Monday, June 29, 2026
Homeತಾಜಾ ಸುದ್ದಿಆಧಿಕೃತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿರುವ ಸಂಜನಾ: ಈಕೆಯ ಈಗಿನ ಹೆಸರು ಏನು ಗೊತ್ತೆ?

ಆಧಿಕೃತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿರುವ ಸಂಜನಾ: ಈಕೆಯ ಈಗಿನ ಹೆಸರು ಏನು ಗೊತ್ತೆ?

- Advertisement -
- Advertisement -

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆಯಲ್ಲಿ ಬಂಧಿತಳಾಗಿರುವ ನಟಿ ಸಂಜನಾ ಕುರಿತ ಶಾಕಿಂಗ್ ಸುದ್ದಿಯೊಂದು ಹೊರ ಬಿದ್ದಿದೆ.

ಸಿಸಿಬಿಯಿಂದ ವಿಚಾರಣೆಗೆ ನೋಟಿಸ್ ಬರುವ ಮೊದಲು ತನಗೆ ಮದುವೆಯೇ ಆಗಿಲ್ಲ ಅಂತ ಮಾದ್ಯಮದ ಮುಂದೆ ಅತ್ತು ಗೋಗರೆದಿದ್ದ ಸಂಜನಾ, ನಂತರ ಸಿಸಿಬಿ ವಿಚಾರಣೆ ವೇಳೆ ವೈದ್ಯ ಅಝೀಝ್ ಪಾಶಾ ಮದುವೆಯಾಗಿರುವ ವಿಚಾರ ಇತ್ತೀಚೆಗೆ ಬಹಿರಂಗೊಂಡಿತ್ತು. ಇಷ್ಟಲ್ಲದೇ ಈಕೆ ಇಸ್ಲಾಂ ಧರ್ಮಕ್ಕೆ ಮತಾಂತರ ಗೊಂಡ ದಾಖಲೆ ಕೂಡ ಸಿಕ್ಕಿದೆ.

ಸಂಜನಾ ಎರಡು ವರ್ಷಗಳ ಹಿಂದೆಯೇ ಅಂದರೆ 2018ರ ಆಕ್ಟೊಬರ್ ತಿಂಗಳಿನಲ್ಲಿ ಬೆಂಗಳೂರಿನ ಟ್ಯಾನರಿ ರಸ್ತೆಯಲ್ಲಿರುವ ದಾರುಲ್ ಉಲೂಮ್ ಶಾಹ್ ವಲ್ಲಿಉಲ್ಲಾ ಮಸೀದಿಯಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಮತ್ತು ಮತಾಂತರಗೊಳ್ಳಲು ಮಾಡಿದ ರಿಜಿಸ್ಟ್ರೇಷನ್ ಈಗ ಭಾರಿ ಸದ್ದು ಮಾಡುತ್ತಿದೆ.

ಅರ್ಚನಾ ಮನೋಹರ್ ಗಲ್ರಾಣಿ ಆಗಿದ್ದ ಸಂಜನಾ ಚಿತ್ರ ರಂಗಕ್ಕೆ ಎಂಟ್ರಿ ಕೊಟ್ಟ ನಂತರ ಸಂಜನಾ ಗಲ್ರಾಣಿ ಆಗಿ ಹೆಸರು ಬದಲಾಯಿಸಿಕೊಂಡಿದ್ದರು. ಇದೀಗ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಬಳಿಕ ತನ್ನ ಹೆಸರನ್ನು ಮಾಹೀರಾ ಆಗಿ ಬದಲಾಗಿದ್ದಾರೆ. ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಳ್ಳಲು ಯಾರು ಒತ್ತಡ ಹಾಕಿಲ್ಲ, ಸ್ವಯಂ ಇಚ್ಚೆಯಿಂದ ಇಸ್ಲಾಂಗೆ ಮತಾಂತರವಾಗಿರುವುದಾಗಿ ದಾಖಲೆಯಲ್ಲಿ ಬರೆಯಲಾಗಿದೆ.

- Advertisement -

Latest News

error: Content is protected !!