Wednesday, May 1, 2024
Homeತಾಜಾ ಸುದ್ದಿಶುರುವಾಯ್ತು ಡ್ರಗ್ಸ್ ರಾಣಿಯರ ಹೊಸ ಕಿರಿಕ್ : ಹೊಸ ಡ್ರಾಮಾಗೆ ಜೈಲಾಧಿಕಾರಿಗಳೇ ಸುಸ್ತು

ಶುರುವಾಯ್ತು ಡ್ರಗ್ಸ್ ರಾಣಿಯರ ಹೊಸ ಕಿರಿಕ್ : ಹೊಸ ಡ್ರಾಮಾಗೆ ಜೈಲಾಧಿಕಾರಿಗಳೇ ಸುಸ್ತು

spot_img
- Advertisement -
- Advertisement -

ಬೆಂಗಳೂರು: ಡ್ರಗ್ಸ್​ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ  ಸೇರಿರುವ ನಟಿ ಸಂಜನಾ ಹಾಗೂ ರಾಗಿಣಿ ದಿನಕ್ಕೊಂದು ಡ್ರಾಮಾ ಮಾಡುತ್ತಲೇ ಇದ್ದಾರೆ. ಐಷಾರಾಮಿ ಜೀವನ ನಡೆಸುತ್ತಿದ್ದ ಈ ನಟಿಯರು ಜೈಲಿನಲ್ಲಿ  ಮೊದಲ ದಿನದಿಂದಲೇ ಒಂದೊಂದು ರೀತಿಯ ಕಿರಿಕ್​ ಮಾಡುತ್ತಲೇ ಇದ್ದಾರೆ.

ಇದೆಲ್ಲದರ ನಡುವೆ ಇದೀಗ ರಾಗಿಣಿಗೆ ತನ್ನ ತೂಕದ ಬಗ್ಗೆ ಚಿಂತೆಯಾಗಿದೆಯಂತೆ. ಡಯಟ್​ ಫುಡ್​ ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ ತನ್ನ ತೂಕವೆಲ್ಲಿ ಜಾಸ್ತಿಯಾಗಿ ಬಿಡುತ್ತೋ ಎನ್ನುವ ಕಾರಣದಿಂದ ಜೈಲಿನಲ್ಲಿ ರಂಪಾಟ ಮಾಡುತ್ತಿದ್ದಾರೆ ಎನ್ನಲಾಗಿದೆ. ಜೈಲೂಟ ಅಡ್ಜೆಸ್ಟ್ ಆಗುತ್ತಿಲ್ಲ ಎಂದು ಈ ಇಬ್ಬರು ನಟಿಯರೂ ಹಿಂದಿನಿಂದಲೂ ಹೇಳುತ್ತಲೇ ಬಂದಿದ್ದಾರೆ.

ಇದೀಗ ರಾಗಿಣಿ ತಮಗೆ, ಸೌತ್​ ಇಂಡಿಯನ್​ ಊಟ ಬೇಡ, ಅದರಿಂದ ತೂಕ​ ಹೆಚ್ಚಾಗುತ್ತದೆ, ಆದ್ದರಿಂದ ನಾರ್ತ್​ ಇಂಡಿಯನ್​ ಊಟ ಕೊಡಿ ಎಂದು ಕೇಳುತ್ತಿದ್ದಾರಂತೆ. ಪ್ರತಿದಿನ ಅನ್ನ ತಿನ್ನುವುದರಿಂದ ತೂಕ ಹೆಚ್ಚಾಗುತ್ತಿದೆ. ಆದ್ದರಿಂದ ಚಪಾತಿ ಬೇಕಿದೆ. ಈ ಕಾರಣದಿಂದ ನಾರ್ತ್​ ಇಂಡಿಯನ್​ ಊಟ ಕೊಡಿ ಎಂದು ಹೇಳುತ್ತಿದ್ದಾರಂತೆ.

ಇದು ರಾಗಿಣಿಯ ವಿಷಯವಾದರೆ, ಸಂಜನಾಗೆ ಇದೀಗ ಅಮ್ಮನ ನೆನಪು ಜೋರಾಗಿ ಕಾಡಲು ಶುರುವಾಗಿದೆಯಂತೆ. ನನಗೆ ಅಮ್ಮನನ್ನು ನೋಡಬೇಕು ಎನ್ನಿಸುತ್ತಿದೆ, ಅವರ ಜತೆ ಮಾತನಾಡಬೇಕಿದೆ. ಆದ್ದರಿಂದ ಫೋನ್​ ಮಾಡಲು ಅವಕಾಶ ಕೊಡಿ ಎಂದು ಕೇಳಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.ಜೈಲಿನಲ್ಲಿ ಫೋನ್​ ಮಾಡಲು ಅವಕಾಶವಿದೆ. ಆದರೆ ಕೈದಿಗಳು ಸರತಿಯಲ್ಲಿ ನಿಂತು ತಮ್ಮ ಪಾಳಿ ಬರುವವರೆಗೆ ಕಾದು ನಂತರ ಕಾಲ್​ ಮಾಡಬೇಕು. ಇದು ಸಂಜನಾರಿಗೆ ತಲೆನೋವಾಗಿದೆ. ನನಗೆ ಇದೆಂಥ ಸ್ಥಿತಿ ಬಂತು, ಅಮ್ಮನಿಗೆ ಕಾಲ್​ ಮಾಡಲಿಕ್ಕೂ ಕ್ಯೂನಲ್ಲಿ ನಿಲ್ಲಬೇಕಾಗಿದೆ, ಇದೆಲ್ಲಾ ನನಗೆ ಆಗಲ್ಲ, ನಾನು ಬೇಕಾದಾಗಲೆಲ್ಲಾ ಕರೆ ಮಾಡಲಿಕ್ಕೆ ಅವಕಾಶ ಕೊಡಿ, ಅಮ್ಮನನ್ನು ನೋಡಬೇಕು ಎನ್ನಿಸುತ್ತಿದೆ ಎಂದು ಹೇಳುತ್ತಿರುವುದಾಗಿ ಮೂಲಗಳು ತಿಳಿಸಿವೆ.

- Advertisement -
spot_img

Latest News

error: Content is protected !!