರೆ. ನಂತರ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಕೃಷ್ಣಕಾಂತ್ ಮತ್ತು ಸಿಬ್ಬಂದಿಗಳು ತೆರಳಿ ಮಾಹಿತಿ ಕಲೆ ಹಾಕಿದ್ದಾರೆ.

ಈ ಸಾಟಲೈಟ್ ಕರೆ ಬಗ್ಗೆ ರಾ ಏಜೆನ್ಸಿ ಗೆ ಮಾತ್ರ ಮಾಹಿತಿ ಕಲೆ ಹಾಕಲು ಸಾಧ್ಯವಾಗುವುದು, ಅಂತರಿಕ ವಿಚಾರವಾಗಿರುವುದರಿಂದ ರಾಜ್ಯದ ಅಂತರಿಕ ವಿಭಾಗ ಮತ್ತು ರಾಜ್ಯದ ಗುಪ್ತಚರ ಇಲಾಖೆ ಜೊತೆ ಮಾತ್ರ ಮಾಹಿತಿ ಹಂಚಿಕೊಳ್ಳುತ್ತಾರೆ. ಅದಲ್ಲದೆ ಪೊಲೀಸ್ ಇಲಾಖೆಯಲ್ಲಿ ಇದರ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಳ್ಳುವುದಿಲ್ಲ ರಾ ಏಜೆನ್ಸಿ .

ಬೆಳ್ತಂಗಡಿ ತಾಲೂಕಿನ ಹಲವು ಕಡೆ 2020 ಮತ್ತು 2021 ರ ನಡುವೆ ಐದಕ್ಕೂ ಅಧಿಕ ಭಾರಿ ಸಾಟಲೈಟ್ ಕರೆ ಸಂಪರ್ಕ ಸಾಧಿಸಿದ್ದು ಈ ವರೆಗೂ ಇದರ ಮೂಲ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.

- Advertisement -
spot_img

Latest News

error: Content is protected !!